Ismart Jodi ರಿಯಾಲಿಟಿ ಶೋ ಕಿರೀಟ ಗೆದ್ದ ಪುನೀತಾ- ಶ್ರೀರಾಮ್; ಕೈ ಸೇರಿತ್ತು 7 ಲಕ್ಷ!

Published : Sep 15, 2022, 10:15 AM ISTUpdated : Sep 15, 2022, 10:23 AM IST

 ಯಶಸ್ವಿಯಾಗಿ ಇಸ್ಮಾರ್ಟ್‌ ಜೋಡಿ ಸೀಸನ್ 1 ಮುಗಿಸಿದ ಗೋಲ್ಡನ್ ಸ್ಟಾರ್. ವಿನ್ನರ್ ಟ್ರೋಫಿ ಪಡೆದ ಆರ್‌ಜೆ ಜೋಡಿ.... 

PREV
17
Ismart Jodi ರಿಯಾಲಿಟಿ ಶೋ ಕಿರೀಟ ಗೆದ್ದ ಪುನೀತಾ- ಶ್ರೀರಾಮ್; ಕೈ ಸೇರಿತ್ತು 7 ಲಕ್ಷ!

ಗೋಲ್ಡನ್ ಸ್ಟಾರ್ (Ganesh) ಗಣೇಶ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಇಸ್ಮಾರ್ಟ್ ಜೋಡಿ (Ismart Jodi) ರಿಯಾಲಿಟಿ ಶೋ ಅಂತ್ಯವಾಗಿದೆ. ವಿನ್ನರ್‌ಗಳ ಕೈ ಸೇರಿತ್ತು ದೊಡ್ಡ ಮೊತ್ತ.

27

 ಹೌದು! ಆರ್‌ಜೆ ಪುನೀತಾ ಮತ್ತು ಆರ್‌ಜೆ ಶ್ರೀರಾಮ್‌ ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋ ಸೀಸನ್ 1ನ ವಿನ್ನರ್‌ಗಳಾಗಿದ್ದಾರೆ. ಈ ಮೂಲಕ 7 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ.

37

ರೇಶ್ಮೆ ಸೀರೆ ಮತ್ತು ಪಂಚೆ ಇರುವ ಇಸ್ಮಾರ್ಟ್‌ ಜೋಡಿ ಟ್ರೋಫಿ, 7 ಲಕ್ಷ ಹಣದ ಚೆಕ್ ಮತ್ತು ಇಬ್ಬರ ಹೆಜ್ಜೆ ಗುರುತು. ಫೋಟೋಗಳನ್ನು ಪುನೀತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

47

ಎರಡನೇ ಸ್ಥಾನವನ್ನು ಸ್ವಪ್ನಾ ಮತ್ತು ದೀಕ್ಷಿತ್ ಪಡೆದುಕೊಂಡಿದ್ದಾರೆ. ಇವರಿಗೆ ಮೂರು ಲಕ್ಷ ರೂಪಾಯಿ ಗೆದಿದ್ದಾರೆ. ಪಿಂಕ್ ಅಂಡ್ ಗೋಲ್ಡ್‌ ಬಣ್ಣದ ಲುಕ್‌ನಲ್ಲಿ ಪಿನಾಲೆ ದಿನ ಮಿಂಚಿದ್ದಾರೆ.

57

 'ನಾವು ವಿನ್ನರ್ ಅನ್ನೋದನ್ನು ನಂಬಲು ಆಗುತ್ತಿಲ್ಲ. ತುಂಬಾ ಖುಷಿಯಾಗುತ್ತಿದೆ. ನಮಗೆ ಇದು ಗ್ರೇಟ್ ಫೀಲಿಂಗ್. ನಮಗೆ ಅವಕಾಶ ಕೊಟ್ಟ ಸ್ಟಾರ್ ಸುವರ್ಣ ಮತ್ತು ಪ್ರತಿಯೊಬ್ಬ ತಂತ್ರಜ್ಞರಿಗೂ ಧನ್ಯವಾದಗಳು' ಎಂದು ಪುನೀತಾ ವೇದಿಕೆ ಮೇಲೆ ಮಾತನಾಡಿದ್ದಾರೆ.

67

ಆರ್‌ಜೆ ಪುನೀತ್ ಈ ಹಿಂದೆ ಪುತ್ರಿ ಆರ್ಯಾ ಜೊತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.

77

ಪುನೀತಾ ಮತ್ತು ಶ್ರೀರಾಮ್ ಲವ್ಲಿ ಕಪಲ್. ಸಖತ್ ಕಾಮಿಡಿ ಮಾಡ್ಕೊಂಡು ಜೋವಿಯಲ್ ಅಗಿ ಸಮಯ ಕಳೆಯುತ್ತಿದ್ದರು. ಅಲ್ಲದೆ ಪುನೀತಾ ಮತ್ತು ಗಣೇಶ್ ಕಾಂಬಿನೇಷನ್ ಹಿಟ್ ಆಗಿತ್ತು.

Read more Photos on
click me!

Recommended Stories