ರಾಯಲ್ ಲುಕ್ಕಲ್ಲಿ ಸಾನ್ಯಾ ಅಯ್ಯರ್… ಸಂಜಯ್ ಲೀಲಾ ಬನ್ಸಾಲಿಗೆ ನಾಯಕಿ ಫಿಕ್ಸ್ ಎಂದ ಫ್ಯಾನ್ಸ್

Published : May 02, 2024, 05:03 PM IST

ಸಾನ್ಯಾ ಅಯ್ಯರ್ ಹೆವಿ ಲೆಹೆಂಗಾ ಧರಿಸಿ ಫೋಟೋಗೆ ಪೋಸ್ ನೀಡಿದ್ದು, ರಾಯಲ್ ಲುಕ್ಕಿನಲ್ಲಿ ಕಂಗೊಳಿಸುತ್ತಿರುವ ಸಾನ್ಯಾ ಯಾವುದೋ ರಾಣಿಯಂತೆ ಕಾಣಿಸುತ್ತಿದ್ದಾರೆ.   

PREV
17
ರಾಯಲ್ ಲುಕ್ಕಲ್ಲಿ ಸಾನ್ಯಾ ಅಯ್ಯರ್… ಸಂಜಯ್ ಲೀಲಾ ಬನ್ಸಾಲಿಗೆ ನಾಯಕಿ ಫಿಕ್ಸ್ ಎಂದ ಫ್ಯಾನ್ಸ್

ಬಿಗ್ ಬಾಸ್ ಕನ್ನಡ ಮೂಲಕ ಭಾರಿ ಜನಪ್ರಿಯತೆ ಪಡೆದ ಸಾನ್ಯಾ ಅಯ್ಯರ್ (Saanya Iyer) ಸದ್ಯ ತಮ್ಮ ಗೌರಿ ಸಿನಿಮಾದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಇದೆಲ್ಲದರ ನಡುವೆ ಸಾನ್ಯಾ ಒಂದಿಷ್ಟು ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

27

ಮರೂನ್, ಗ್ರೀನ್ ಬಣ್ಣದ ಹೆವಿ ವರ್ಕ್ ಇರುವಂತಹ ಅದ್ಧೂರಿ ಲೆಹೆಂಗಾದಲ್ಲಿ ಸಾನ್ಯಾ ಅಯ್ಯರ್ ಪೋಸ್ ನೀಡಿದ್ದು, ಸಿಂಗಾರಗೊಂಡ ವಧುವಿನಂತೆಯೋ, ಯಾವುದೋ ರಾಣಿಯಂತೆಯೋ ಕಾಣಿಸುತ್ತಿದ್ದಾರೆ. 
 

37

ಸಾನ್ಯಾ ಅಯ್ಯರ್ ಪ್ಲೈರೋಬ್ ಬೆಂಗಳೂರು ಮಲ್ಲೇಶ್ವರಂ ಅವರ ಡಿಸೈನರ್ ಲೆಹೆಂಗಾ ಧರಿಸಿದ್ದು, ವಿಭಿನ್ನ ಸ್ಟೈಲ್ ಮಾಡಿದ್ದಾರೆ, ಬೀಡೆಡ್ ಟ್ರೆಶರ್ ಜ್ಯುವೆಲ್ಲರಿ ಅವರ ಆಕ್ಸೆಸರಿ ಧರಿಸಿದ್ದು, ಮೇಕ್ ಓವರ್ ವಿತ್ ಲಕ್ಷ್ಮೀ ಶೆಟ್ಟಿ ಮೇಕಪ್ ಮಾಡಿದ್ದು, ಉಮೇಶ್ ಫೋಟೋಗ್ರಾಫಿ ಮಾಡಿದ್ದಾರೆ. 
 

47

ಸುಂದರಿ ಸಾನ್ಯಾ ಅಯ್ಯರ್ ತುಂಬಾ ಮುದ್ದಾಗಿ ಕಾಣಿಸುತ್ತಿದ್ದು, ಮುಖದಲ್ಲಿನ ಆ ಗತ್ತು, ಸ್ಟೈಲ್ ಎಲ್ಲವೂ ಸೇರಿ ಸಾನ್ಯಾ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಯಾವುದೇ ಡ್ರೆಸ್ ಅನ್ನು ಅದ್ಭುತವಾಗಿ ಕ್ಯಾರಿ ಮಾಡುವ ಸಾನ್ಯಾ, ಇಲ್ಲೂ ಸಖತ್ತಾಗಿ ಕಾಣಿಸಿದ್ದಾರೆ. 
 

57

ಇನ್ನು ಸಾನ್ಯಾ ಅಯ್ಯರ್ ಲುಕ್ ನೋಡಿ ಫ್ಯಾನ್ಸ್ ಖುಷ್ ಆಗಿದ್ದಾರೆ, ಕನ್ನಡ ಸಿನಿಮಾರಂಗದ ಸುಂದರಿ ನೀವೇ, ರಾಣಿ (queen) ತರ ಕಾಣಿಸ್ತಿದ್ದೀರಿ, ರಾಣಿ ರಾಣಿ ನಿನ್ನ ಕಂಡಾಗ ನನ್ನೆ ಮರತೇ ನಾನೀಗ, ಬ್ಯೂಟಿ ಕ್ವೀನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

67

ಮತ್ತೆ ಕೆಲವರು ನಿಮ್ಮ ಈ ಫೋಟೋಗಳನ್ನು ನೋಡಿದ ಮೇಲೆ ಸಂಜಯ್ ಲೀಲಾ ಬನ್ಸಾಲಿಯವರ (Sanjay Leela Bansali) ಸಿನಿಮಾಗಳಿಗೆ ನೀವು ಪರ್ಫೆಕ್ಟ್ ಮ್ಯಾಚ್ ಆಗುತ್ತೀರಿ ಅನ್ನೋದು ಕಾಣಿಸುತ್ತೆ ಎಂದಿದ್ದಾರೆ. ಅದ್ಭುತ ಸುಂದರಿ ನೀವು, ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸಿದ್ದಾರೆ. 
 

77

ಬ್ರೇಕ್ ಸಿಕ್ಕಾಗಲೆಲ್ಲಾ ಫ್ಯಾಮಿಲಿ ಜೊತೆ ಟೂರ್ ಮಾಡುವ ಸಾನ್ಯಾ ಅಯ್ಯರ್, ಸದ್ಯಕ್ಕಂತೂ ತಮ್ಮ ಗೌರಿ ಸಿನಿಮಾದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಟೀಸರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories