ಸೀರಿಯಲ್’ನಲ್ಲಿ ತೀರ್ಥಯಾತ್ರೆಗೆ ಹೊರಟ ದತ್ತ ತಾತ… ರಿಯಲ್ ಲೈಫಲ್ಲಿ ಹೋಗಿದ್ದು ಅಮೆರಿಕಾಗೆ!

First Published | Sep 26, 2024, 2:18 PM IST

ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡ್ತಿರೋರಿಗೆ ಇದೀಗ ದತ್ತ ತಾತ ತೀರ್ಥಯಾತ್ರೆಗೆ ಹೊರಡ್ತಿರೋದನ್ನ ನೋಡಿ ಅಜ್ಜನ ಪಾತ್ರ ಮುಗಿಸ್ತಾರ ಅಂತ ಶಾಕ್ ಆಗಿದೆ. ಆದ್ರೆ ನಿಜವಾಗಿಯೂ ಅವರೆಲ್ಲಿಗೆ ಹೋಗ್ತಿದ್ದಾರೆ ಗೊತ್ತ? 
 

ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರಾವಾಹಿಯ ಅತಿ ಮುಖ್ಯವಾದ ಪಾತ್ರಗಳಲ್ಲಿ ಒಂದು ದತ್ತ ತಾತನ ಪಾತ್ರ. ತುಳಸಿಗೆ ಒಳ್ಳೆಯ ಮಾವನಾಗಿ, ಸ್ವಲ್ಪ ಕಠಿಣ ಎನಿಸಿದರೂ ಯಾವಾಗ್ಲೂ ಎಲ್ಲರಿಗೂ ಒಳ್ಳೆಯದನ್ನೆ ಬಯಸುವ ದತ್ತ ತಾತ ಅಂದ್ರೆ ವೀಕ್ಷಕರಿಗೂ ಪ್ರೀತಿ. ತುಳಸಿ, ಮದುವೆಯಿಂದ ಹಿಡಿದು, ಎಲ್ಲರ ಜೀವನ ಸರಿ ಮಾಡುವವರೆಗೆ ಎಲ್ಲದರಲ್ಲೂ ದತ್ತ ತಾತನದ್ದೇ ಮೇಲು ಗೈ. 
 

ಸದ್ಯಕ್ಕೆ ಧಾರಾವಾಹಿಯಲ್ಲಿ ಎಲ್ಲವೂ ಸರಿಯಾಗಿಯೇ ನಡಿತಿದೆ. ತುಳಸಿ ಜೀವನ ಸರಿಯಾಗಿದೆ. ಸಮರ್ಥ್ ಮತ್ತೆ ತುಳಸಿಯನ್ನು ಅಮ್ಮ ಎಂದು ಕರೆಯುತ್ತಿದ್ದಾನೆ. ಇಲ್ಲಿವರೆಗೆ ಬರೀ ಕೆಟ್ಟವಳೇ ಆಗಿದ್ದ ಸಂಧ್ಯಾ ಕೂಡ ಈಗ ಒಳ್ಳೆಯವಳಾಗಿದ್ದಾಳೆ, ಇದೆಲ್ಲಾ ಆದ ಮೇಲೆ ದತ್ತ ತಾತ ಸದ್ಯಕ್ಕೆ ತೀರ್ಥ ಯಾತ್ರೆಗೆ ಹೊರಟಿದ್ದಾರೆ. 
 

Tap to resize

ಪ್ರೊಮೋ ನೋಡಿದ್ರೆ ಇಬ್ಬರು ಮೊಬ್ಬಕ್ಕಳು ತಾತನನ್ನು ತೀರ್ಥ ಯಾತ್ರೆಗೆ ಕಳುಹಿಸಲು ಎಲ್ಲಾ ತಯಾರಿ ಮಾಡ್ತಿದ್ದಾರೆ. ಸಂಧ್ಯಾ ತಾತನ ಬ್ಯಾಗ್ ರೆಡಿ ಮಾಡಿದ್ರೆ, ಸಮರ್ಥ್ ತಾತನ ಅವಶ್ಯಕತೆಗಾಗಿ ಹಣ ಕೂಡ ಕೊಡ್ತಾನೆ. ಎಲ್ಲವೂ ಸರಿಯಾಗಿರೋದರಿಂದ ದತ್ತ ತಾತ ನೆಮ್ಮದಿಯಾಗಿ, ಖುಷಿಯಾಗಿ ತೀರ್ಥಯಾತ್ರೆಗೆ ಹೊರಟು ನಿಂತಿದ್ದಾರೆ. 
 

ದತ್ತ ತಾತ ತೀರ್ಥ ಯಾತ್ರೆಗೆ ಹೊರಡ್ತಿರೋದನ್ನ ನೋಡಿ ವೀಕ್ಷಕರಲ್ಲಿ ಅನುಮಾನವೊಂದು ಕಾಡ್ತಿದೆ. ಮೊದಲಿನಿಂದಲೂ ದತ್ತ ತಾತನಿಗೆ ವಯಸ್ಸಾಯ್ತು ಇನ್ನು ಹೆಚ್ಚು ದಿನ ಆಕ್ಟಿಂಗ್ ಮಾಡೋದೆ ಇಲ್ಲ ಅಂತಾನೆ ಜನ ಅಂದುಕೊಂಡಿದ್ದರು. ಈಗ ಸೀರಿಯಲ್ ಬಿಡ್ತಾರೇನೋ ಅನ್ನುವ ಅನುಮಾನ ಕೂಡ ಜನರನ್ನು ಕಾಡಿದೆ. ಆದರೆ ನಿಜಕ್ಕೂ ದತ್ತ ತಾತನ ತೀರ್ಥಯಾತ್ರೆಗೆ ಕಾರಣ ಏನು ಗೊತ್ತಾ? ಅಮೆರಿಕಾ.
 

ದತ್ತ ಪಾತ್ರದಲ್ಲಿ ಅಭಿನಯಿಸುತ್ತಿರುವ ವೆಂಕಟರಾವ್ (Venkat Rao) ಅಮೆರಿಕಾಗೆ 15 ದಿನಗಳ ಹಿಂದೆ ಯಾತ್ರೆ ಮಾಡಿದ್ದಾರೆ. ಶೂಟಿಂಗ್  ಆಗಲೇ ಮುಗಿಸಿದ್ದು, ಈವಾಗ ಶೂಟಿಂಗ್ ಪ್ರಸಾರ ಆಗ್ತಿದೆ ಅಷ್ಟೇ. ಅಷ್ಟಕ್ಕೂ ವೆಂಕಟ ರಾವ್ ಅಮೆರಿಕಾಗೆ ತೆರೆಳಿರೋದಕ್ಕೆ ಕಾರಣ ಅವರ ಪುತ್ರ, ಸೊಸೆ, ಮೊಮ್ಮಕ್ಕಳು ಇರೋದು ಅಮೆರಿಕಾದಲ್ಲಿ. 
 

ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿರುವ  ವೆಂಕಟ ರಾವ್ (Venkat Rao) ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ಯುಎಸ್ಎ ಗೆ ಟ್ರಾವೆಲ್ ಮಾಡಿದ್ದಾರೆ. ವಿದೇಶಕ್ಕೆ ತೆರಳಿದ ಈ ಹಿರಿಯ ಕಲಾವಿದ ಶ್ರೀರಸ್ತು ಶುಭಮಸ್ತುವಿನ ಪ್ರೀತಿಯ ದತ್ತ ತಾತನಿಗೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗಳು ಗೌರವ ಸಮರ್ಪಿಸಿತ್ತು.

ಏರ್ ಇಂಡಿಯಾ (Air India)  ಸಿಬ್ಬಂಧಿಗಳು ವೆಂಕಟ್ ರಾವ್ ಮತ್ತು ಅವರ ಪತ್ನಿಯನ್ನು ಜೊತೆಯಾಗಿ ನಿಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಹಿರಿಯ ನಟನಿಗೆ ಗೌರವ ಸಮರ್ಪಿಸಿದ್ದಾರೆ. ದತ್ತ ತಾತ ಕೇಕ್ ಕತ್ತರಿಸಿ, ಏರ್ ಇಂಡಿಯಾ ಸಿಬ್ಬಂಧಿ ಹಾಗೂ ಪತ್ನಿಗೆ ಕೇಕ್ ತಿನ್ನಿಸುವ ವಿಡಿಯೋ ವೈರಲ್ ಆಗಿತ್ತು. ದತ್ತ ಆಲಿಯಾಸ್ ವೆಂಕಟ ರಾವ್ ಮತ್ತೆ ಯಾವಾಗ ಅಮೆರಿಕಾದಿಂದ ಬರುತ್ತಾರೆ ಅನ್ನೋದು ಗೊತ್ತಿಲ್ಲ. ಅಲ್ಲಿವರೆಗೆ ತಾತನ ತೀರ್ಥ ಯಾತ್ರೆ ಎಪಿಸೋಡ್ ಗಳು ಮುಂದುವರೆಯುವ ಚಾನ್ಸ್ ಇದೆ. 
 

Latest Videos

click me!