ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸಿ ನಂತರ ಟಿಕ್‌ಟಾಕ್ ಕ್ವೀನ್ ನಿವೇದಿತಾ ಗೌಡ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋಗಳಿಗೆ ಸಹಿ ಮಾಡುತ್ತಿದ್ದಾರೆ.
ಸದ್ಯ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಸೀಸನ್ 1ರಲ್ಲಿ ಸ್ಪರ್ಧಿಸಿ ಫಸ್ಟ್ ರನ್ನರ್ ಟ್ರೋಫಿ ಕೂಡ ಪಡೆದುಕೊಂಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ನಿವೇದಿತಾ ಗೌಡ (Niveditha Gowda) ಹಸಿರು ಬಣ್ಣದ ಸೀರೆ ಧರಿಸಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ನಿವಿ ಈ ಲುಕ್‌ನಲ್ಲಿ ನೋಡಲು ನೀವು ಸ್ವಲ್ಪ ಸಪ್ತಮಿ ಗೌರ ರೀತಿ ಕಾಣಿಸುತ್ತಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಕೆಲವರು ಕಾಂತಾರ 2 ತಂಡ ಸೇರುವಂತೆ ಸಲಹೆ ಕೊಟ್ಟಿದ್ದಾರೆ.
ಈ ವೀಕೆಂಡ್ ಪ್ರಸಾರವಾಗಲಿರುವ ಎಪಿಸೋಡ್‌ಗೆ ನಿವೇದಿತಾ ಈ ರೀತಿ ರೆಡಿಯಾಗಿರುವುದು ಎಂದು ರಿಲೀಸ್ ಆಗಿರುವ ಪ್ರೋಮೋದಿಂದ ಗೊತ್ತಾಗಿದೆ.
ಗಿಚ್ಚಿ ಗಿಲಿಗಿಲಿ 2 ರಿಯಾಲಿಟಿ ಶೋ ಜೊತೆಗೆ ಯುಟ್ಯೂಬ್ ಚಾನೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ ನಿವೇದಿತಾ ಗೌಡ. ಹೀಗಾಗಿ ಸದಾ ಬ್ಯುಸಿಯಾಗಿರುತ್ತಾರೆ.