ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಅಗ್ನಿಸಾಕ್ಷಿ ನಟಿ

Published : Sep 28, 2023, 06:27 PM IST

ಅಗ್ನಿ ಸಾಕ್ಷಿ ಮತ್ತು ರಾಜಾ ರಾಣಿ ಮೂಲಕ ಕಿರುತೆರೆ ಜನರಿಗೆ ಹತ್ತಿರವಾಗಿದ್ದ ನಟಿ ಇಶಿತಾ ವರ್ಷ ಇದೀಗ ತಮ್ಮ ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟಲ್ಲಿ ಕಿಡಿ ಹಚ್ಚಿದ್ದಾರೆ.   

PREV
19
ಹೊಸ ಫೋಟೋ ಶೂಟ್ ಮೂಲಕ ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಅಗ್ನಿಸಾಕ್ಷಿ ನಟಿ

ಅಗ್ನಿ ಸಾಕ್ಷಿ ಸೀರಿಯಲ್ ನಲ್ಲಿ ಮಾಯಾ ಎನ್ನುವ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟಿ ಇಶಿತಾ ವರ್ಷ (Ishita Varsha). ಈ ಸೀರಿಯಲ್ ನಲ್ಲಿ ಇವರು ನೆಗೆಟಿವ್, ಪಾಸಿಟಿವ್, ರೊಮ್ಯಾಂಟಿಕ್ ಹೀಗೆ ಎಲ್ಲಾ ಶೇಡ್ ಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. 
 

29

ಸೀರಿಯಲ್ ಬಳಿಕ ಇಶಿತಾ ತಮ್ಮ ಪತಿ, ಡ್ಯಾನ್ಸ್ ಮಾಸ್ಟರ್ ಮುರುಗಾ (Muruga master) ಜೊತೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ರಾಜಾ ರಾಣಿ ಸೀಸನ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡು ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 
 

39

ಇದಾದ ಬಳಿಕ ಇಶಿತಾ ವೈಲ್ಡ್ ಲೈಫ್ ಫೋಟೋಗ್ರಫಿ (wildlife photography) ಮೂಲಕ ತುಂಬಾನೆ ಸುದ್ದಿಯಲ್ಲಿದ್ದರು. ಇವರು ಆಫ್ರಿಕಾದ ಕಾಡುಗಳಲ್ಲಿ ಅಲೆದಾಡುತ್ತಾ, ಪ್ರಾಣಿಗಳ ಫೋಟೋಗಳನ್ನು ಸೆರೆ ಹಿಡಿಯುತ್ತಾ ಅದರಲ್ಲೇ ಬ್ಯುಸಿಯಾಗಿದ್ದರು ನಟಿ. 
 

49

ಹೆಚ್ಚಾಗಿ ದೇಶ ವಿದೇಶ ಪ್ರವಾಸ ಮಾಡುತ್ತಾ, ವನ್ಯ ಜೀವಿಗಳ ಫೋಟೋ ಸೆರೆ ಹಿಡಿಯುವ ಇಶಿತಾಗೆ ಅದೊಂದು ಹವ್ಯಾಸ. ಇನ್ನಷ್ಟು ಮತ್ತಷ್ಟು ಸಲ ಆಫ್ರಿಕಾದ ಮಸೈಮಾರಾಗೆ ಭೇಟಿ ನೀಡಿ ಮತ್ತಷ್ಟು ಅನುಭವ ಪಡೆಯುವ ಹಂಬಲದಲ್ಲಿದ್ದಾರೆ ನಟಿ. 
 

59

ಇನ್ನು ವನ್ಯ ಜೀವಿ ಛಾಯಾಗ್ರಹಕಳಾಗಿ ಗುರಿತಿಸೋದು ನನ್ನ ಬದುಕಿನ ದೊಡ್ಡ ಕನಸು ಎಂದು ಹಿಂದೊಮ್ಮೆ ನಟಿ ಹೇಳಿದ್ದರು. ವನ್ಯಜೀವಿ ಛಾಯಾಗ್ರಹಣದಲ್ಲಿ ಮಹಿಳೆಯರು ತೀರಾ ಕಡಿಮೆ. ನಾನು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದೇನೆ ಎಂದು ಸಹ ಅವರು ತಿಳಿಸಿದ್ದರು. 

69

ಸದ್ಯ ಎಲ್ಲಾ ಕೆಲಸಗಳಿಗೆ ಬ್ರೇಕ್ ಕೊಟ್ಟಿರುವ ಇಶಿತಾ ವರ್ಷಾ. ಹೊಸ ಫೋಟೋ ಶೂಟ್ ಮೂಲಕ ಸೊಶಿಯಲ್ ಮೀಡಿಯಾಕ್ಕೆ (social media) ಬೆಂಕಿ ಹಚ್ಚಿದ್ದಾರೆ. ಹೌದು, ತುಂಬಾ ಬೋಲ್ಡ್ ಆಗಿರುವ ಫೋಟೋ ಶೂಟ್ ಮಾಡಿಸಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. 
 

79

ಹೊಸ ಫೋಟೋ ಗಳಿಗೆ ಅನುಪಮಾ ಗೌಡ ಮತ್ತು ನೇಹಾ ರಾಮಕೃಷ್ಣ (Neha Ramakrishna) ಕಾಮೆಂಟ್ ಮಾಡಿ ಫೈರ್ ಎಂದಿದ್ದು, ಮುಂದಿನ ಫೋಟೋ ಶೂಟ್ ಮೂಲಕ ನೀನು ಖಂಡೀತಾ ನಿನ್ನ ಕನಸನ್ನು ಈಡೇರಿಸುತ್ತಿ ಅನ್ನೋ ನಂಬಿಕೆ ನನಗಿದೆ ಎಂದು ನೇಹಾ ಹೇಳಿದ್ದಾರೆ. 
 

89

ಕಂದು , ಕಪ್ಪು ಬಣ್ಣದ ಚೀತಾ ಪ್ರಿಂಟ್ ಹೊಂದಿರುವ ಕ್ರಾಪ್ ಟಾಪ್ ವೈಟ್ ಪ್ಯಾಂಟಲ್ಲಿ ಇಶಿತಾ ಫೋಟೋ ಶೂಟ್ ಮಾಡಿಸಿದ್ದಾರೆ. ಅದಕ್ಕೆ ಹೊಂದಿಕೆಯಾಗುವ ಮೆಟಲ್ ನೆಕ್ ಪೀಸ್, ದೊಡ್ಡದಾದ ಇಯರಿಂಗ್ಸ್ ಮತ್ತೊಂದು ಸಣ್ಣ ಮೂಗುತಿಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. 
 

99

ನೆಟ್ಟಿಗರಂತೂ ನಟಿಯ ಹೊಸ ಫೋಟೋ ಶೂಟ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಎಲ್ಲರೂ ಫೈರ್ ಇಮೋಜಿ ಕಾಮೆಂಟ್ ಮಾಡುವ ಮೂಲಕ, ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಂತೂ ತುಂಬಾ ಸೆಕ್ಸಿಯಾಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories