ಬಿಗ್ ಬಾಸ್ ರಿಯಾಲಿಟಿ ಶೋ ಭಾರತದ ಟೆಲಿವಿಷನ್‌ನಲ್ಲಿ ಜನಪ್ರಿಯ ಶೋ , ಭಾರತದ ಬಹುತೇಕ ಭಾಷೆಯಲ್ಲಿ ಈ ನಡೆಯುತ್ತಿದೆ. ಹಿಂದಿ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಮರಾಠಿ ಭಾಷೆಗಳಲ್ಲೂ ಇದೆ. ಮಲಯಾಳಂನಲ್ಲಿ ಮೋಹನ್‌ಲಾಲ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ನಾಗಾರ್ಜುನ, ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ನಡೆಸಿಕೊಡುತ್ತಾರೆ. ಬಿಗ್ ಬಾಸ್ ಮೊದಲು ಹಿಂದಿಯಲ್ಲಿ ಆರಂಭವಾಯಿತು. ಈಗ ೧೮ನೇ ಸೀಸನ್ ನಡೆಯುತ್ತಿದೆ. ಅಕ್ಟೋಬರ್ 6ರಿಂದ ಶೋ ಆರಂಭವಾಗಿದೆ.