ಡಿಂಪಲ್ ಬ್ಯೂಟಿ ವೈಷ್ಣವಿ ಸಮ್ಮರ್ ಲುಕ್… ಮೇಡಂ ನಿಮಗೂ ವಯಸ್ಸಾಗೋಯ್ತಾ ಅಂತ ಫ್ಯಾನ್ಸ್ ಕೇಳಿದ್ಯಾಕೆ?

Published : Apr 01, 2024, 05:56 PM IST

ಕಿರುತೆರೆಯ ಡಿಂಪಲ್ ಬ್ಯೂಟಿ ವೈಷ್ಣವಿ ಹೊಸ ಫೋಟೋ ಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಮ್ಮರ್ ಲುಕ್ ಹಂಚಿಕೊಂಡಿದ್ದಾರೆ.   

PREV
17
ಡಿಂಪಲ್ ಬ್ಯೂಟಿ ವೈಷ್ಣವಿ ಸಮ್ಮರ್ ಲುಕ್… ಮೇಡಂ ನಿಮಗೂ ವಯಸ್ಸಾಗೋಯ್ತಾ ಅಂತ ಫ್ಯಾನ್ಸ್ ಕೇಳಿದ್ಯಾಕೆ?

ಸೀತಾ ರಾಮ ಸೀರಿಯಲ್ ನಲ್ಲಿ ನಾಯಕಿ ಸೀತಾ ಆಗಿ ಮಿಂಚುತ್ತಿರುವ ಕನ್ನಡ ಕಿರುತೆರೆಯ ಡಿಂಪಲ್ ಕ್ವೀನ್ ವೈಷ್ಣವಿ (Vaishnavi)ಈ ಬಿರು ಬಿಸಿಲಿನ ಸಮ್ಮರ್ ನಲ್ಲಿ ಫ್ಲೋರಲ್ ಸಮ್ಮರ್ ಔಟ್ ಫಿಟ್ ಧರಿಸಿ, ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ(Social media) ಸಖತ್ ಆಕ್ಟೀವ್ ಆಗಿರುವ ವೈಷ್ಣವಿ, ಹೆಚ್ಚಾಗಿ ತಮ್ಮ ವಿವಿಧ ಫೋಟೋಗಳನ್ನು, ಸೆಟ್ ನಲ್ಲಿ ಸಹ ನಟರೊಂದಿಗೆ ರೀಲ್ಸ್ ಮಾಡುತ್ತಾ, ಶಾಪಿಂಗ್ ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

37

ಬಿಳಿ ಬಣ್ಣದ ಸ್ಲೀವ್ ಲೆಸ್ ಡ್ರೆಸ್ ಮೇಲೆ ನೇರಳೆ, ಹಳದಿ, ಹಸಿರುವ ಬಣ್ಣದ ಪ್ಲೋರಲ್ ಡಿಸೈನ್ (floral dress) ಇರುವಂತಹ ಆರಾಮದಾಯಕ ಸಮ್ಮರ್ ಡ್ರೆಸ್ ನಲ್ಲಿ ವೈಷ್ಣವಿ ಮಿಂಚಿದ್ದಾರೆ. ಎಂದಿನಂತೆ ತಮ್ಮ ಸಿಂಪಲ್ ಲುಕ್, ಡಿಂಪಲ್ ಕಾಣಿಸುವಂತೆ ನಗುವ ಮುದ್ದಾದ ಹೂನಗುವನ್ನು ಚೆಲ್ಲಿದ್ದಾರೆ. 
 

47

ಈ ಬಾರಿ ವೈಷ್ಣವಿ ಫೋಕಸ್ ಮಾಡ್ಕೊಂಡು, ಹತ್ತಿರದಿಂದ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದಾರೆ. ಫೋಟೋಗಳಲ್ಲಿ ನಟಿ ಸ್ವಲ್ಪ ದಪ್ಪ ಕಾಣಿಸ್ತಿದ್ದಾರೆಂದು ನೆಟ್ಟಿಗರು ಹೇಳುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮೇಡಂ ನೀವು ವಯಸ್ಸಾದವರಂತೆ ಕಾಣಿಸ್ತಿದ್ದೀರಾ? ನಿಮಗೂ ವಯಸ್ಸಾಗೋಯ್ತಾ? ಎಂದೆಲ್ಲಾ ಕಾಮೆಂಟ್ ಕಾಲೆಳೆದಿದ್ದಾರೆ. 
 

57

ಇನ್ನೂ ಹೆಚ್ಚಿನ ಜನರು ನಿಮ್ಮ ಡ್ರೆಸ್ ತುಂಬಾ ಚೆನ್ನಾಗಿದೆ, ನೀವು ಮುದ್ದಾಗಿ ಕಾಣಿಸ್ತಿದ್ದೀರಿ, ಬೊಂಬೆಯಂತೆ ಕಾಣಿಸುತ್ತಿದ್ದೀರಿ, ಗಾರ್ಜಿಯಸ್, ನಿಮ್ಮ ನಗು ಚೆನ್ನಾಗಿದೆ, ಡಿಂಪಲ್ ಬ್ಯೂಟಿ, ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

67

ಅಗ್ನಿ ಸಾಕ್ಷಿ ಮೂಲಕ ಕನ್ನಡಿಗರ ಮನೆಮಗಳಾದ ವೈಷ್ಣವಿ ಬಳಿಕ, ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಸುವ ಮೂಲಕ ಮತ್ತೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹಲವು ವರ್ಷಗಳ ಬಳಿಕ ಸೀತಾರಾಮ ಸೀರಿಯಲ್ ನಲ್ಲಿ (SitaRama Serial) ನಟಿಸುವ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.
 

77

ಸೀತಾ ರಾಮ ಸೀರಿಯಲ್ ಬಗ್ಗೆ ಹೇಳೋದಾದ್ರೆ ಸೀತಾ ರಾಮ ಇಬ್ಬರೂ ಒಬ್ಬರಿಗೊಬ್ಬರು ಲವ್ ಪ್ರಪೋಸ್ ಮಾಡಿಯಾಗಿದೆ, ಒಪ್ಪಿಗೆ ಪಡೆದು ಆಗಿದೆ. ಆದರೆ ಈಗ ಇರೋದು ಸಿಹಿಯನ್ನು ಒಪ್ಪಿಸೋ ಸವಾಲು. ಬಾಲ್ಯದಿಂದ ಅಪ್ಪನ ಪ್ರೀತಿಯೇ ಕಾಣದ ಸಿಹಿ, ಅಪ್ಪ ಎಂದರೆ ಬಿಟ್ಟು ಹೋಗುವವರು ಎಂದೇ ನಂಬಿರುವ ಸಿಹಿ ರಾಮನನ್ನು ಹೇಗೆ ಅಪ್ಪನಾಗಿ ಸ್ವೀಕರಿಸುತ್ತಾಳೆ ಅನ್ನೋದು ಟ್ವಿಸ್ಟ್… 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories