ಪತಿ - ಮಗುವಿನ ಜೊತೆ ಮುದ್ದಾದ ಫ್ಯಾಮಿಲಿ ಫೋಟೊ ಶೇರ್ ಮಾಡಿದ ನಟಿ ತೇಜಸ್ವಿನಿ ಪ್ರಕಾಶ್

First Published | Nov 9, 2024, 1:10 PM IST

ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಮಿಂಚಿದ ನಟಿ ತೇಜಸ್ವಿನಿ ಪ್ರಕಾಶ್ ಇದೀಗ ತಮ್ಮ ಫ್ಯಾಮಿಲಿಯ ಮುದ್ದಾದ ಫೋಟೊ ಶೇರ್ ಮಾಡಿದ್ದಾರೆ. 
 

ತೇಜಸ್ವಿನಿ ಪ್ರಕಾಶ್ (Tejaswini Prakash) ಕನ್ನಡ ಸಿನಿಮಾಗಳಲ್ಲಿ, ನಂತರ ಕನ್ನಡ ಸೀರಿಯಲ್ ಗಳಲ್ಲಿ ಗುರುತಿಸಿಕೊಂಡ ನಟಿ, ಸದ್ಯ ಮದುವೆಯಾದ ಬಳಿಕ ನಟನೆಯಿಂದ ದೂರ ಉಳಿದಿದ್ದಾರೆ. 
 

ಸವಿ ಸವಿ ನೆನಪು, ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಸೇರಿದಂತೆ ಅನೇಕ ಸಿನೆಮಾಗಳಿಗೆ ತೇಜಸ್ವಿನಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲ ಕನ್ನಡ ಸೀರಿಯಲ್ ಗಳಲ್ಲೂ ಇವರು ನಟಿಸಿದ್ದಾರೆ. 
 

Tap to resize

2022ರ ಮಾರ್ಚ್ ತಿಂಗಳಿನಲ್ಲಿ ತೇಜಸ್ವಿನಿ ಮತ್ತು ಫನಿ ವರ್ಮ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು, 2023ರ ಡಿಸೆಂಬರ್ ನಲ್ಲಿ ನಟಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. 
 

ಇತ್ತೀಚೆಗಷ್ಟೇ ನಟಿ ತಮ್ಮ ಮಗಳು ಅನ್ವಿಕಾಳ ಫೇಸ್ ರಿವೀಲ್ ಮಾಡಿದ್ದರು. ಇದೀಗ ಮಗಳ ಒಂದು ವರ್ಷದ ಹುಟ್ಟು ಹಬ್ಬ ಹಾಗೂ ತಮ್ಮ ಹುಟ್ಟು ಹಬ್ಬ ಹತ್ತಿರ ಬರುತ್ತಿದ್ದಂತೆ ನಟಿ ಸುಂದರವಾದ ಫ್ಯಾಮಿಲಿ ಫೋಟೊ ಶೇರ್ ಮಾಡಿದ್ದಾರೆ. 
 

ಗಂಡ ಹಾಗೂ ಮಗಳ ಜೊತೆಗಿನ ಮುದ್ದಾದ ಫೋಟೊ ಶೂಟ್ ಇದಾಗಿದ್ದು,ಇದರ ಜೊತೆಗೆ ನಟಿ ನೀನು ಬೆಳಿತಾ ಇರೋದನ್ನ ನೋಡಿ ಒಂದು ವರ್ಷ ಆಗ್ತಾ ಬಂತು, ನಿನ್ನನ್ನು ಇವತ್ತು ನಾಳೆ ಯಾವಾಗ್ಲೂ ಪ್ರೀತಿ ಮಾಡ್ತೇವೆ. ನಿನಗೆ ಹಲ್ಲು ಬಂದು, ನಿನ್ನ ಮೊದಲ ನಗು ನೋಡಿ ಒಟ್ಟಲ್ಲಿ ನಾವು ಮೂವರು ಜೊತೆಯಾಗಿ ಒಂದು ವರ್ಷ ಆಗ್ತಾ ಬಂದಿದೆ. ಥ್ಯಾಂಕ್ಯೂ ನಮ್ಮ ಜೀವನದಲ್ಲಿ ಖುಷಿ ಮತ್ತು ಪ್ರೀತಿಯನ್ನು ತಂದಿರೋದಕ್ಕೆ ಎಂದಿದ್ದಾರೆ. 
 

ಮುದ್ದಾದ ಫ್ಯಾಮಿಲಿ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಡಿಸೆಂಬರ್ 17 ರಂದು ತೇಜಸ್ವಿನಿ ಪ್ರಕಾಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅದೇ ದಿನ ಕಳೆದ ವರ್ಷ ಮಗಳು ಅನ್ವಿಕಾಳು ಹುಟ್ಟಿದ್ದಳು, ಹಾಗಾಗಿ ಈ ವರ್ಷದ ಬರ್ತ್ ಡೇ ತುಂಬಾನೆ ವಿಶೇಷವಾಗಿದೆ. 
 

Latest Videos

click me!