Prithvi Bhat Honeymoon: ಮದುವೆಯ ಬಳಿಕ ಪತಿ ಜೊತೆ ಮಲೇಷ್ಯಾಕ್ಕೆ ಹಾರಿದ ಗಾಯಕಿ ಪೃಥ್ವಿ ಭಟ್

Published : Jun 12, 2025, 01:12 PM ISTUpdated : Jun 12, 2025, 03:56 PM IST

ಪೋಷಕರ ವಿರೋಧದ ನಡುವೆ ಮದುವೆಯಾಗಿ ಸುದ್ದಿಯಲ್ಲಿದ್ದ ಗಾಯಕಿ ಪೃಥ್ವಿ ಭಟ್, ಇದೀಗ ತಮ್ಮ ಪತಿ ಅಭಿಷೇಕ್ ಜೊತೆ ಮಲೇಷ್ಯಾಕ್ಕೆ ಹಾರಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ. 

PREV
18

ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಪೃಥ್ವಿ ಭಟ್(Singer Prithwi Bhat). ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ಗಾಯಕಿ ಪತಿ ಜೊತೆ ಮಲೇಷ್ಯಾಕ್ಕೆ ಹಾರಿದ್ದಾರೆ.

28

ಗಾಯಕಿ ಪೃಥ್ವಿ ಭಟ್ ಇತ್ತೀಚೆಗೆ ಮನೆಯವರ ವಿರೋಧದ ನಡುವೆ ಖಾಸಗಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದರು. ಆ ಬಳಿಕ ಅದ್ಧೂರಿಯಾಗಿ ಆರತಕ್ಷತೆ ಕೂಡ ನಡೆದಿತ್ತು.

38

ರಿಜಸ್ಟರ್ ಮದುವೆಯಾಗಿದ್ದ ಪೃಥ್ವಿ ಭಟ್‌ ಹಾಗೂ ಅಭಿಷೇಕ್‌ ತಿಂಗಳ ಬಳಿಕ, ಗ್ರ್ಯಾಂಡ್ ಆಗಿ ರಿಸೆಪ್ಷನ್‌ (reception) ಮಾಡಿಕೊಂಡಿದ್ದರು. ಆರತಕ್ಷತೆಗೆ ಖ್ಯಾತ ಗಾಯಕರು, ತಾರೆಯರು ಆಗಮಿಸಿದ್ದರು. ಇದೀಗ ಪೃಥ್ವಿ ಭಟ್ ಹಾಗೂ ಅಭಿಷೇಕ್‌ ಮಲೇಷ್ಯಾಕ್ಕೆ ಹಾರಿದ್ದಾರೆ.

48

ಪೃಥ್ವಿ ಭಟ್ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ಜೋಡಿ ಮಲೇಷ್ಯಾದಲ್ಲಿರುವ ದೇಗುಲಗಳು ಸೇರಿ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ.

58

ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಪೆಟ್ರೋನಾಸ್ ಟ್ವಿನ್ ಟವರ್ಸ್‌ಗೆ (twin towers) ಪೃಥ್ವಿ ಭಟ್‌ ಭೇಟಿ ಅದರ ಮುಂದೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ.

68

ಇದಲ್ಲದೇ ಮಲೇಷ್ಯಾದಲ್ಲಿರುವ ಜಗತ್ಪಸಿದ್ಧ ಬಟು ಕೇವ್, ಮುರುಗಾ ದೇವಸ್ಥಾನ (Muruga Temple), ಸೇರಿ ಹಲವಾರು ಪ್ರಮುಖ ತಾಣಗಳಿಗೆ ಭೇಟಿ ನೀಡಿದ್ದಾರೆ. ವಿಶ್ವ ಅತಿ ಎತ್ತರ ಮುರುಗನ ಮೂರ್ತಿಯ ಮುಂದೆ ನಿಂತು ಪತಿ-ಪತ್ನಿ ಫೋಟೊ ತೆಗೆಸಿಕೊಂಡಿದ್ದಾರೆ.

78

ಅಭಿಷೇಕ್ ಜೊತೆಗಿನ ಫೋಟೊಗಳನ್ನು ನೋಡಿ ಜನ ಇಬ್ಬರ ಜೋಡಿ ಚೆನ್ನಾಗಿದೆ, ಹೀಗೆಯೇ ಇಬ್ಬರು ಜೊತೆಯಾಗಿ, ಸಂತೋಷವಾಗಿರಿ, ನಿಮ್ಮ ಪ್ರೀತಿ ಯಾವಾಗ್ಲೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ.

88

ಪೃಥ್ವಿ ಭಟ್ ಮತ್ತು ಅಭಿಷೇಕ್ ಹಲವು ಸಮಯದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಪೃಥ್ವಿ ಮನೆಯವರು ಒಪ್ಪಿರಲಿಲ್ಲ. ನಂತರ ಈ ಜೋಡಿ, ಮದುವೆಯಾಗಿದ್ದರು. ಆ ಬಳಿಕ ಪೃಥ್ವಿ ತಂದೆಯ ಆಡಿಯೋ ವೈರಲ್ ಆಗಿ ಭಾರಿ ಸುದ್ದಿಯಾಗಿತ್ತು.

Read more Photos on
click me!

Recommended Stories