ಸಣ್ಣಗಿದ್ದೆ ಎಂದು ಸ್ಕೂಲಲ್ಲಿ ಹ್ಯಾಂಗರ್‌ ಎನ್ನುತ್ತಿದ್ದರು: Body Shamming ಬಗ್ಗೆ ತೇಜಸ್ವಿ ಮಾತು

First Published | Sep 13, 2022, 4:23 PM IST

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಬಿಗ್ ಬಾಸ್ ವಿನ್ನರ್. ಸಣ್ಣಗಿದ್ದರೂ ತಪ್ಪು ದಪ್ಪಗಿದ್ದರೂ ತಪ್ಪು ಯಾಕೆ?

 ಬಿಗ್ ಬಾಸ್ ಸೀಸನ್ 15 ವಿನ್ನರ್ ತೇಜಸ್ವಿ ಪ್ರಕಾಶ್ ಸದ್ಯ ಏಕ್ತಾ ಕಪೂರ್ ನಿರ್ದೇಶನ ಮಾಡುತ್ತಿರುವ ನಾಗಿಣಿ 6 ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. iDiva ಸಂದರ್ಶನದಲ್ಲಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.

ಸ್ಕೂಲ್‌ನಲ್ಲಿ ಹೇಗೆ ಸ್ನೇಹಿತರು ಬಾಡಿ ಶೇಮಿಂಗ್ ಮಾಡುತ್ತಿದ್ದರು ಹ್ಯಾಂಗರ್ ಎಂದು ಕರೆಯುವುದಲ್ಲದೆ ಗಾಳಿಯಲ್ಲಿ ಹಾರಿ ಹೋಗುತ್ತೀಯಾ ಎಂದು ಯಾಕೆ ರೇಗಿಸುತ್ತಿದ್ದರು ಎಂದು ಹಂಚಿಕೊಂಡಿದ್ದಾರೆ.

Tap to resize

'ಸ್ಕೂಲ್‌ನಲ್ಲಿ ನಾನು ತುಂಬಾನೇ ಸಣ್ಣಗಿದ್ದೆ. ಆಗ ನನ್ನ ಸ್ನೇಹಿತರೇ ನನ್ನನ್ನು ಹ್ಯಾಂಗರ್ ಎಂದು ಕರೆಯುತ್ತಿದ್ದರು. ನೀವು ಕಲ್ಪನೇ ಕೂಡ ಮಾಡಿಕೊಳ್ಳಲು ಆಗುವುದಿಲ್ಲ ಅಷ್ಟು ಸಣ್ಣಗಿದ್ದೆ' ಎಂದಿದ್ದಾರೆ ತೇಜಸ್ವಿ.

'ಸ್ಕೂಲ್‌ ಗ್ರೌಂಡ್‌ನಲ್ಲಿ ನಾವು ಆಟವಾಡುವಾಗ ಸ್ನೇಹಿತರು ರೇಗಿಸುತ್ತಿದ್ದರು. ಪಾಕೆಟ್‌ನಲ್ಲಿ 5 ರೂಪಾಯಿ ಇಟ್ಕೋ ಇಲ್ಲದಿದ್ದರೆ ಗಾಳಿಗೆ ಹಾರಿ ಹೋಗುವೆ ಎನ್ನುತ್ತಿದ್ದರು'

ತೇಜಸ್ವಿಗೆ ಇನ್‌ಸ್ಟಾಗ್ರಾಂನಲ್ಲಿ 6.2 ಮಿಲಿಯನ್ ಫಾಲೋವರ್ಸ್‌ ಇದ್ದಾರೆ. ಪ್ರತಿಯೊಂದು ಫೋಟೋಶೂಟ್‌ಗೂ ಸಾವಿರಾರೂ ರೂಪಾಯಿ ಬರುತ್ತದೆ ಅಲ್ಲದೆ ನೂರಾರು ಬ್ರ್ಯಾಂಡ್‌ಗಳು ಕೋಲಾಬೋರೇಟ್ ಮಾಡಿಕೊಳ್ಳುತ್ತಾರೆ.

ಬಿಗ್ ಬಾಸ್ 15ರಲ್ಲಿ ಕರಣ್ ಕುಂದ್ರಾ ಭೇಟಿ ಮಾಡಿದ ತೇಜಸ್ವಿ ಪ್ರೀತಿಸಲು ಆರಂಭಿಸುತ್ತಾರೆ. ಒಬ್ಬರನ್ನೊಬ್ಬರು ಒಂದು ದಿನವೂ ಮಿಸ್ ಮಾಡಿಕೊಳ್ಳುವುದಿಲ್ಲ. ಒಟ್ಟಿಗೆ ಏನೇ ಪೋಸ್ಟ್ ಮಾಡಿದ್ದರೂ ವೈರಲ್ ಆಗುತ್ತದೆ.

 ತೇಜಸ್ವಿ ಮಿಡಲ್ ಕ್ಲಾಸ್‌ ಮನೆ ಹುಡುಗಿ. ಕಷ್ಟ ಪಟ್ಟು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿರುವುದು. ಎಷ್ಟೇ ಸಂಪಾದನೆ ಮಾಡಿದ್ದರೂ ಕಾಮನ್ ಹುಡುಗಿ ರೀತಿ ಜೀವನ ಮಾಡುತ್ತಾರೆ. ಈ ಒಂದು ವಿಚಾರಕ್ಕೆ ಜನರಿಗೆ ತುಂಬಾನೇ ಇಷ್ಟವಾಗುತ್ತಾರೆ.

Latest Videos

click me!