ಜೀ ಕನ್ನಡ ಬಿಗ್ ರಿಯಾಲಿಟಿ ಶೋನಲ್ಲಿ ಯಶ್, ಸುದೀಪ್ ಮತ್ತು ದರ್ಶನ್; ಏಪ್ರಿಲ್ ಫೂಲ್‌ ಮಾಡ್ತಿಲ್ವಲ್ಲಾ ಎಂದ ಫ್ಯಾನ್ಸ್!

First Published | Mar 30, 2024, 9:09 PM IST

ಬೆಂಗಳೂರು (ಮಾ.30): ಬಯಸಿದ ಬಾಗಿಲು ತೆಗಿಯೋಣ ಎನ್ನು ಟ್ಯಾಗ್‌ಲೈನ್‌ ಮೂಲಕ ಹಲವು ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ 'ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್' ಅವರು ಜಂಟಿಯಾಗಿ ನಡೆಸಿಕೊಡುವ ರಿಯಾಲಿಟಿ ಶೋ ಶೀಘ್ರದಲ್ಲಿಯೇ ಬರಲಿದೆ ಎಂದು ಪ್ರೋಮೋ ವಿಡಿಯೋ ಬಿಡುಗಡೆ ಮಾಡಲಾಗಿದೆ.
 

ಹೌದು, ಕನ್ನಡ ಕಿರುತೆರಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಇತಿಹಾಸ ಸೃಷ್ಟಿಸುತ್ತಿದೆ... ಕನ್ನಡದಲ್ಲಿ ಅತೀ ದೊಡ್ಡ ರಿಯಾಲಿಟಿ ಶೋ ಬರಲಿದೆ...ಎಂದು ಪ್ರೋಮೋ ರಿಲೀಸ್ ಮಾಡಿದೆ.
 

ಈ ರಿಯಾಲಿಟಿ ಶೋನಲ್ಲಿ ಪ್ಯಾನ್ ಇಂಡಿಯಾ ನಾಯಕ ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡೆಸಿಕೊಡುತ್ತಾರೆ ಎಂದು ಪ್ರೋಮೋ ವಿಡಿಯೋವನ್ನು ಬಿಡುಗಡೆ ಮಾಡಿದೆ.
 

Tap to resize

ಆದರೆ, ಅಭಿಮಾನಿಗಳು ಈ ವಿಡಿಯೋವನ್ನು ನೋಡಿ ಇದು ನಂಬಲರ್ಹವಲ್ಲ ಎನಿಸುತ್ತಿದೆ. ನೀವು ಅಭಿಮಾನಿಗಳಿಗೆ ಏಪ್ರಿಲ್ ಫೂಲ್ ಮಾಡ್ತಿಲ್ಲ ತಾನೇ...? ಎಂದು ಪ್ರಶ್ನೆ ಮಾಡಿದ್ದಾರೆ.
 

ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೊಬ್ಬ ಅಭಿಮಾನಿ ಮೊದಲು ಸ್ಟಾರ್ ನಟರಾದ ಯಶ್, ಸುದೀಪ್ ಹಾಗೂ ದರ್ಶನ್‌ ಅವರಿಗೆ ನೀವು ಬಿಡುಗಡೆ ಮಾಡಿದ ಪ್ರೋಮೋ ವಿಚಾರ ಗೊತ್ತಿದೆಯಾ? ನೀವು ನಮ್ಮ ಕಿವಿಗೆ ಲಾಲ್ಬಾಗ್ ಇಡ್ತಾ ಇದೀರಾ ಅನಿಸ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
 

ಮತ್ತೊಬ್ಬ ಅಭಿಮಾನಿ ಅಬ್ಬಬ್ಬಬ್ಬಬ್ಬಬ್ಬಬ್ಬಬ್ಬಬ್ಬಬ್ಬ ಗುರುವೇ ಎಲ್ಲಿದಿರಾ🙏🏻 ಎಷ್ಟೋ ಅಭಿಮಾನಿಗಳ ಕನಸು ದರ್ಶನ್ ಸರ್, ಸುದೀಪ್ ಸರ್ ನಾ ಜೋಡೆತ್ತು ಆಗಿ ನೋಡೋಕೆ ಕಾಯುತ್ತಿದ್ದಾರೆ. ಜೊತೆಗೆ ಯಶ್ ಭಾಯ್ ಬಂದರೆ ಇನ್ನೂ ಸೂಪರ್ರೋ ಸೂಪರ್.. ಇದು ಇಡೀ ಕರ್ನಾಟಕ ನೆ ಖುಷಿ ಪಡೋ ವಿಷಯ ಎಂದು ಕಾಮೆಂಟ್‌ ಮಾಡಿದ್ದಾನೆ..
 

ಒಟ್ಟಾರೆ, ಜೀ ಕನ್ನಡ ವಾಹಿನಿಯಲ್ಲಿ ಈ ಪ್ರೊಮೋ ವಿಡಿಯೋ ಹಂಚಿಕೊಂಡಿದ್ದರೂ, ಈ ಬಗ್ಗೆ ವಾಹಿನಿಯೇ ಸ್ಪಷ್ಟಪಡಿಸಬೇಕು. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಬಿಡುಗಡೆಯಾದ ನಂತರ ಮೊದಲ ಕಾಮೆಂಟ್‌ 'ಇದನ್ನು ನಂಬುವುದಕ್ಕೆ ಆಗುತ್ತಿಲ್ಲ' ಎಂದು ಹೇಳಿರುವುದು ಹಲವು ಅನುಮಾನವನ್ನು ಹುಟ್ಟಿಸಿದೆ...

ಪ್ರೋಮೋ ವಿಡಿಯೋ ನೋಡಲಿ ಲಿಂಕ್ ಕ್ಲಿಕ್‌ ಮಾಡಿ: https://www.instagram.com/p/C5GzR0ANzTH/

Latest Videos

click me!