ಅಂತರಪಟ; ರಾಧಾ ಮಿಸ್ ಎಂಟ್ರಿ, ಈ ಬಾರಿ ಆಟ್ರೋ ಡ್ರೈವರ್ ಮಗಳು ಐಎಎಸ್ ಆಫೀಸರ್ ಆಗಿ!

First Published | Nov 7, 2023, 3:09 PM IST

ರಾಧಾ ರಮಣ ಸೀರಿಯಲ್ ನಲ್ಲಿ ರಾಧಾ ಮಿಸ್ ಆಗಿ ಜನಪ್ರಿಯತೆ ಪಡೆದ ನಟೆ ಶ್ವೇತ ಪ್ರಸಾದ್ ಇದೀಗ ಅಂತರಪಟ ಸೀರಿಯಲ್ ನಲ್ಲಿ ಐಎಎಸ್ ಅಧಿಕಾರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅದೂ ಆಟೋ ಡ್ರೈವರ್ ಮಗಳಾಗಿ ಸಾಧನೆ ಮಾಡಿದ ಹೆಣ್ಣು ಮಗಳಾಗಿ. ಮತ್ತೊಂದೆಡೆ  ಈ ಸೀರಿಯಲ್‌ನಲ್ಲಿ ಪಿರಿಯಡ್ಸ್ ಆದ ಆರಾಧನಾಳಗೆ ಸ್ಯಾನಿಟಪಿ ಪ್ಯಾಡ್ ತಂದು ಕೊಟ್ಟ ಸ್ನೇಹಿತನಿಂದ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಸಾರಿದ್ದಾರೆ.
 

ರಾಧಾ ರಮಣ ಸೀರಿಯಲ್ ನಲ್ಲಿ ರಾಧಾ ಮಿಸ್ ಆಗಿ ಕನ್ನಡಿಗರ ಮನ ಗೆದ್ದಿದ್ದ ನಟಿ ಶ್ವೇತಾ ಆರ್ ಪ್ರಸಾದ್ (Shwetha R Prasad). ಈ ಸೀರಿಯಲ್ ನಿಂದ ಹೊರ ಬಂದ ನಂತರ ನಟನೆಯಿಂದ ತುಂಬಾನೆ ದೂರ ಉಳಿದಿದ್ದರು. 

ರಾಧಾ ಮಿಸ್ ಎಂದೇ ಖ್ಯಾತಿ ಪಡೆದಿದ್ದ ಶ್ವೇತಾರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ತುಂಬಾ ಕಾತುರದಿಂದ ಕಾಯುತ್ತಿದ್ದರು. ಸೀರಿಯಲ್‌ಗಳಿಂದ ದೂರ ಇದ್ದರೂ ನಟಿಗೆ ಈಗಲೂ ಬಹು ಬೇಡಿಕೆ ಇದೆ. 
 

Tap to resize

ಇದೀಗ ಹಲವು ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಶ್ವೇತಾ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ. ಹೌದು, ಈ ಬಾರಿ ಶ್ವೇತಾ ಐಎಎಸ್ ಅಧಿಕಾರಿಯಾಗಿ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಅಂತರಪಟ ಸೀರಿಯಲ್ ನಲ್ಲಿ ಶ್ವೇತಾ ಆರ್ ಪ್ರಸಾದ್ ನಟಿಸುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಆಟೋ ಡ್ರೈವರ್ ಮಗಳಾಗಿದ್ದರೂ ಐಎಎಸ್ ಅಧಿಕಾರಿಯಾಗಿರುವವಳಾಗಿ ಶ್ವೇತಾ ನಟಿಸುತ್ತಿದ್ದಾರೆ. 
 

ಆರಾಧನಾ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರೋದು ನಿಮಗೆ ಗೊತ್ತಲ್ವ? ಈ ಸೀರಿಯಲ್ ನಲ್ಲಿ ಶ್ವೇತಾ ಪ್ರಸಾದ್ ಮತ್ತು ಬಿಗ್ ಬಾಸ್ ವಿನ್ನರ್ ಶಶಿ ಗೌಡ ಮದುವೆಯಾಗುತ್ತಿದ್ದು, ಆರಾಧಾನಾ ಕೆಲಸ ಮಾಡುತ್ತಿರುವ ಕಂಪನಿಯ ವೆಡ್ಡಿಂಗ್ ಪ್ಲ್ಯಾನಿಂಗ್ ತಿಳಿದುಕೊಳ್ಳೋ ದೃಶ್ಯ ಸದ್ಯ ನಡೀತಿದೆ. 
 

ಶ್ರೀರಸ್ತು ಶುಭಮಸ್ತು, ರಾಧಾ ರಮಣ ಸೀರಿಯಲ್ ಗಳ ಜೊತೆಗೆ ಶ್ವೇತಾ ಪ್ರಸಾದ್ ಕಳ್ಬೆಟ್ಟದ ದರೋಡೆಕೋರರು ಸಿನಿಮಾದಲ್ಲೂ ಸಹ ನಟಿಸಿದ್ದಾರೆ. ಅಲ್ಲದೇ ಕೆಲವೊಂದು ಧಾರಾವಾಹಿಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಆಗಿ ಸಹ ಕಾಣಿಸಿಕೊಂಡಿದ್ದಾರೆ. 

ನಟನೆಗಿಂತ ಹೆಚ್ಚಾಗಿ ಶ್ವೇತಾ ಸಮಾಜ ಸೇವೆಗಳ ಮೂಲಕ, ಟ್ರಾವೆಲ್ ಮೂಲಕ ಜೊತೆಗೆ ಹಲವಾರು ಜಾಹೀರಾತುಗಳಿಗೆ ರೂಪದರ್ಶಿಯಾಗುವ ಮೂಲಕವೇ ಸದ್ಯ ಸುದ್ದಿಯಲ್ಲಿರುತ್ತಾರೆ. ಅದೇನೆ ಇದ್ದರೂ ತಮ್ಮ ನೆಚ್ಚಿನ ನಟಿಯನ್ನು ಮತ್ತೆ ತೆರೆ ಮೇಲೆ ನೋಡಿದ ಜನರು ಮಾತ್ರ ತುಂಬಾನೆ ಖುಷಿಯಾಗಿದ್ದಾರೆ

Latest Videos

click me!