ತಂದೆ ಕಳೆದುಕೊಂಡ ಮಗನಿಗಾಗಿ ಅನೇಕ ತ್ಯಾಗ ಮಾಡಿದ ಸಿದ್ಧಾರ್ಥ್ ತಾಯಿ!

Published : Sep 05, 2021, 04:02 PM ISTUpdated : Sep 05, 2021, 04:13 PM IST

ಟಿವಿ ಮತ್ತು ಬಾಲಿವುಡ್ ನಟ 40  ವರ್ಷದ ಸಿದ್ಧಾರ್ಥ್ ಶುಕ್ಲಾರ ಸಾವು ಎಲ್ಲರಿಗೂ ಆಘಾತವುಂಟುಮಾಡಿದೆ. ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ.ಸಿದ್ಧಾರ್ಥ್ ಟಿವಿ ಕಾರ್ಯಕ್ರಮ ಬಾಲಿಕಾ ವಧು ಮೂಲಕ ಮನೆ ಮನೆ ಜನಪ್ರಿಯತೆಯನ್ನು ಗಳಿಸಿದರೂ, ಅವರು ಬಿಗ್ ಬಾಸ್ 13 ರ ವಿಜೇತರಾಗುವ ಮೂಲಕ ಹೆಚ್ಚು ಪ್ರಸಿದ್ಧರಾದರು. ಅವರ ಫ್ಯಾಮಿಲಿಯ ಬಗ್ಗೆ ವಿವರ ಇಲ್ಲಿದೆ.

PREV
19
ತಂದೆ ಕಳೆದುಕೊಂಡ ಮಗನಿಗಾಗಿ ಅನೇಕ ತ್ಯಾಗ ಮಾಡಿದ ಸಿದ್ಧಾರ್ಥ್ ತಾಯಿ!

ಮನೆಯಲ್ಲಿ ಚಿಕ್ಕವನಾಗಿದ್ದ ಸಿದ್ಧಾರ್ಥ ಮೇಲೆ ಎಲ್ಲರಿಗೂ ಹೆಚ್ಚು ಪ್ರೀತಿ ಎಂದು ಬಿಗ್ ಬಾಸ್‌ಗೆ ಹೋದ ನಂತರ, ಅವರ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು. ಸಿದ್ಧಾರ್ಥ್ ಯಾವಾಗಲೂ 3 ಜನರ ಕಾವಲಿನಲ್ಲಿರುತ್ತಾನೆ. ಆತನ ಇಬ್ಬರು ಹಿರಿಯ ಸಹೋದರಿಯರು ಮತ್ತು ತಾಯಿ ಯಾವಾಗಲೂ ಅವನ ಮೇಲೆ ಕಣ್ಣಿಟ್ಟಿದ್ದರು ಎಂದು ನಟನ ಸಹೋದರಿ ಹೇಳಿದ್ದರು

29

ಸಿದ್ಧಾರ್ಥ್ ಶುಕ್ಲಾ ತನ್ನ ತಾಯಿ ರೀತಾಗೆ ತುಂಬಾ ಆಪ್ತರಾಗಿದ್ದರು. ತಂದೆಯ ಮರಣದ ನಂತರ, ತಾಯಿ ಅವರನ್ನು ಏಕಾಂಗಿಯಾಗಿ ಬೆಳೆಸಿದರು. ತಾಯಿ ಇಲ್ಲದೆ ಅವರು ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕೆಲವು ವರ್ಷಗಳ ಹಿಂದೆ, ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಸಿದ್ಧಾರ್ಥ್ ತನ್ನ ತಾಯಿಯ ಹೋರಾಟದ ಬಗ್ಗೆ ಹೇಳಿದ್ದರು.

39

15-16 ವರ್ಷಗಳ ಹಿಂದೆ ತಂದೆ ತೀರಿಕೊಂಡಾಗ ಮನೆಯ ಸೂರು ನಮ್ಮ ತಲೆಯಿಂದ ಕಿತ್ತುಕೊಂಡಂತೆ ಭಾಸವಾಯಿತು. ಆದರೆ ನನ್ನ ತಾಯಿ  ಬೆಟ್ಟದಂತೆ ಬಲವಾಗಿ ಇದ್ದರು. ತಾಯಿ ತನ್ನನ್ನು ಸೋಲಲು ಬಿಡಲಿಲ್ಲ.

 

49

ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರದಿದ್ದರೂ, ತಾಯಿ ಮೂರು ಮಕ್ಕಳನ್ನು ಚೆನ್ನಾಗಿ ಬೆಳೆಸಿದರು ಮತ್ತು ಎಲ್ಲಾ ಬೇಡಿಕೆಗಳನ್ನು ಪೂರೈಸಿದರು. ನಮ್ಮ ಬೇಡಿಕೆಯನ್ನು ಈಡೇರಿಸಲು ಅವರು ತನ್ನ ಅನೇಕ ಆಸೆಗಳನ್ನು ತ್ಯಾಗ ಮಾಡಿದರು ಎಂದು ತಾಯಿ ಬಗ್ಗೆ ಹೇಳಿದ್ದರು ಸಿದ್ಧಾರ್ಥ್ ಶುಕ್ಲಾ. 

59

ಡಿಸೆಂಬರ್ 12, 1980 ರಂದು ಜನಿಸಿದ ಸಿದ್ಧಾರ್ಥ್ ಶುಕ್ಲಾ ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು ಮತ್ತು ಒಳಾಂಗಣ ವಿನ್ಯಾಸದಲ್ಲಿ ಪದವಿ ಪಡೆದರು. ಬಾಲ್ಯದಲ್ಲಿ ಕ್ರೀಡಾಪಟುವಾಗಿದ್ದ ಅವರು ಶಾಲೆಯಲ್ಲಿ ಫುಟ್ಬಾಲ್ ಮತ್ತು ಟೆನಿಸ್ ಆಡುತ್ತಿದ್ದರು.

69

ಅವರು  ಮಾಡೆಲ್ ಆಗಿ ವೃತ್ತಿ ಆರಂಭಿಸಿದರು. 2004 ರಲ್ಲಿ, ಅವರು ಟಿವಿಯ ಮೂಲಕ  ನಟನೆಯ ಕೆರಿಯರ್‌ ಶುರು ಮಾಡಿದರು. ಸಿದ್ಧಾರ್ಥ್ ಶುಕ್ಲಾ ಬಾಲಿಕಾ ವಧು ಧಾರಾವಾಹಿಯ ಮೂಲಕ ಮನೆ ಮಾತಾದರು. 

79

ಸಿದ್ಧಾರ್ಥ್ ಶುಕ್ಲಾ ಅವರಿಗೆ 2005 ರಲ್ಲಿ ಗ್ಲಾಡ್ರಾಗ್ಸ್ ಮನ್ಹಂಟ್ ಬೆಸ್ಟ್‌ ಮಾಡೆಲ್‌ ಪ್ರಶಸ್ತಿ ಮತ್ತು 2012 ರಲ್ಲಿ ಗೋಲ್ಡನ್ ಪೆಟಲ್ ಪ್ರಶಸ್ತಿಯನ್ನು ನೀಡಲಾಯಿತು

89

ಸಿದ್ಧಾರ್ಥ್ 2013 ರಲ್ಲಿ ಬಾಲಿಕಾ ವಧು ಟಿವಿ ಶೋಗಾಗಿ  ITA ಯಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. 2015 ರಲ್ಲಿ ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರಕ್ಕಾಗಿ ಅವರಿಗೆ ಸ್ಟಾರ್‌ಡಸ್ಟ್ ಆವಾರ್ಡ್‌ ಪಡೆದಿದ್ದರು. ಸಿದ್ಧಾರ್ಥ್ ಶುಕ್ಲಾ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದರು. 

99

ಆದರೆ ಅವರು ಬಿಗ್ ಬಾಸ್ 13 ರಿಂದ ಹೆಚ್ಚಿನ  ಜನಪ್ರಿಯತೆಯನ್ನು ಪಡೆದರು. ಸಿದ್ಧಾರ್ಥ್ ಅವರ ಆಟ ಮತ್ತು ಅವರ ಶೈಲಿ ಪ್ರೇಕ್ಷಕರಿಗೆ ಇಷ್ಟವಾಯಿತು. ಬಿಗ್ ಬಾಸ್ 13 ರಲ್ಲಿ, ಶಹನಾಜ್ ಗಿಲ್ ಜೊತೆಗಿನ ಅವರ ರೋಮ್ಯಾನ್ಸ್‌ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು ಮತ್ತು ನಂತರ ಇಬ್ಬರೂ ಅನೇಕ ಸಂಗೀತ ವೀಡಿಯೊಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇವರಿಬ್ಬರೂ ಸಂಬಂಧದಲ್ಲಿದ್ದರು ಎಂಬ ವರದಿಗಳು ಹರಿದಾಡುತ್ತಿದ್ದವು. 

click me!

Recommended Stories