ಟಿವಿಯಲ್ಲೇ ಮೊದಲು17 ನಿಮಿಷಗಳ ಬೋಲ್ಡ್‌ ಇಂಟಿಮೇಟ್‌ ಸೀನ್‌: ವೈರಲ್‌!

First Published | Sep 2, 2021, 3:58 PM IST

ಫೇಮಸ್‌ ಹಿಂದಿ ಟಿವಿ ಸೀರಿಯಲ್ 'ಬಡೇ ಅಚ್ಚೇ ಲಗ್ತೆ ಹೇ' ನಲ್ಲಿ ತಮ್ಮ ನಿಜವಾದ ಹೆಸರಿನಲ್ಲಿಯೇ ಪಾತ್ರವನ್ನು ನಿರ್ವಹಿಸಿದ ನಟ ರಾಮ್ ಕಪೂರ್ ಅವರಿಗೆ 48 ವರ್ಷ. ಸೆಪ್ಟೆಂಬರ್ 1, 1973 ರಂದು ನವದೆಹಲಿಯಲ್ಲಿ ಜನಿಸಿದ ರಾಮ್ ಈ ಧಾರಾವಾಹಿಯಿಂದ ಮನ್ನಣೆ ಪಡೆದರು. ಸುಮಾರು 3 ವರ್ಷಗಳ ಕಾಲ ನಡೆದ ಈ ಶೋನಲ್ಲಿ ಅವರ ಮತ್ತು ಸಾಕ್ಷಿ ತನ್ವಾರ್ ಅವರ ಕೆಮಿಸ್ಟ್ರಿಗೆ ವೀಕ್ಷಕರು ಫುಲ್‌ ಫಿದಾ ಆಗಿದ್ದರು. ಈ ಧಾರಾವಾಹಿಯಲ್ಲಿ, ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ನಡುವಿನ ಲವ್‌ ಮೇಕಿಂಗ್ ದೃಶ್ಯ ಸಕ್ಕತ್‌ ವೈರಲ್‌ ಆಗಿದ್ದವು. 

ರಾಮ್ ಕಪೂರ್ ಸಾಕ್ಷಿ ತನ್ವಾರ್ ಜೊತೆ ಮೊದಲ ಬಾರಿಗೆ ತೆರೆ ಮೇಲೆ ಚುಂಬಿಸುವ ದೃಶ್ಯವನ್ನು ಮಾಡಿದರು. ಚುಂಬನ ದೃಶ್ಯಗಳನ್ನು ಸಾಮಾನ್ಯವಾಗಿ ಟಿವಿ ಕಾರ್ಯಕ್ರಮಗಳಲ್ಲಿ ತೋರಿಸದಿದ್ದರೂ, ಈ ಸೀರಿಯಲ್ ಎಲ್ಲಾ ಮಿತಿಗಳನ್ನು ಮುರಿದು ಹೊಸ ಚರ್ಚೆಗೆ ನಾಂದಿ ಹಾಡಿತು.

ಈ ದೃಶ್ಯ ಅಂತರ್ಜಾಲದಲ್ಲಿ ಸಾಕಷ್ಟು ವೀಕ್ಷಿಸಲ್ಪಟ್ಟಿತ್ತು. ಜನರು ಇದನ್ನು ತುಂಬಾ ಬೋಲ್ಡ್ ಎಂದು ಕರೆದರು. ಬೋಲ್ಡ್‌ ದೃಶ್ಯ ನೀಡಿದ ಸಾಕ್ಷಿ ತನ್ವರ್ ಮೊದಲಿಗೆ ಮೌನವಾಗಿದ್ದರು. ಆದರೆ ನಂತರ ಆಕೆಯೂ ಅದರ ಬಗ್ಗೆ ಮಾತನಾಡಿದ್ದರು. 

Tap to resize

ಈ ದೃಶ್ಯದ ಬಗ್ಗೆ ಅನಗತ್ಯವಾಗಿ ತುಂಬಾ ಹೈಪ್‌ ಮಾಡಲಾಗಿದೆ ಎಂದು ಸಾಕ್ಷಿ ಹೇಳಿದ್ದರು. ಆದಾಗ್ಯೂ, ಈ ದೃಶ್ಯವನ್ನು ಮಾಡುವ ಮೊದಲು, ಅವರು ತಮ್ಮ ಹೆತ್ತವರನ್ನು ಒಪ್ಪಿಸಲು ತುಂಬಾ ಕಷ್ಷ ಪಡಬೇಕಾಯಿತು. ಅವರು ಮೊದಲು ಅದಕ್ಕೆ ಸಿದ್ಧರಾಗಿರಲಿಲ್ಲ ಎಂದೂ ಹೇಳಿದ್ದರು.

ರಾಮ್ ಕಪೂರ್ ಮತ್ತು ಸಾಕ್ಷಿ ತನ್ವಾರ್ ಅವರ ಈ ದೃಶ್ಯದಿಂದಾಗಿ, ಕಾರ್ಯಕ್ರಮವು ಟಿಆರ್‌ಪಿಯಲ್ಲಿ ಭಾರಿ ಜಿಗಿತ ಕಂಡಿದೆ. ಇಬ್ಬರ ನಡುವೆ ಸುಮಾರು 17 ನಿಮಿಷಗಳ ಸುದೀರ್ಘ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ಇಂಟಿಮೇಟ್‌ ಸೀನ್‌ನಲ್ಲಿ ರಾಮ್ ಕಪೂರ್ ಸಾಕ್ಷಿ ತನ್ವಾರ್ ಜೊತೆ ಲಿಲ್‌ಲಾಕ್ ಕೂಡ ಮಾಡಿದ್ದಾರೆ.

ರಾಮ್ ಕಪೂರ್ ಮತ್ತು ಸಾಕ್ಷಿ ತನ್ವಾರ್ ಅವರ ಪರದೆ ಮೇಲಿನ ಈ ರೊಮ್ಯಾಂಟಿಕ್ ದೃಶ್ಯ ಸಿಕ್ಕಾಪಟ್ಟೆ ಸುದ್ದಿಯಾಯಿತು. ಇಬ್ಬರ ನಡುವೆಯ ಪ್ಯಾಸಿನೇಟ್‌ ಕಿಸ್ಸಿಂಗ್‌ನ ಚರ್ಚೆ ಹಲವು ವರ್ಷಗಳ ಕಾಲ ಮುಂದುವರೆಯಿತು. ಟಿವಿಯಲ್ಲಿ ಅಷ್ಟೊಂದು ಬೋಲ್ಡ್‌ನೆಸ್‌ ಈ ಹಿಂದೆ ಯಾವುದೇ ನಟ ಮತ್ತು ನಟಿಯರ ನಡುವೆಯೂ ತೋರಿಸಿರಲಿಲ್ಲ.

ರಾಮ್ ಮತ್ತು ಸಾಕ್ಷಿಯವರ ಈ ಇಂಟಿಮೇಟ್‌ ಸೀನ್‌ ಮಾರ್ಚ್ 12, 2012 ರಂದು ಪ್ರಸಾರವಾಯಿತು. ಇದರ ನಂತರ, ಮರುದಿನ ಮಾಧ್ಯಮಗಳಲ್ಲಿ ರಾಮ್ ಮತ್ತು ಸಾಕ್ಷಿ  ಹೆಡ್‌ಲೈನ್‌ ನ್ಯೂಸ್‌ ಆಗಿದ್ದರು. ಈ ದೃಶ್ಯದಿಂದಾಗಿ, ಕಾರ್ಯಕ್ರಮದ ರೇಟಿಂಗ್‌ಗಳು ಬಹಳಷ್ಟು ಮೇಲೆರಿತು. ಈ  ಜೋಡಿಯನ್ನು ಟಿವಿಯ ಸಾಂಪ್ರದಾಯಿಕ ಜೋಡಿ ಎಂದು ಕರೆಯಲಾಗುತ್ತದೆ.

ಈ 17 ನಿಮಿಷಗಳ ರೊಮ್ಯಾಂಟಿಕ್ ಸೀನ್‌ನಲ್ಲಿ, ರಾಮ್ ಮತ್ತು ಸಾಕ್ಷಿ ಕೆಲವೊಮ್ಮೆ ಒಬ್ಬರನ್ನೊಬ್ಬರು ರೊಮ್ಯಾಂಟಿಕ್ ರೀತಿಯಲ್ಲಿ ಚುಡಾಯಿಸುತ್ತಿದ್ದರು ಮತ್ತು ಕೆಲವೊಮ್ಮೆ ಚುಂಬಿಸುತ್ತಿದ್ದರು. ಈ ದೃಶ್ಯದಲ್ಲಿ, ಇಬ್ಬರೂ ಪರಸ್ಪರ ಎರಡು ಬಾರಿ ಮುತ್ತಿಟ್ಟರು.

ಈ ದೃಶ್ಯವನ್ನು ಕೆಲವರು ಟೀಕಿಸಿದರು ಮತ್ತು ಗೇಲಿ ಮಾಡಿದರು. 'ಕಾರ್ಯಕ್ರಮದಲ್ಲಿ ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ಲೈಂಗಿಕ ಸಂಬಂಧ ಹೊಂದಿದ್ದರು. ಡರ್ಟಿ ಪಿಕ್ಚರ್‌ ಹಿಟ್‌ ಆದ ಕಾರಣಕ್ಕೆ ಧಾರಾವಾಹಿಯನ್ನು ಕೂಡ ಡರ್ಟಿ ಮಾಡುತ್ತೀರಾ ಎಂದು ಏಕ್ತಾರನ್ನು ಕೇಳಿ ಎಂದು ಎಂಟಿವಿ ಇಂಡಿಯಾ ಟ್ವಿಟರ್‌ನಲ್ಲಿ ಬರೆದಿತ್ತು.

1997 ರಿಂದ ರಾಮ್ ಕಪೂರ್ ಟಿವಿ ಉದ್ಯಮದಲ್ಲಿ ನಟನಾಗಿ ಕೆಲಸ ಮಾಡುತ್ತಿದ್ದಾರೆ. ಅವರು 2000 ರಲ್ಲಿ 'ಘರ್ ಏಕ್ ಮಂದಿರ್' ಧಾರಾವಾಹಿಯಿಂದ ಮೊದಲ ಬ್ರೇಕ್‌ ಮತ್ತು ಜನಪ್ರಿಯತೆ ಪಡೆದರು.

ಒಂದು ಕಡೆ ಈ ಕಾರ್ಯಕ್ರಮವು ಅವರನ್ನು ರೀಲ್ ಜೀವನದಲ್ಲಿ ಜನಪ್ರಿಯಗೊಳಿಸಿತು. ಅದೇ ಸಮಯದಲ್ಲಿ, ನಿಜ ಜೀವನದಲ್ಲೂ ಅದೃಷ್ಟ ಒಲಿಯಿತು. ಈ ಕಾರ್ಯಕ್ರಮದಲ್ಲಿ ಅವರ ಸಹ ನಟ ಆಗಿದ್ದ ಗೌತಮಿ ಗಾಡ್ಗಿಲ್ ನಂತರ ನಿಜ ಜೀವನದ ಪತ್ನಿಯಾದರು.

ಟಿವಿ ಜೊತೆಗೆ ರಾಮ್ ಚಿತ್ರರಂಗದಲ್ಲಿ ಕೂಡ ಸಕ್ರಿಯರಾಗಿದ್ದಾರೆ. 'ಮಾನ್ಸೂನ್ ವೆಡ್ಡಿಂಗ್' (2000), 'ಥೌಸಂಡ್ ಖ್ವೈಶೇನ್ ಐಸಿ' (2003), 'ಕಾರ್ತಿಕ್ ಕಾಲಿಂಗ್ ಕಾರ್ತಿಕ್' (2010), 'ಉಡಾನ್' (2010), 'ಏಕ್ ಮೇನ್ ಔರ್ ಏಕ್ ತು' (2012), 'ಏಜೆಂಟ್ ವಿನೋದ್' (2012 ) ರಾಮ್ 'ಸ್ಟೂಡೆಂಟ್ ಆಫ್ ದಿ ಇಯರ್' (2012), 'ಮೇರೆ ಡ್ಯಾಡ್ ಕಿ ಮಾರುತಿ' (2013), 'ಶಾದಿ ಕೆ ಸೈಡ್ ಎಫೆಕ್ಟ್ಸ್' (2014), 'ಹಮ್‌ಶಾಕಲ್ಸ್' (2014) ನಂತಹ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Latest Videos

click me!