BIGG BOSS 16 ರಲ್ಲಿ ಬಾಯ್ ಫ್ರೆಂಡ್ ಜೊತೆ ರಾಖಿ ಸಾವಂತ್ ನಿಖಾ‌?

Published : Sep 14, 2022, 05:40 PM IST

ರಾಖಿ ಸಾವಂತ್ ಈ ದಿನಗಳಲ್ಲಿ ತನ್ನ ಮ್ಯೂಸಿಕ್ ವಿಡಿಯೋ 'ತು ಮೇರೆ ದಿಲ್ ಮೇ ರೆಹನೆ ಕಿ ಲಾಯಕ್ ನಹಿ' ಮೂಲಕ ಸುದ್ದಿಯಲ್ಲಿದ್ದಾರೆ. ಇದರಲ್ಲಿ ಅವರು ತನ್ನ ಗೆಳೆಯ ಆದಿಲ್ ದುರಾನಿಯೊಂದಿಗೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಿದರು ಮತ್ತು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಅವರು 'ಬಿಗ್ ಬಾಸ್ 16' ನಲ್ಲಿ ಮದುವೆಯಾಗಲು ಬಯಸುವುದಾಗಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.   

PREV
17
BIGG BOSS 16 ರಲ್ಲಿ ಬಾಯ್ ಫ್ರೆಂಡ್ ಜೊತೆ ರಾಖಿ ಸಾವಂತ್ ನಿಖಾ‌?

ರಾಖಿ ಸಾವಂತ್ ಕಳೆದ 5-6 ತಿಂಗಳಿಂದ ಮೈಸೂರು ಮೂಲದ ಉದ್ಯಮಿ ಆದಿಲ್ ದುರಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮುಂಬೈನಲ್ಲಿ ಪಾಪರಾಜಿಗಳೊಂದಿಗೆ ಆಗಾಗ್ಗೆ ಪೋಸ್ ನೀಡುವುದು ಕಂಡುಬರುತ್ತದೆ.

27

ಅವರ ಪ್ರಕಾರ, ತನಗೆ  ಬಿಗ್ ಬಾಸ್ 16' ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ಸಿಕ್ಕರೆ, ಅಲ್ಲಿಯೇ ಮದುವೆಯಾಗಲು ಸಲ್ಮಾನ್ ಖಾನ್ ಅವರನ್ನು ವಿನಂತಿಸುತ್ತಾರೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

37

ಮನರಂಜನಾ ಸುದ್ದಿ ವೆಬ್‌ಸೈಟ್‌ನೊಂದಿಗಿನ ಸಂಭಾಷಣೆಯಲ್ಲಿ, ರಾಖಿ ಅವರು ಗೆಳೆಯ ಆದಿಲ್ ಅವರೊಂದಿಗೆ 'ಬಿಗ್ ಬಾಸ್ 16' ನಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತೀರಿ ಎಂದು ಕೇಳಿದಾಗ? 'ನನಗೆ ಗೊತ್ತಿಲ್ಲ. ಇದು ಸಾರ್ವಜನಿಕರ ಕೈಯಲ್ಲಿದೆ. ಸಲ್ಮಾನ್ ಭಾಯ್ ಕೈಯಲ್ಲಿದೆ. ಇದು ಕಲರ್ಸ್ ಕೈಯಲ್ಲಿದೆ. ಜನರು ಯಾವಾಗಲೂ ನಾನು ಅಳುವುದನ್ನು ನೋಡಿದ್ದಾರೆ. ನನ್ನ ರೋಮ್ಯಾಂಟಿಕ್ ಸೈಡ್‌,ಪ್ರೀತಿ, ಯಾವತ್ತೂ ನೋಡಿಲ್ಲ.ಮತ್ತು ನನಗೆ ಅಂತಹ ಹುಡುಗ ಸಿಕ್ಕಿಲ್ಲ. ಕಳೆದ ಸಲ ಅನುಭವ ತುಂಬಾ ಕೆಟ್ಟಿತ್ತು .ಅನಾಹುತವಾಗಿತ್ತು.ಆದರೆ ಆಗ ನನಗೆ ಆದಿಲ್ ಇರಲಿಲ್ಲ.ಆದಿಲ್‌ ಇನ್ನೊಂದು ಹೆಸರು ಪ್ರೀತಿ,ಲವ್‌, ರೋಮ್ಯಾನ್ಸ್‌ ಎಂದು ರಾಖಿ ಹೇಳಿದ್ದಾರೆ.

47

ಈ ಬಾರಿ 'ಬಿಗ್ ಬಾಸ್ 16' ಗೆ ಜೋಡಿಯಾಗಿ ಹೋಗುವ ಅವಕಾಶ ಸಿಕ್ಕರೆ, ಈ ಬಾರಿ ನಾವು ಹೋಗುತ್ತೇವೆ, ಪ್ರೀತಿಸುತ್ತೇವೆ ಮತ್ತು ಆನಂದಿಸುತ್ತೇವೆ ಮತ್ತು ಸಲ್ಮಾನ್ ಭಾಯ್‌ಗೆ ಈಗ ನನ್ನ ಕನ್ಯಾದಾನ ಮಾಡು ಎಂದು ಹೇಳುತ್ತೇನೆ. ಬೇಗ ನಿಖಾ ಮಾಡಲು ಹೇಳುತ್ತೇನೆ. ಸಿಂಗಲ್‌ ಆಗಿ ಹೋಗಿ, ಮಿಂಗಲ್‌ ಆಗಿ ಹೊರಗೆ ಬರುತ್ತೇವೆ' ಎಂದಿದ್ದಾರೆ ರಾಖಿ.


 

57

ಇದೇ ಸಂಭಾಷಣೆಯಲ್ಲಿ ಆದಿಲ್ ಜೊತೆ 'ಝಲಕ್ ದಿಖ್ಲಾ ಜಾ' ಅಥವಾ 'ನಾಚ್ ಬಲಿಯೇ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತೀರಾ ಎಂದು ರಾಖಿ ಕೇಳಿದಾಗ, 'ಆದಿಲ್ ನನ್ನ ಪ್ರೀತಿ. ನನ್ನ ಜೀವನ ನನ್ನ ಉಸಿರು.ಆದಿಲ್ ನನಗೆ ಸರ್ವಸ್ವ.. ಹಾಗಾಗಿ ಅವರ ಜೊತೆ 'ನಾಚ್ ಬಲಿಯೇ' ಮತ್ತು 'ಝಲಕ್ ದಿಖ್ಲಾ ಜಾ' ಸಿನಿಮಾ ಮಾಡಲು ಖಂಡಿತಾ ಇಷ್ಟ ಪಡುತ್ತೇನೆ.ಅವರ ಜೊತೆ 'ಬಿಗ್ ಬಾಸ್' ಮಾಡಲು ಇಷ್ಟಪಡುತ್ತೇನೆ. ಎಲ್ಲಾ ರಿಯಾಲಿಟಿ ಶೋಗಳನ್ನು ಮಾಡಲು ಇಷ್ಟಪಡುತ್ತೇನೆ'  ಎಂದಿದ್ದಾರೆ ರಾಖಿ ಸಾವಂತ್.
 

67

 ರಾಖಿ ಸಾವಂತ್ ಈ ವರ್ಷದ ಮೇ ತಿಂಗಳಲ್ಲಿ ತನ್ನ ಗೆಳೆಯ ಆದಿಲ್ ದುರಾನಿ ಬಗ್ಗೆ ಮಾಧ್ಯಮಗಳಿಗೆ ಹೇಳಿದ್ದರು. ಮೈಸೂರು ಮೂಲದ ಉದ್ಯಮಿ ಆದಿಲ್ ದುರಾನಿ ಅವರಿಗೆ ಬಿಎಂಡಬ್ಲ್ಯು ಕಾರು ನೀಡಿ ಪ್ರಪೋಸ್‌ ಮಾಡಿದ್ದಾರೆ ಎಂದು ರಾಖಿ ಸಂವಾದದಲ್ಲಿ ಹೇಳಿದ್ದರು.

77
Rakhi Sawant

ರಾಖಿ ಪ್ರಕಾರ ಆದಿಲ್ ಆಕೆಗೆ ದುಬೈನಲ್ಲಿ ಮನೆ ಕೂಡ ಖರೀದಿಸಿದ್ದಾರೆ. ಆದಿಲ್ ಮತ್ತು ರಾಖಿಯ ಮೊದಲ ಮ್ಯೂಸಿಕ್ ವೀಡಿಯೋ ಸೆಪ್ಟೆಂಬರ್ 10 ರಂದು ಬಿಡುಗಡೆಯಾಗುತ್ತಿದೆ, ಸಾಹಿತ್ಯವನ್ನು ತನ್ವೀರ್ ಘಾಜಿ ಬರೆದಿದ್ದಾರೆ ಮತ್ತು ಅಲ್ತಮಶ್ ಫರಿದಿ ಧ್ವನಿ ನೀಡಿದ್ದಾರೆ.

Read more Photos on
click me!

Recommended Stories