Health
ಪಂಚಗವ್ಯವನ್ನು ಗೋವಿಗೆ ಸಂಬಂಧಿಸಿದ ಐದು ಪ್ರಮುಖ ಅಂಶಗಳಿಂದ ತಯಾರಿಸಲಾಗುತ್ತದೆ, ಹಸುವಿನ ಸೆಗಣಿ, ಗೋಮೂತ್ರ, ಹಾಲು, ಮೊಸರು ಹಾಗೂ ತುಪ್ಪದಿಂದ ಇದನ್ನು ತಯಾರಿಸುತ್ತಾರೆ.
ಪ್ಯಾರ್ ಕಾ ಪಂಚನಾಮ' ಚಿತ್ರದ ನಟಿ ಸೋನಾಲಿ ಸೆಹಗಲ್ ತಮ್ಮ ಗರ್ಭಾವಸ್ಥೆಯ ಆಹಾರಕ್ರಮದಲ್ಲಿ ಪಂಚಗವ್ಯವನ್ನು ಸೇರಿಸಿಕೊಂಡಿದ್ದಾಗಿ ಹೇಳಿದ್ದು, ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ
ಪ್ರಸ್ತುತ ಸೋನಾಲಿ ಅವರು 9 ತಿಂಗಳ ಗರ್ಭಿಣಿಯಾಗಿದ್ದು, ಈ ಸಮಯದಲ್ಲಿ ಅವರು ಪಂಚಗವ್ಯದಿಂದ ತಯಾರಿಸಿದ ತುಪ್ಪವನ್ನು ಸೇವಿಸುತ್ತಿದ್ದಾರೆ.
ದೇಸಿ ಹಸುವಿನ ಪಂಚಗವ್ಯ ಶ್ರೇಷ್ಠ ಅಮೃತ, ಸರಿಯಾದ ಆಹಾರವಾಗಿದ್ದು, ಹೃದಯವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಿಸುತ್ತದೆ ಎಂದು ಸೋನಾಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಪಂಚಗವ್ಯದಿಂದ ತಯಾರಿಸಿದ ತುಪ್ಪವು ಪಿತ್ತ, ಕಫ ಮತ್ತು ವಾತವನ್ನು ಸಮತೋಲನಗೊಳಿಸುತ್ತದೆ ಮತ್ತು ವಿಷದ ಪರಿಣಾಮವನ್ನು ನಿವಾರಿಸುತ್ತದೆ ಎಂದು ಸೋನಾಲಿ ಹೇಳಿಕೊಂಡಿದ್ದಾರೆ.
ಪಂಚಗವ್ಯದಲ್ಲಿ ಹಸುವಿನ ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಗೋಮಯ ಸೇರಿದೆ ಎಂದು ಸೋನಾಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅನೇಕ ರೋಗಗಳಿಗೆ ಔಷಧಿಯಾಗಿ ಜನರು ಪಂಚಗವ್ಯವನ್ನು ಬಳಸುತ್ತಾರೆ. ಆರೋಗ್ಯ ಮತ್ತು ಸಂತೋಷಕ್ಕಾಗಿ ಪಂಚಗವ್ಯವು ಸ್ವರ್ಗದಿಂದ ಬಂದ ಕೊಡುಗೆ ಎಂದು ನಂಬಲಾಗಿದೆ.
ಜೂನ್ 7, 2023 ರಂದು ಸೋನಾಲಿ ಸೆಹಗಲ್ ಹೋಟೆಲ್ ಉದ್ಯಮಿ ಆಶೀಷ್ ಎಲ್. ಸಜ್ನಾನಿ ಅವರನ್ನು ಗುರುದ್ವಾರದಲ್ಲಿ ವಿವಾಹವಾಗಿದ್ದು, ಪ್ರಸ್ತುತ ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿ ಇದ್ದಾರೆ.
ಆಗಸ್ಟ್‌ನಲ್ಲಿ ಸೋನಾಲಿ ತಾವು ತಾಯಿಯಾಗುತ್ತಿರುವುದಾಗಿ ಘೋಷಿಸಿದರು ಆ ಪೋಸ್ಟ್‌ನಲ್ಲಿ ಅವರ ಪತಿ ಕೈಯಲ್ಲಿ ಮಗುವಿನ ಫೀಡಿಂಗ್ ಬಾಟಲಿಯನ್ನು ಹಿಡಿದಿರುವುದು ಕಂಡು ಬಂದಿದೆ.