ಶರಣ್ಯ ಶೆಟ್ಟಿ ಕಿಲ್ಲರ್ ಲುಕ್‌ಗೆ ಅಭಿಮಾನಿಗಳು ಫಿದಾ

First Published | Mar 31, 2024, 5:24 PM IST

ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟಿ ಶರಣ್ಯ ಶೆಟ್ಟಿಯ ಹೊಸ ಫೋಟೋ ಶೂಟ್ ನಲ್ಲಿ ಅವರ ಕಣ್ಣೋಟಕ್ಕೆ ಹುಡುಗರು ಫಿದಾ ಆಗಿದ್ದಾರೆ. 

ಮಾಡೆಲಿಂಗ್ ಜಗತ್ತಿನ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ಶರಣ್ಯ ಶೆಟ್ಟಿ (Sharanya Shetty) ಬಳಿಕ ಗುರುತಿಸಿಕೊಂಡದ್ದು ಸೀರಿಯಲ್ ಮೂಲಕ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಸಿರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. 
 

ಮೊದಲ ಸೀರಿಯಲ್ ನಲ್ಲೇ ಸಾಹಿತ್ಯ ಎಂಬ ನೆಗೇಟೀವ್ ಪಾತ್ರದ ಮೂಲಕ ಗಮನ ಸೆಳೆದ ಶರಣ್ಯ ಶೆಟ್ಟಿ, ಬಳಿಕ ಸಿನಿಮಾಗಳಲ್ಲೂ ಮಿಂಚಿದರು. ತಮ್ಮ ಸಿನಿಮಾಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಇವರು ಪರ್ಸನಲ್ ಜೀವನದಿಂದಾಗಿಯೇ. ಶರಣ್ಯ ಶೆಟ್ಟಿ ತಮ್ಮ ಅಂದದಿಂದಾಗಿಯೇ ಜನಪ್ರಿಯತೆ ಪಡೆದ ನಟಿ. ಟ್ರೋಲ್ ಪೇಜ್ ಗಳಲ್ಲಿ ಹೆಚ್ಚಾಗಿ ಇವರ ಅಂದ ಹೊಗಳುತ್ತಾ ಪೋಸ್ಟ್ ಗಳು ಬರುತ್ತಿರುತ್ತವೆ. 
 

Tap to resize

ಶರಣ್ಯ ಶೆಟ್ಟಿ ಅವರು ಕನ್ನಡ ಸಿನಿಮಾದ ಜನಪ್ರಿಯ ನಟ ರಕ್ಷಿತ್ ಶೆಟ್ಟಿಯವರನ್ನು (Rakshith Shetty) ಮದುವೆಯಾಗೋದಾಗಿ ಭಾರಿ ಸುದ್ದಿಯಾಗಿತ್ತು. ಇಬ್ಬರೂ ಶೆಟ್ಟಿಯಾಗಿದ್ದರಿಂದ ಅಥವಾ ಒಂದು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರಿಂದಲೇ ಇವರಿಬ್ಬರ ಮದುವೆ ಸುದ್ದಿ ಸದ್ದು ಮಾಡಿತ್ತು. ಆಸರೆ ಶರಣ್ಯ ಇದನ್ನು ನಿರಾಕರಿಸಿದ್ದರು. 
 

ಸೋಶಿಯಲ್ ಮೀಡಿಯಾದಲ್ಲಿ (social media) ಸಖತ್ ಆಕ್ಟೀವ್ ಆಗಿರುವ ಶರಣ್ಯ ಶೆಟ್ಟಿ ಕೆಲವೊಮ್ಮೆ ಹಾಟ್ ಆಗಿ, ಇನ್ನು ಕೆಲವೊಮ್ಮೆ ಸಾಂಪ್ರದಾಯಿಕವಾಗಿ ಫೋಟೋ ಶೂಟ್ ಮಾಡಿಸುತ್ತಿದ್ದರು. ಈ ಫೋಟೋಗಳು ಸಾಕಷ್ಟು ಸುದ್ದಿಯಾಗಿದ್ದವು. 
 

ಇದೀಗ ಶರಣ್ಯ ಓಪನ್ ಹೇರ್ ಬಿಡ್ಕೊಂಡು ಬಿಳಿ ಬಣ್ಣದ ಕುರ್ತಾ ಟಾಪ್ ಹಾಕಿರುವ ಶರಣ, ಸಖತ್ ಕಿಲ್ಲರ್ ಲುಕ್ ನಲ್ಲಿ ಪೋಸ್ ನೀಡಿದ್ದಾರೆ. ಅವರ ಲುಕ್ ನೋಡಿ ಪಡ್ಡೆಗಳ ಹೃದಯ ದೋಚಿಹೋಗಿದೆಯಂತೆ. 
 

ಶರಣ್ಯ ಶೆಟ್ಟಿಯ ಅದ್ಭುತ ನೋಟ ನೋಡಿ ಅಭಿಮಾನಿಗಳು ಕಾಡಿಗೆ ಕಣ್ಣುಗಳು ಮರೆಮಾಚಿವೆ ನನ್ನ ..ರೆಪ್ಪೆ ಬಡಿಯದೇ ಕಣ್ಣುಗಳು ನೋಡಿವೆ  ನಿಮ್ಮನ್ನ..ದೇವರೇ ಬಂದು ಕಾಪಾಡ ಬೇಕು ನನ್ನನು ಇನ್ನಾ  ಎಂದು ಶಾಯರಿ ಬರೆದರೆ. ಇನ್ನೂ ಕೆಲವರು ಇದು ನೋಟವಲ್ಲ್ ಬಾಣ ಎಂದು ಬರೆದುಕೊಂಡಿದ್ದಾರೆ. 
 

ಇನ್ನು ಹಲವು ಬ್ಯೂಟೀ ಕಾಂಟೆಸ್ಟ್ ಗಲ್ಲಿ ಭಾಗವಹಿಸಿದ್ದ  ಶರಣ್ಯ ಶೆಟ್ಟಿ ಮಿಸ್ ಸೌತ್ ಇಂಡಿಯಾ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ (2018) ಗೆದ್ದಿದ್ದಾರೆ. ಅವರು 1980ರ ಚಲನಚಿತ್ರಕ್ಕಾಗಿ 2022 ರ ಅತ್ಯುತ್ತಮ ಸೈಮಾ ಚೊಚ್ಚಲ ಪ್ರಶಸ್ತಿಯನ್ನು ಗೆದಿದ್ದಾರೆ.
 

Latest Videos

click me!