ಅಮ್ಮನಾಗೋ ಖುಷಿಯಲ್ಲಿರೋ ಮಿಲನಾ ನಾಗರಾಜ್‌ಗೆ ಉಡಿ ತುಂಬಿದ ಸ್ಟಾರ್ ಸುವರ್ಣ

Published : May 16, 2024, 05:14 PM IST

ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ವುಡ್ ನಟಿ ಮಿಲನಾ ನಾಗರಾಜ್ ಅವರಿಗೆ ಸ್ಟಾರ್ ಸುವರ್ಣ ವಾಹಿನಿ ಬಾಗಿನನೀಡಿ ಹಾರೈಸಿದೆ.   

PREV
17
ಅಮ್ಮನಾಗೋ ಖುಷಿಯಲ್ಲಿರೋ ಮಿಲನಾ ನಾಗರಾಜ್‌ಗೆ ಉಡಿ ತುಂಬಿದ ಸ್ಟಾರ್ ಸುವರ್ಣ

ಹೊಸತನಕ್ಕೆ ಹೆಸರುವಾಸಿಯಗೈರುವ ಸ್ಟಾರ್ ಸುವರ್ಣ (Star Suvarna) ವಾಹಿನಿ ತಮ್ಮ ಕಾರ್ಯಕ್ರಮವೊಂದರಲ್ಲಿ ಸ್ಯಾಂಡಲ್‌ವುಡ್ ನಟಿಗೆ ಬಾಗಿನ ನೀಡಿ ಶುಭ ಹಾರೈಸಿದೆ.
 

27

ಹೌದು, ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಂಡಲ್ ವುಡ್‌ನ ನಿಧಿಮಾ ಖ್ಯಾತಿಯ ಮಿಲನಾ ನಾಗರಾಜ್ (Milana Nagraj) ಅವರಿಗೆ ಸ್ಟಾರ್ ಸುವರ್ಣ ವಾಹಿನಿ ಕುಂಕುಮ ಹಚ್ಚಿ, ಹಸಿರು ಬಳೆ ತೊಡಿಸಿ, ಬಾಗಿನ ನೀಡಿ ಶುಭ ಹಾರೈಸಿದೆ.
 

37

ಸ್ಟಾರ್ ಸುವರ್ಣ ವಾಹಿನಿಯ ಊ ಅಂತೀಯಾ ಉಹೂ ಅಂತೀಯಾ ಕಾರ್ಯಕ್ರಮದಲ್ಲಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗಾರ್ (Amrutha Ayyangar) ಭಾಗಿಯಾಗಿದ್ದರು. 
 

47

ನಟಿ ಅಮೃತಾ ಅಯ್ಯಂಗಾರ್ ಮಿಲನಾ ಅವರಿಗೆ ಗಿಫ್ಟ್, ಸೀರೆ ನೀಡುತ್ತಾ, ಅಮ್ಮನನ್ನು ಬಿಟ್ರೆ ನಾನು ಭಯ ಪಡೋದು ಅಂದ್ರೆ ಮಿಲನಾ ಮತ್ತು ಕೃಷ್ಣಂಗೆ, ಅದಕ್ಕಿಂತ ಜಾಸ್ತಿ ಅವರ ಪ್ರೀತಿ ಇದೆ ಎಂದು ಹೇಳಿದರು. 
 

57

ಅಲ್ಲದೇ ಅವರ ಮಗುವಿಗೆ ಅಂದ್ರೆ ನನ್ನ ಸೊಸೆ, ಅಥವಾ ಅಳಿಯಂಗೆ ನನ್ನ ಅಪ್ಪುಗೆ ಮತ್ತು ಪ್ರೀತಿ ಯಾವಾಗಲೂ ಈ ಮೂಲಕ ಇರುತ್ತೆ ಎನ್ನುತ್ತ ತಮ್ಮ ಪ್ರೀತಿಯ ಗೆಳತೆಗೆ ಉಡುಗೊರೆ ನೀಡಿ ಹಾರೈಸಿದರು. 
 

67

ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ (Darling Krishna) ದಂಪತಿ ಇದೇ ಮಾರ್ಚ್ ನಲ್ಲಿ ತಾವು ಪೋಷಕರಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೇ ಇದೇ ಸೆಪ್ಟೆಂಬರ್ ನಲ್ಲಿ ಮಗುವಿನ ಆಗಮನದ ಬಗ್ಗೆ ಕೂಡ ತಿಳಿಸಿದ್ದರು. 
 

77

ಸ್ಯಾಂಡಲ್ ವುಡ್ ಈ ಮುದ್ದಾದ ಸೆಲೆಬ್ರಿಟಿ ಕಪಲ್ಸ್ (celebrety couples) ತಮ್ಮ ಬೇಬಿ ಮೂನ್ ಎಂಜಾಯ್ ಮಾಡೊದಕ್ಕೆ ಇತ್ತೀಚೆಗೆ ಥೈಲ್ಯಾಂಡ್ ಗೆ ತೆರಳಿದ್ದರು. ಅಲ್ಲಿ ಇಬ್ಬರು ಜೊತೆಯಾಗಿ ಹಲವು ಸುಂದರ ತಾಣಗಳಿಗೆ ತೆರಳಿ, ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories