'ಹಾಗೆ ಸುಮ್ಮನೆ' ಹೊಸ ಲುಕ್‌ ಎಂದ ಸೋನು ಗೌಡ: ಏನಮ್ಮಾ ಸೀರೆನಾ ಪ್ಯಾಂಟ್ ಮಾಡ್ಕೋಂಡಿದ್ಯಾ ಅನ್ನೋದಾ!

First Published | May 23, 2024, 8:31 PM IST

ಟಿಕ್ ಟಾಕ್ ಮೂಲಕ ಸದ್ದು ಮಾಡಿ ಬಳಿಕ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ನಾಡಿಗೆ ಪರಿಚಯವಾದವರು ಸೋನು ಗೌಡ. ಬಳಿಕ ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದರು. ಇತ್ತೀಚೆಗೆ ಮಗುವೊಂದನ್ನು ದತ್ತು ಪಡೆದು ಕೇಸ್ ಹಾಕಿಸಿಕೊಂಡು ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದಾರೆ.

ಬಿಗ್ ಬಾಸ್ ಒಟಿಟಿ​ ಸ್ಪರ್ಧಿಯಾಗಿದ್ದ ಸೋನು ಗೌಡ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ ವಿಡಿಯೋಗಳನ್ನು ಹಂಚಿಕೊಳ್ತಾರೆ. ಅವರ ಫೊಟೋಸ್ ವೈರಲ್ ಆಗುತ್ತವೆ.

ಸೋನು ಗೌಡ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ವೆಕೇಷನ್, ಟ್ರಿಪ್ ಸೇರಿದಂತೆ ಹಲವಾರು ಕಂಟೆಂಟ್​ಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಸೋನು ಗೌಡ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ.

Tap to resize

ಸೋನು ಗೌಡ ರಸ್ತೆ ಮಧ್ಯೆ ನಿಂತು ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಹೌದು! ಯೆಲ್ಲೋ ಟಿ-ಶರ್ಟ್ ಹಾಗೂ ಪ್ಯಾಂಟ್‌ನಲ್ಲಿರುವ ಫೊಟೋಸ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಹಾಗೆ ಸುಮ್ಮನೆ ಎಂದು ಕ್ಯಾಪ್ಷನ್ ನೀಡಿದ್ದಾರೆ.

ನೆಟ್ಟಿಗರು ಸೋನು ಫೋಟೋಸ್ ನೋಡಿ ಲೈಕ್ಸ್ ಕೊಟ್ಟು, ಸೆಕ್ಸಿ, ಬ್ಯೂಟಿಫುಲ್‌, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಏನಿದೆ, ಕಾಲು ಮುರಿತಾ ಒಂದು, ಸಣ್ಣ ಆಗದ್ದೀಯಾ, ಸೀರೆನಾ ಪ್ಯಾಂಟ್ ಮಾಡ್ಕೋಂಡಿದ್ಯಾ ಎಂದು ತರೇಹವಾರಿ ಕಮೆಂಟ್ ಮಾಡುತ್ತಿದ್ದಾರೆ.

ಸೋನು ಗೌಡ ಫೋಟೋಗಳಿಗೆ 12 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅವರ ಫೋಟೋಸ್ ನೋಡಿ ನೆಟ್ಟಿಗರು ವ್ಯಾಪಕವಾಗಿ ಕಮೆಂಟ್ ಮಾಡುತ್ತಲೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸೋನು ಗೌಡ ಅವರು 1 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ಭಾರೀ ವೈರಲ್ ಆಗಿತ್ತು. ಇದ್ರಿಂದಲೇ ಸೋನು ಗೌಡ ಸಖತ್ ಟ್ರೋಲ್ ಆಗಿದ್ರು.
 

ಇತ್ತೀಚಿಗೆ ಮಗು ದತ್ತು ತೆಗೆದುಕೊಳ್ಳುವ ಪ್ರಕರಣದ ಮೇಲೆ ಸೋನು ಸುಮಾರು 11 ದಿನಗಳ ಕಾಲ ಜೈಲಿನ ಮೆಟ್ಟಿಲೇರಿದ್ದರು. ಈಗಲೂ ಅದರ ಕೇಸ್ ನಡೆಯುತ್ತಿದೆ. 

Latest Videos

click me!