Sharath Padmanabh: ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಸ್ಯಾಂಡಲ್‌ವುಡ್‌ಗೆ ಪಾರು ಸೀರಿಯಲ್ ನಟ ಎಂಟ್ರಿ‌

Published : May 24, 2023, 03:25 PM IST

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಸೀರಿಯಲ್ ಪಾರು ನಲ್ಲಿ ಆದಿಯಾಗಿ ನಟಿಸುತ್ತಿರುವ ನಟ ಶರತ್ ಪದ್ಮನಾಭ್ ಇದೀಗ ಸ್ಯಾಂಡಲ್ ವುಡ್ ಗೆ ಗ್ರಾಂಡ್ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ. 

PREV
17
Sharath Padmanabh: ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಸ್ಯಾಂಡಲ್‌ವುಡ್‌ಗೆ ಪಾರು ಸೀರಿಯಲ್ ನಟ ಎಂಟ್ರಿ‌

ಪಾರು ಸೀರಿಯಲ್ (Paaru serial) ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗೆದ್ದ ನಟ ಶರತ್ ಪದ್ಮನಾಭ್ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ‌ ಕೊಡಲು ಸಜ್ಜಾಗಿದ್ದಾರೆ. 

27

ಕನ್ನಡ ಕಿರುತೆರೆಯಿಂದ ಅದೆಷ್ಟೊ ನಟರು ಈಗಾಗಲೇ ಹಿರಿತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಶರತ್ (Sharath Padmanabh) ಸರದಿ. ಇವರು ಈಗ ವರ್ಧನ್ ಎಂಹೆಚ್ ಅವರ ಸಸ್ಪೆನ್ಸ್ ಥ್ರಿಲ್ಲರ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮೆರೆಯಲು ಸಿದ್ಧತೆ ನಡೆಸಿದ್ದಾರೆ. 

37

ಇನ್ನೂ ಹೆಸರಿಟ್ಟಿರದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ (suspense thriller) ಆಗಿದ್ದು, ಚಿತ್ರದ ಮೊದಲಾರ್ಧ ಹೆಚ್ಚು ಕಾಮಿಡಿ ಇರಲಿದೆಯಂತೆ. ಜೊತೆಗೆ ಇದು ನಗರ ಮತ್ತು ಕಾಡಿನಲ್ಲಿ ನಡೆಯುವ ಕಥೆಯಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. 

47

ಶರತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಮೊದಲಾರ್ಧ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ದ್ವಿತಿಯಾರ್ಧ ಶೂಟಿಂಗ್ (film shooting) ನಡೆಯಲಿದೆಯಂತೆ. ಈ ಚಿತ್ರಕ್ಕೆ ಅನುಷ ಕೃಷ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. 

57

ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ಪಡೆದಿರುವ ಶರತ್ ಈ ಬಗ್ಗೆ ಸಂತಸಗೊಂಡಿದ್ದಾರೆ. ಹೊಸ ಪಯಣ!! ಆಶೀರ್ವಾದವಿರಲಿ ಎಂದು ಇವರು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದು,  ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.

67

ಇನ್ನು ಎಂಬಿಎ ಗ್ರಾಜ್ಯುವೇಟ್ ಆಗಿರುವ ಶರತ್ ಪದ್ಮನಾಭ್ ಗೆ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದು, ಹಾಗಾಗಿ ನಟನೆಗೆ 2018 ರಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜಸ್ಟ್ ಮಾತ್ ಮಾತಲ್ಲಿ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟರು. 

77

ಇನ್ನು ಪರ್ಸನಲ್ ಲೈಫ್ ವಿಷ್ಯಕ್ಕೆ ಬಂದ್ರೆ ಶರತ್ ಪದ್ಮಾನಾಭ್ ತಾವೇ ಇಷ್ಟಪಟ್ಟ ಹುಡುಗಿ ದಿವ್ಯಶ್ರೀ ಜೊತೆ ಕಳೆದ ನವೆಂಬರ್ ನಲ್ಲಿ ಎಂಗೇಜ್‍ಮೆಂಟ್ ಮಾಡಿಕೊಂಡು, ಈ ಜನವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 
 

click me!

Recommended Stories