ಗರ್ಲ್ ಫ್ರೆಂಡ್ ಜೊತೆ ಬ್ರೇಕ್ ಅಪ್ : ನಾನೀಗ ಸಿಂಗಲ್, ರೆಡಿ ಟು ಮಿಂಗಲ್ ಅಂತಿದ್ದಾರೆ ಕಿರುತೆರೆಯ ರಾಮ

Published : Mar 20, 2024, 05:24 PM IST

ಸೀತಾ ರಾಮ ಧಾರಾವಾಹಿ ಮೂಲಕ ಮತ್ತೆ ಜನ ಮನ ಗೆದ್ದಿರುವ ನಟ ಗಗನ್ ಚಿನ್ನಪ್ಪ ಅವರ ಬ್ರೇಕ್ ಅಪ್ ಆಗಿದ್ದು, ನಾನೀಗ ಸಿಂಗಲ್ ಆಗಿದ್ದೀನಿ, ಜೋಡಿಯಾಗೋದಕ್ಕೆ ರೆಡಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಯಾರಾದರೂ ಕ್ಯೂಟ್ ಹುಡುಗಿಯರು ಬೇಕಾದರೆ ಟ್ರೈ ಮಾಡಬಹುದು.  

PREV
17
ಗರ್ಲ್ ಫ್ರೆಂಡ್ ಜೊತೆ ಬ್ರೇಕ್ ಅಪ್ : ನಾನೀಗ ಸಿಂಗಲ್, ರೆಡಿ ಟು ಮಿಂಗಲ್ ಅಂತಿದ್ದಾರೆ ಕಿರುತೆರೆಯ ರಾಮ

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ (Sita Rama serial) ತನ್ನ ಕಥೆಯ ಮೂಲಕ ಅಪಾರ ಪ್ರೇಕ್ಷಕರನ್ನು ಪಡೆದಿದೆ, ಈ ಧಾರವಾಹಿಯ ಪ್ರಮುಖ ಪಾತ್ರಗಳಾದ ಸೀತಾ, ರಾಮ ಮತ್ತು ಸಿಹಿಯಂತೂ ಜನರ ಮೋಸ್ಟ್ ಫೇವರಿಟ್ ನಟರಾಗಿದ್ದಾರೆ. 
 

27

ಸೀತಾ ಮತ್ತು ರಾಮ ಜೋಡಿಯನ್ನು ಕಂಡ್ರೆ ಪ್ರೇಕ್ಷಕರಿಗಂತೂ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ. ಇಬ್ಬರು ಜೊತೆಯಾಗಿ ಫೋಟೊ ಹಾಕೋವಾಗ ಇಬ್ರು ಜೋಡಿಯಾಗಿದ್ರೆ ಎಷ್ಟೊಂದು ಚೆನ್ನಾಗಿತ್ತು ಅಂತಾನೂ ಹೇಳಿದ್ರು, ಆದರೆ ಇಲ್ಲಿವರೆಗೆ ಗಗನ್ ಚಿನ್ನಪ್ಪ (Gagan Chinnappa) ಅವರು ಲವ್ ಮಾಡ್ತಿದ್ದಾರೆ ಅನ್ನೋ ವಿಷ್ಯನೇ ಕೇಳಿಬಂದಿತ್ತು. 

37

ಗಗನ್ ಚಿನ್ನಪ್ಪ ಅವರ ಹಳೆಯ ಇನ್ ಸ್ಟಾಗ್ರಾಂ ಪೋಸ್ಟ್ (Instagram Post) ಒಂದು ಭಾರಿ ವೈರಲ್ ಆಗಿದ್ದು, ಅದರಲ್ಲಿ ಗಗನ್ ಚಿನ್ನಪ್ಪ ಅವರು ಪ್ರಾರ್ಥಾನಾ ಎನ್ನುವವರ ಫೋಟೋ ಹಾಕಿ ಹುಟ್ಟುಹಬ್ಬಕ್ಕೆ ವಿಷ್ ಮಾಡಿದ್ರು, ಅವರಿಬ್ಬರ ಫೋಟೋ ಭಾರಿ ಸುದ್ದಿಯಾಗಿತ್ತು. ಇವರಿಬ್ಬರು ಮದುವೆಯೇ ಆಗುತ್ತಾರೆಂದ ಸುದ್ದಿಯೂ ಹರಡಿತ್ತು. 

47

ಆದ್ರೆ ಈವಾಗ್ಲೂ ಇಬ್ಬರು ಜೊತೆಯಾಗಿದ್ದಾರೆ ಎನ್ನುವ ಬಗ್ಗೆ ಹಲವು ಪ್ರಶ್ನೆಗಳು ಮೂಡಿತ್ತು. ಆದರೆ ಗಗನ್ ಇತ್ತೀಚೆಗೆ ಸುವರ್ಣ ನ್ಯೂಸ್.ಕಾಮ್‌ಗೆ (Suvarnanews.com) ನೀಡಿದ ಸಂದರ್ಶನದಲ್ಲಿ ಅದು ಹಳೆಯ ವಿಡೀಯೋ ನಮ್ಮದು ಬ್ರೇಕ್ ಅಪ್ ಆಗಿದೆ, ಇಬ್ಬರು ಈಗ ಜೊತೆಯಾಗಿಲ್ಲ ಅನ್ನೋದನ್ನು ಕ್ಲಿಯರ್ ಆಗಿ ಹೇಳಿದ್ದಾರೆ. 
 

57

ಹಿಂದೆ ನಾನು ಪ್ರಾರ್ಥನಾ ಡೇಟಿಂಗ್ (dating) ಮಾಡ್ತಿದ್ವಿ, ಆದ್ರೆ ಇಬ್ಬರೂ ಕೆಲವರ್ಷಗಳ ಹಿಂದೆ ಬೇರೆ ಬೇರೆ ಆದ್ವಿ. ಅವರು ಅವರ ಲೈಫಲ್ಲಿ ಬ್ಯುಸಿಯಾಗಿದ್ದಾರೆ, ನಾನು ನನ್ನ ಲೈಫಲ್ಲಿ ಬ್ಯುಸಿಯಾಗಿದ್ದೀನಿ, ನಾವೀಗ ಜಸ್ಟ್ ಫ್ರೆಂಡ್ಸ್ ಅಷ್ಟೇ ಬೇರೆನಿಲ್ಲ. ಇದೊಂದು ಜೀವನದ ಭಾಗ ಅಷ್ಟೇ ಎಂದು ಹೇಳಿದ್ದರು. ಆದರೆ, ಇದು ನಿಜವೋ, ಸತ್ಯವೋ ಗೊತ್ತಿಲ್ಲ. 

67

2021 ರಲ್ಲಿ ಆ ಪೋಸ್ಟ್ ಮಾಡಿದ್ದೆ, ಆವಾಗ ಅಷ್ಟೊಂದು ಫೇಮಸ್ ಆಗಿರ್ಲಿಲ್ಲ ನಾನು, ಹಾಗೆ ಅದು ಸುದ್ದಿಯಾಗಿಲ್ಲ. ಈವಾಗ ಹಳೇದೆಲ್ಲಾ ಹೊರ ಬಂದಿದೆ ಅಷ್ಟೇ. ಗಯ್ಸ್ ನಾನು ಸಿಂಗಲ್, ರೆಡಿ ಟು ಮಿಂಗಲ್ ಎಂದು ತಮ್ಮ ಸಂದರ್ಶನದಲ್ಲಿ ಗಗನ್ ಚಿನ್ನಪ್ಪ ಹೇಳಿದ್ದಾರೆ. 
 

77

ಸೀತಾ ರಾಮ ಸೀರಿಯಲ್ ಬಗ್ಗೆ ಹೇಳೊದಾದರೆ ಕೊನೆಗೂ ಸೀತಾ ತನ್ನ ಮನಸಿನಲ್ಲಿರುವ ಮಾತನ್ನು ರಾಮನ ಜೊತೆ ಹಂಚಿಕೊಂಡಾಗಿದೆ, ಇಬ್ಬರ ನಡುವೆ ಪ್ರೀತಿ ಅರಳಿ ನಿಂತಿದೆ. ಮುಂದೆ ಯಾರಿಂದ ಯಾವ ರೀತಿಯೆಲ್ಲಾ ತೊಂದರೆಯಾಗುತ್ತೆ? ಸೀತಾ ರಾಮ ಕಲ್ಯಾಣ ಯಾವಾಗ ಆಗುತ್ತೆ ಅನ್ನೋದನ್ನು ಕಾದು ನೋಡಬೇಕು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories