ಸಿನಿಮಾಗಳಲ್ಲಿ ಚಾನ್ಸ್ ಸಿಗದೇ, ಕನ್ನಡ ಧಾರಾವಾಹಿಗೆ ಬಂದ ಖ್ಯಾತ ನಟಿಯರು.!

First Published | Aug 18, 2024, 5:51 PM IST

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿ ಮೆರೆದಿದ್ದ ನಟಿಯರು, ವಯಸ್ಸಾಗುತ್ತಿದ್ದಂತೆಯೇ ಸಿನಿಮಾಗಳಲ್ಲಿ ಚಾನ್ಸ್ ಸಿಗದೇ ಧಾರಾವಾಹಿಗೆ ಬಂದವರ ಪಟ್ಟಿ ಇಲ್ಲಿದೆ ನೋಡಿ..

ಛಾಯಾ ಸಿಂಗ್ : ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಬೆಂಗಾಲಿ ಭಾಷೆಯ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆ ನಟಿಯಾಗಿದ್ದ ಛಾಯಾ ಸಿಂಗ್ ಅವರು ಎರಡು ದಶಕಗಳಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕನ್ನಡ ಹಾಗೂ ತೆಲುಗು ಕಿರುತೆರೆಗೆ ಕಾಲಿಟ್ಟಿದ್ದಾರೆ. ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸುಧಾರಾಣಿ: ನಟಿ ಸುಧಾರಾಣಿ ಅವರು ಡಾ.ರಾಜ್ ಕುಮಾರ್, ನಟ ಶಿವರಾಜ್ ಕುಮಾರ್ ಸೇರಿ ಹಲವು ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು. ವಯಸ್ಸಾದಂತೆ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಈಗ ಶ್ರೀರಸ್ತು ಸುಭಮಸ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

Tap to resize

ನಟಿ ಶ್ವೇತಾ : ಕನ್ನಡ ಚಿತ್ರರಂಗದಲ್ಲಿ ಕರ್ಪೂರದ ಗೊಂಬೆ, ಲಕ್ಷ್ಮೀ ಮಹಾಲಕ್ಷ್ಮಿ, ಚೈತ್ರದ ಪ್ರೇಮಾಂಜಲಿ ಸೀರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ ಶ್ವೇತಾ ಅವರು ಈಗ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಕುಟುಂಬದ ಗೃಹಿಣಿಯಾಗಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.

ನಟಿ ಮಯೂರಿ : ಕನ್ನಡ ಕಿರುತೆರೆ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದ ನಟಿ ಮಯೂರಿ ಈಗ ಪುನಃ ಕಿರುತೆರೆಗೆ ವಾಪಸ್ ಆಗಿದ್ದಾರೆ. ಈಗ ಕಲರ್ಸ್ ಕನ್ನಡದ ನನ್ನ ದೇವ್ರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಹೇಮಾ ಪ್ರಭಾತ್ (ಪಂಚಮುಖಿ): ನಾಗತ್ತಿಹಳ್ಳಿ ಚಂದ್ರಶೇಖರ್ ಅವರ ಅಮೇರಿಕಾ ಅಮೇರಿಕಾ ಸಿನಿಮಾದ ನಟಿ ಹೇಮಾ ಪ್ರಭಾತ್ ಅವರು ಕನ್ನಡದಲ್ಲಿ 8 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆ ನಂತರ ಸಿನಿಮಾದಿಂದ ದೂರವಾಗಿದ್ದ ನಟಿ ಹೇಮಾ ಪಂಚಮುಖಿ ಈಗ ಕರಿಮಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಹಾಸ್ಯನಟಿ ಉಮಾಶ್ರೀ : ಕನ್ನಡ ಚಿತ್ರರಂಗದಲ್ಲಿ ಸುಮಾರು 3 ದಶಕಗಳಿಂದಲೂ ಸಿನಿಮಾದ ನಾಯಕನಟಿಯರಿಗಿಂತಲೂ ಹೆಚ್ಚು ಬೇಡಿಕೆಯಲ್ಲಿದ್ದ ಹಾಸ್ಯ ನಟಿ ಉಮಾಶ್ರೀ ಕೂಡ ಧಾರಾವಾಹಿಗೆ ಬಂದಿದ್ದಾರೆ. ಆದರೂ ಅವರು ಸಿನಿಮಾದಲ್ಲಿಯೂ ಸಕ್ರಿಯವಾಗಿ ನಟಿಸುತ್ತಿದ್ದಾರೆ.

ರೇಖಾ ದಾಸ್ : ಕನ್ನಡ ಚಿತ್ರರಂಗದ ಮತ್ತೊಬ್ಬ ಹಾಸ್ಯ ನಟಿ ರೇಖಾ ದಾಸ್ ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟನೆಗೆ ಚಾನ್ಸ್ ಕಡಿಮೆ ಆಗಿದ್ದರಿಂದ ಕಿರುತೆರೆಗೆ ಕಾಲಿಟ್ಟಿದ್ದಾರೆ. ನನ್ನ ದೇವ್ರು ಸಿನಿಮಾದಲ್ಲಿ ನಟಿ ಮಯೂರಿ ಅವರ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

Sparsha-Rekha

ಸ್ಪರ್ಶ ರೇಖಾ : ಕಿಚ್ಚ ಸುದೀಪ್ ಅವರೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರೇಖಾ ಅವರು ಈಗ ಸ್ಪರ್ಶ ರೇಖಾ ಎಂತಲೇ ಪ್ರಸಿದ್ಧಿಯಾಗಿದ್ದಾರೆ. ಕೆಲವೇ ಸಿನಿಮಾದಲ್ಲಿ ಕಾಣಿಸಿಕೊಂಡು, ದೂರವಾಗಿದ್ದ ನಟಿ ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ತ್ರಿಪುರ ಸುಂದರಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು.

ವಿನಯ ಪ್ರಸಾದ್: ಕನ್ನಡ ಚಿತ್ರರಂಗದಲ್ಲಿ 1990ರ ದಶಕದಲ್ಲಿ ಅತ್ಯಂತ ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದ ನಟಿ ವಿನಯಾ ಪ್ರಸಾದ್ ಅವರು ಕೂಡ ಧಾರಾವಾಹಿಗೆ ಬಂದು ಹಲವು ವರ್ಷಗಳೇ ಕಳೆದಿವೆ. ಪಾರು ಸೀರಿಯಲ್‌ನಲ್ಲಿ ಖಡಕ್ ಅತ್ತೆ ಪಾತ್ರದ ಮೂಲಕ ಕನ್ನಡ ನಾಡಿನ ಜನತೆಯ ಮನಸ್ಸನ್ನು ಗೆದ್ದಿದ್ದಾರೆ.

Latest Videos

click me!