ಸೀತಾ ರಾಮ ಸೀರಿಯಲ್ ನಟಿ ಶಾಲಿನಿ ಪತಿ ಕೂಡ ಸೀರಿಯಲ್ ನಟ.. ಇವರ್ಯಾರು ಗೊತ್ತಾ?

Published : Nov 09, 2024, 04:48 PM ISTUpdated : Nov 10, 2024, 07:52 AM IST

ಸೀತಾ ರಾಮಾ ಧಾರಾವಾಹಿಯಲ್ಲಿ ಶಾಲಿನಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಚಂದನಾ ಮಹಾಲಿಂಗಯ್ಯ ಅವರ ಪತಿ ಕೂಡ ಸಿನಿಮಾ ನಟ ಹಾಗೂ ನಿರ್ಮಾಪಕ ಕೂಡ ಹೌದು, ಅವರು ಯಾರ್ ಗೊತ್ತಾ?   

PREV
17
ಸೀತಾ ರಾಮ ಸೀರಿಯಲ್ ನಟಿ ಶಾಲಿನಿ ಪತಿ ಕೂಡ ಸೀರಿಯಲ್ ನಟ.. ಇವರ್ಯಾರು ಗೊತ್ತಾ?

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ (Sita Rama Serial) ಸಿಹಿಯ ನಿಜವಾದ ತಾಯಿ ಹಾಗೂ ಮೇಘ ಶ್ಯಾಮ್ ಪತ್ನಿ ಶಾಲಿನಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಚಂದನಾ ಮಹಾಲಿಂಗಯ್ಯ. ಇವರ ಪಾತ್ರ ನೋಡಿದ್ರೆನೆ ವೀಕ್ಷಕರಿಗೆ ಕೋಪ ಬರುತ್ತೆ, ಅಂತಹ ದುಷ್ಟ ತನದ ಪಾತ್ರ ಶಾಲಿನಿಯದ್ದು. 
 

27

ಸೀತಾ ರಾಮದಲ್ಲಿ ಮಕ್ಕಳೆಂದರೆ ಇಷ್ಟವಿಲ್ಲದ, ಕೇವಲ ತನ್ನ ಬ್ಯೂಟಿ ಬಗ್ಗೆ ಗಮನ ಹರಿಸುವ ಶಾಲಿಯಾಗಿ ನಟಿಸಿದ್ದ ಚಂದನಾ (Chandana Mahalingaiah) ಈ ಹಿಂದೆ ಸೀತಾ ವಲ್ಲಭ ಧಾರಾವಾಹಿಯಲ್ಲಿ ಸಹ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದರು. ಅದಾದ ನಂತರ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೂ ನಟಿಸಿದ್ದರು. ಬಳಿಕ ನಟನೆಗೆ ಬ್ರೇಕ್ ಕೊಟ್ಟು ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡರು. 
 

37

ಸದ್ಯ ತಮ್ಮ ಸಾಫ್ಟ್ ವೇರ್ ಉದ್ಯೋಗದ ಜೊತೆ ಜೊತೆಗೆ ಸೀತಾ ರಾಮ ಧಾರಾವಾಹಿಯಲ್ಲಿ ಶಾಲಿನಿಯಾಗಿ ಕೂಡ ನಟಿಸುತ್ತಿದ್ದಾರೆ. ಸಾಫ್ಟ್ ವೇರ್ ಉದ್ಯೋಗ ಬಿಡಲು ಇಷ್ಟವಿಲ್ಲದ ಚಂದನಾ, ನಟನೆ ಮತ್ತು ಉದ್ಯೋಗ ಎರಡನ್ನೂ ಬ್ಯಾಲೆನ್ಸ್ ಮಾಡ್ಕೊಂಡು ಸಾಗುತ್ತಿದ್ದಾರೆ. 
 

47

ಚಂದನಾ ಮಹಾಲಿಂಗಯ್ಯ ಅವರ ಪತಿ ಯಾರು ಗೊತ್ತಾ? ಅವರು ಕೂಡ ಕಿರುತೆರೆ ನಟ ಹಾಗೂ ನಿರ್ಮಾಪಕರೂ ಕೂಡ ಹೌದು. ಚಂದನಾ ಪತಿ ಹೆಸರು ದೀಪಕ್ ಮಹಾದೇವ್ (Deepak Mahadev). ಇವರು ಉದಯ ಟಿವಿಯ ಸದ್ಯ ಗಂಗೆ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 
 

57

ದೀಪಕ್ ಮಹಾದೇವ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾ ನಿನ್ನ ಬಿಡಲಾರೆ ಎನ್ನುವ ಹಾರರ್ ಸೀರಿಯಲ್ ನಲ್ಲಿ ನಾಯಕನಾಗಿ ನಟಿಸಿದ್ದರು. ಈ ಸೀರಿಯಲ್ ಮೂಲಕ ದೀಪಕ್ ವೀಕ್ಷಕರ ಮನ ಗೆದ್ದಿದ್ದರು. ನಂತರ ಉದಯ ಟಿವಿಯಲ್ಲಿ ಪ್ರಾಸಾರವಾಗುತ್ತಿದ್ದ ನಾಯಕಿ ಧಾರಾವಾಹಿಗೆ ನಾಯಕನಾಗಿ ನಟಿಸಿದ್ದರು. 
 

67

ನಂತರ ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ದೀಪಕ್ ಬಳಿಕ ಉದಯ ವಾಹಿನಿಯ 'ನಿನ್ನಿಂದಲೇ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು, ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಗಿಣಿ 2'ಧಾರಾವಾಹಿಯಲ್ಲಿ ನಾಯಕನಾಗಿ ಸಹ ಇವರು ಸದ್ದು ಮಾಡಿದ್ದರು. 
 

77

ಅಷ್ಟೇ ಅಲ್ಲ ದೀಪಕ್ ಕಾರ್ಯಕಾರಿ ನಿರ್ಮಾಪಕರೂ ಕೂಡ ಹೌದು, ನಟನೆಯ ಜೊತೆಗೆ ಇವರು ತಮ್ಮ ವೃದ್ಧಿ ಕ್ರಿಯೆಷನ್ ಮೂಲಕ ಸೀರಿಯಲ್ ನಿರ್ವಹಣೆ ಮಾಡುವ ಕೆಲಸಕ್ಕೂ ಕೈ ಹಾಕಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿ, ಉದಯ ವಾಹಿನಿಯ ಗಂಗೆ ಗೌರಿ, ತ್ರಿಪುರ ಸುಂದರಿ ಧಾರಾವಾಹಿಗಳಿಗೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ., 
 

Read more Photos on
click me!

Recommended Stories