ಸಿದ್ಧಾರ್ಥ್-ಸ್ವಾಮಿ ಓಂ: ದಿಢೀರ್ ಸಾವನ್ನಪ್ಪಿದ ಬಿಗ್‌ಬಾಸ್ ಸ್ಪರ್ಧಿಗಳು

Published : Sep 05, 2021, 03:30 PM ISTUpdated : Sep 05, 2021, 04:12 PM IST

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಸಾವು ಶಾಕಿಂಗ್. ದಿಢೀರ್ ಸಾವನ್ನಪ್ಪಿದ ಸಿದ್ಧಾರ್ಥ್ ಅಗಲಿಕೆ ನೋವು ತಂದಷ್ಟೇ ಶಾಕ್ ಕೂಡಾ ಕೊಟ್ಟಿದೆ. ದಿಢೀರ್ ಸಾವನ್ನಪ್ಪಿ ಶಾಕ್ ಕೊಟ್ಟ ಬಿಗ್‌ಬಾಸ್ ಸ್ಪರ್ಧಿಗಳಿವರು

PREV
18
ಸಿದ್ಧಾರ್ಥ್-ಸ್ವಾಮಿ ಓಂ: ದಿಢೀರ್ ಸಾವನ್ನಪ್ಪಿದ ಬಿಗ್‌ಬಾಸ್ ಸ್ಪರ್ಧಿಗಳು

ಸಿದ್ಧಾರ್ಥ್ ಶುಕ್ಲಾ ಮತ್ತು ಪ್ರತ್ಯೂಷಾ ಬ್ಯಾನರ್ಜಿ ಇಬ್ಬರೂ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದರು.  ಜನಪ್ರಿಯ ಟಿವಿ ಧಾರಾವಾಹಿ ಬಾಲಿಕಾ ವಧುನಲ್ಲಿ ಕಾಣಿಸಿಕೊಂಡ ಈ ಜೋಡಿ ಈಗ ಇಲ್ಲ. ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿ ಫೇಮಸ್ ಆಗಿ ದಿಢೀರ್ ಸಾವನ್ನಪ್ಪಿದ ಸೆಲೆಬ್ರಿಟಿಗಳಿವರು

28

ಕಳೆದ ವಾರ ಬಿಗ್ ಬಾಸ್ 13 ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವಿನ ಸುದ್ದಿ ಹೊರಬಿದ್ದದ್ದಯ ಆಘಾತಕಾರಿಯಾಗಿತ್ತು. ಈಗಷ್ಟೇ ಬಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದ್ದ ಯುವ ನಟನ ಅಕಾಲಿಕ ಸಾವು ಅಕ್ಷರಶಃ ಶಾಕಿಂಗ್. ಶುಕ್ರವಾರ ಟಿವಿ ಸ್ಟಾರ್‌ಗಳು ತಮ್ಮ ಸ್ನೇಹಿತ ಮತ್ತು ಸಹೋದ್ಯೋಗಿಯನ್ನು ಕೊನೆಯ ಬಾರಿಗೆ ನೋಡಿ ವಿದಾಯ ಹೇಳಲು ಬಂದಿದ್ದಾರೆ

38

ಶೆಹನಾಝ್ ಗಿಲ್ ಬ್ರೇಕ್‌ಡೌನ್ ಆಗಿದ್ದರು. ಆಕೆಯ ಸಹೋದರನೊಂದಿಗೆ ಓಶಿವಾರ ಶ್ಮಶಾನಕ್ಕೆ ಆಗಮಿಸುತ್ತಿದ್ದಂತೆ ಹೃದಯವಿದ್ರಾವಕಳಾಗಿದ್ದರು ನಟಿ. ವಿವಾಹದ ಕನಸಿನಲ್ಲಿದ್ದ ಜೋಡಿಗೆ ಇದು ದೊಡ್ಡ ಆಘಾತ. ಇಬ್ಬರ ವಿವಾಹದ ಕುರಿತೂ ಮಾತುಕತೆ ನಡೆಯುತ್ತಿತ್ತು ಎನ್ನಲಾಗಿದೆ

48

ಸಿದ್ಧಾರ್ಥ್ ಶುಕ್ಲಾ ಅವರಂತೆಯೇ, ಇನ್ನೊಬ್ಬ ಟಿವಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಪ್ರತ್ಯೂಷಾ ಬ್ಯಾನರ್ಜಿಯವರು ಇದ್ದಕ್ಕಿದ್ದಂತೆ ನಿಧನರಾದರು. ಅದು ಇಡೀ ಮನರಂಜನಾ ಉದ್ಯಮ ಮತ್ತು ಆಕೆಯ ಅಭಿಮಾನಿಗಳನ್ನು ಬೆಚ್ಚಿಬೀಳಿಸಿತ್ತು. ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನ ಭಾಗವಾಗಿದ್ದು ದಿಢೀರ್ ಸಾವನ್ನಪ್ಪಿದ್

58

ಸಿದ್ಧಾರ್ಥ್ ಶುಕ್ಲಾ ಬಿಗ್ ಬಾಸ್ 13ರಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ನಟ ಶೆಹ್ನಾಜ್ ಗಿಲ್ ಅವರೊಂದಿಗೆ ಕ್ಲೋಸ್ ಆದರು. ಅವರ ಅಭಿಮಾನಿಗಳು ಅವರನ್ನು ಸಿದ್ ನಾಜ್ ಎಂದು ಕರೆಯುತ್ತಿದ್ದರು. ಸಿದ್ದಾರ್ಥ್ ಅವರಿಗೆ ಕೇವಲ 40 ವರ್ಷವಾಗಿದ್ದಾಗ ಅವರು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದರ.
68

ಪ್ರತ್ಯೂಷಾ ಬ್ಯಾನರ್ಜಿ ಬಾಲಿಕಾ ವಧು ಮತ್ತು ಬಿಗ್ ಬಾಸ್ 7 ಮೂಲಕ ಫೇಮಸ್ ಆದರು. ನಟಿ ಕೇವಲ 24 ವರ್ಷದವಳಿದ್ದಾಗ 2016 ರ ಏಪ್ರಿಲ್ 1 ರಂದು ತನ್ನ ಮುಂಬೈ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

78

ಸ್ವಾಮಿ ಓಂ ಬಿಗ್ ಬಾಸ್ 10 ನಲ್ಲಿ ಭಾಗವಹಿಸಿದರು. ಅವರು ಮನೆಯಲ್ಲಿ ಬಹಳ ವಿವಾದಾತ್ಮಕವಾಗಿ ಹೆಸರುವಾಸಿಯಾಗಿದ್ದರು. ಬಿಬಿ ಮನೆಯಲ್ಲಿನ ಒಂದು ಕಾರ್ಯದ ಸಮಯದಲ್ಲಿ, ಸ್ವಾಮಿ ಓಂ ತನ್ನ ಸಹ ಸ್ಪರ್ಧಿಗಳಾದ ಬಾನಿ ಜೆ ಮತ್ತು ರೋಹನ್ ಮೆಹ್ರಾ ಮೇಲೆ ತನ್ನ ಮೂತ್ರ ಸಿಂಪಡಿಸುವುದನ್ನು ನೋಡಲಾಯಿತು. ಸ್ವಾಮಿ ಓಂ ಈ ವರ್ಷ ಫೆಬ್ರವರಿ 3 ರಂದು ಹೃದಯಾಘಾತದಿಂದ ನಿಧನರಾದರು.

88

ಶಿಲ್ಪಾ ಶೆಟ್ಟಿ ನಡೆಸಿಕೊಟ್ಟ ಬಿಗ್ ಬಾಸ್ 2 ನಲ್ಲಿ ಜೇಡ್ ಗೂಡಿ ಭಾಗಿಯಾಗಿದ್ದರು. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಶೀಘ್ರದಲ್ಲೇ ಕಾರ್ಯಕ್ರಮವನ್ನು ತೊರೆಯಬೇಕಾಯಿತು. ಜೇಡ್ ಗೂಡಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆಕೆ 2009 ರಲ್ಲಿ ನಿಧನರಾದರು. ಆಗ ಅವರ ವಯಸ್ಸು ಕೇವಲ 27.
click me!

Recommended Stories