ಮುಂಬೈಗೆ ಹಾರಿ ಹಿಂದಿ ಸಿನಿಮಾ ಗಿಟ್ಟಿಸಿಕೊಂಡ ಬಿಗ್ ಬಾಸ್ ಶ್ರುತಿ ಪ್ರಕಾಶ್; ಕನ್ನಡತಿ ಮೇಲೆ ನೆಟ್ಟಿಗರು ಗರಂ

Published : Aug 18, 2023, 04:18 PM ISTUpdated : Aug 18, 2023, 04:26 PM IST

ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಶ್ರುತಿ ಪ್ರಕಾಶ್ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಮುಂಬೈಗೆ ಹಾರಿದ ಮೇಲೆ ಜರ್ನಿ ಹೇಗಿತ್ತು ಎಂದು ರಿವೀಲ್ ಮಾಡಿದ ನಟಿ...   

PREV
17
ಮುಂಬೈಗೆ ಹಾರಿ ಹಿಂದಿ ಸಿನಿಮಾ ಗಿಟ್ಟಿಸಿಕೊಂಡ ಬಿಗ್ ಬಾಸ್ ಶ್ರುತಿ ಪ್ರಕಾಶ್; ಕನ್ನಡತಿ ಮೇಲೆ ನೆಟ್ಟಿಗರು ಗರಂ

Haunted ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಬಿಗ್ ಬಾಸ್ ಸ್ಪರ್ಧಿ ಶ್ರುತಿ ಪ್ರಕಾಶ್. ವಿಕ್ರಮ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ.

27

'ದಕ್ಷಿಣ ಸಿನಿಮಾ ರಂಗದಲ್ಲಿ ಇರುವವರಿಗೆ ಬಾಲಿವುಡ್ ಸಿನಿಮಾ ಗಿಟ್ಟಿಸಿಕೊಳ್ಳುವುದು ತುಂಬಾನೇ ಕಷ್ಟ. ಹಿಂದಿ ಧಾರಾವಾಹಿ ಮೂಲಕ ಜರ್ನಿ ಆರಂಭಿಸಿದೆ' ಎಂದು ಟೈಮ್ಸ್‌ ಆಫ್ ಇಂಡಿಯಾ ಸಂದರ್ಶನಲ್ಲಿ ಶ್ರುತಿ ಮಾತನಾಡಿದ್ದಾರೆ. 

37

'ಕಿರುತೆರೆ ನಟಿ ಎಂದು ಮಾತ್ರ ಜನರು ಗುರುತಿಸುತ್ತಿದ್ದರು ಎಂದು ಸಣ್ಣ ಬ್ರೇಕ್ ತೆಗೆದುಕೊಂಡು ಸಿನಿಮಾ ಮಾಡಲು ಶುರು ಮಾಡಿದೆ. ಈ ಬ್ರೇಕ್‌ನಲ್ಲಿ ಕಲಾವಿದರಿಗೆ ಯಶಸ್ಸು ಸಿಗಲು ಏನು ಮಾಡಬೇಕು ಎಂದು ಕಲಿತೆ' ಎಂದು ಶ್ರುತಿ ಹೇಳಿದ್ದಾರೆ. 

47

'ಕಲಾವಿದರಿಗೆ ತಾಳ್ಮೆ ಮತ್ತು ಪರಿಶ್ರಮ ಮುಖ್ಯವಾಗುತ್ತದೆ. ರಾತ್ರೋರಾತ್ರಿ ಯಾವ ಕೆಲಸವೂ ನಡೆಯುವುದಿಲ್ಲ ಎಂದು ತಿಳಿದುಕೊಂಡಿರುವೆ. ಒಳ್ಳೆ ಕೆಲಸ ಆಗಲು ಸಮಯ ಹಿಡಿಯುತ್ತದೆ' ಎಂದಿದ್ದಾರೆ ಶ್ರುತಿ. 

57

'ಇದೊಂದು ಸಸ್ಪೆನ್ಸ್‌ ಥ್ರಿಲರ್ ಸಿನಿಮಾ ಆಗಿದ್ದು ನನ್ನ ಲಾಂಚ್‌ಗೆ ಅದ್ಭುತ ಓಪನಿಂಗ್ ಸಿಕ್ಕಿದೆ. ಬಾಲ್ಯದಲ್ಲಿ Carnatic Music ಕಲಿತಿರುವೆ, ಆಗ ಎಲ್ಲೇ ಹೋದರೂ ವಾಕ್‌ಮ್ಯಾನ್ ಹಿಡಿದುಕೊಂಡಿರುವೆ'

67

'ಸೋಷಿಯಲ್ ಮೀಡಿಯಾದಲ್ಲಿ ಹಾಡಿ ಪೋಸ್ಟ್ ಮಾಡಿದಾಗ ಜನರು ಮೆಚ್ಚುಗೆ ಖುಷಿ ಕೊಡುತ್ತದೆ ಮತ್ತಷ್ಟು ಹಾಡಲು ಎನರ್ಜಿ ಕೊಡುತ್ತದೆ'

77

'ಹಲವರ ರೀತಿ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗಿದ ಕನ್ನಡಿಗರಲ್ಲಿ ನಾನು ಒಬ್ಬಳು. ಅಲ್ಲಿರುವೆ ಅಂದ ಮಾತ್ರಕ್ಕೆ ಕನ್ನಡ ಸಿನಿಮಾಗಳನ್ನು ಬಿಟ್ಟುಕೊಟ್ಟಿಲ್ಲ' 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories