ಪಿಂಕ್ ಟಾಪ್, ಶಾರ್ಟ್ಸ್ ಜೊತೆ ಬೋಲ್ಡ್ ಅವತಾರದಲ್ಲಿ ಪುಟ್ಟಕ್ಕನ ಮಕ್ಕಳು ನಟಿ

Published : Sep 28, 2023, 05:10 PM IST

ಕನ್ನಡತಿಯಲ್ಲಿ ಹರ್ಷನ ಅತ್ತಿಗೆ ಡಾ.ತಾಪ್ಸಿ ಮತ್ತು ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ನಾಯಕ ಕಂಠಿಯ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ದೀಪಾಶ್ರೀ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ಸ್ ಮತ್ತು ಪಿಂಕ್ ಕ್ರಾಪ್ ಟಾಪಿನಲ್ಲಿ ನಟಿ ಮಿಂಚುತ್ತಿದ್ದಾರೆ.   

PREV
17
ಪಿಂಕ್ ಟಾಪ್, ಶಾರ್ಟ್ಸ್ ಜೊತೆ ಬೋಲ್ಡ್ ಅವತಾರದಲ್ಲಿ ಪುಟ್ಟಕ್ಕನ ಮಕ್ಕಳು ನಟಿ

ಕನ್ನಡತಿ ಸೀರಿಯಲ್‌ನಲ್ಲಿ ಡಾ ತಾಪ್ಸಿಯಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಸಹ ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಶೇಡ್‌ಗಳಲ್ಲೂ ಮಿಂಚಿ, ತಮ್ಮ ವಾಯ್ಸ್ ಮತ್ತು ನಟನೆಯಿಂದಲೇ ಮನ ಗೆದ್ದ ನಟಿ ದೀಪಶ್ರೀ. 
 

27

ಕನ್ನಡತಿ ಸೀರಿಯಲ್ ಮುಗಿದ ಮೇಲೆ ಇದೀಗ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ದೀಪಶ್ರೀ ನಾಯಕ ಕಂಠಿಯ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೂ ಸೀರಿಯಲ್ ನಲ್ಲಿ ಪ್ರಾಮುಖ್ಯತೆ ಇದೆ. ಎರಡೂ ಸೀರಿಯಲ್‌ಗಳಲ್ಲೂ ಸದಾ ಸೀರೆಯಲ್ಲಿ ಮಿಂಚುತ್ತಿದ್ದ ನಟಿ ದೀಪ. 
 

37

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಾಯಕ ಕಂಠಿ ಸಹೋದರಿ ವಸು ಪಾತ್ರ ಕಳೆದ ಎರಡು ತಿಂಗಳಿಂದ ದೀಪಶ್ರೀಯವರು (Deepashree)  ನಟಿಸುತ್ತಿದ್ದಾರೆ. ಬಡ್ಡೀ ಬಂಗಾರಮ್ಮನ ಮಗಳಾಗಿದ್ದರೂ ಇವರದ್ದು ಸೀರಿಯಲ್‌ನಲ್ಲಿ ಸೌಮ್ಯ ಸ್ವಾಭಾವದ ಪಾತ್ರ. 

47

ಸೀರಿಯಲ್ ಲೈಫಿಗೂ ನೈಜ ಲೈಫಿಗೂ ತುಂಬಾನೆ ವ್ಯತ್ಯಾಸ ಇರುತ್ತೆ ಅಲ್ವಾ? ಹಾಗೆಯೇ ಯಾವಾಗಲೂ ಸೀರೆಯಲ್ಲಿ ಮಿಂಚುತ್ತಿದ್ದ ಈ ಕಿರುತೆರೆ ನಟಿ ಇದೀಗ ಬೋಲ್ಡ್ (bold photo) ಆಗಿ ಶಾರ್ಟ್ಸ್ ಮತ್ತು ಕ್ರಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 

57

ಬೈಕ್ ಮೇಲೆ ಸ್ಟೈಲ್ ಆಗಿ ಡೆನಿಮ್ ಶಾರ್ಟ್ಸ್ ಮತ್ತು ಪಿಂಕ್ ಕ್ರಾಪ್ ಟಾಪ್ ಧರಿಸಿ ಕುಳಿತು ಪೋಸ್ ನೀಡಿರುವ ದೀಪಾಶ್ರೀ ಸಖತ್ ಬೋಲ್ಡ್ ಮತ್ತು ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಅಡ್ವೆಂಚರಸ್ ಟೂರ್ ಸಂದರ್ಭದಲ್ಲಿ ತೆಗೆದ ಫೋಟೋ ಇದಾಗಿದೆ ಅನ್ನೋದನ್ನು ಇವರ ಹ್ಯಾಶ್ ಟಾಗ್ ನೋಡಿದ್ರೆ ಹೇಳಬಹುದು. 
 

67

ಸೀರಿಯಲ್‌ಗಳಲ್ಲಿ ತುಂಬಾನೆ ಸಿಂಪಲ್ ಟ್ರೆಡಿಶನಲ್ ಆಗಿ ಕಾಣಿಸುವ ದೀಪಶ್ರೀ ರಿಯಲ್ ಲೈಫಲ್ಲಿ ತುಂಬಾನೆ ಮಾಡರ್ನ್ ಮತ್ತು ಸ್ಟೈಲಿಶ್ ಆಗಿದ್ದಾರೆ ಅನ್ನೋದು ಇವರ ಸೋಶಿಯಲ್ ಮೀಡಿಯಾ (Social media) ನೋಡಿದ್ರೇನೆ ಗೊತ್ತಾಗುತ್ತೆ. 
 

77

ದೀಪಶ್ರೀ ಕರಿಯರ್ ಬಗ್ಗೆ ಹೇಳೊದಾದ್ರೆ ಇವರು ಮೊದಲಿಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ `ಜೈ ಹನುಮಾನ್'ನಲ್ಲಿ' 'ದೇವಿ ಸಂಧ್ಯಾ' ಪಾತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ರು ಬಳಿಕ ಕನ್ನಡತಿ ಸೀರಿಯಲ್ ನಲ್ಲಿ (Kannadati serial) ನಟಿಸಿದ್ದರು. ಸದ್ಯ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories