ವಿಶ್ವನ ಜಗತ್ತಿಗೆ ಜಾನು ಪ್ರವೇಶ; ಹುಚ್ಚನಾದ ಸೈಕೋ ಜಯಂತ್‌ ಬದುಕಿಗೆ ಶಾಂತಮ್ಮನ ಎಂಟ್ರಿ? ಏನಿದು ಬಿಗ್‌ ಟ್ವಿಸ್ಟ್

Published : Apr 09, 2025, 09:24 PM IST

Kannada Serial Lakshmi Nivasa: ಲಕ್ಷ್ಮೀ ನಿವಾಸದಲ್ಲಿ ಜಾನು ಆಗಮನವಾಗಿದ್ದು, ನರಸಿಂಹ ಆಕೆಯನ್ನು ಮನೆಗೆ ಕರೆತಂದಿದ್ದಾನೆ. ಮತ್ತೊಂದೆಡೆ, ಜಯಂತ್ ಜಾಹ್ನವಿಯ ನೆನಪಿನಲ್ಲಿ ಹುಚ್ಚನಾಗಿದ್ದು, ಶಾಂತಮ್ಮನನ್ನು ಮರಳಿ ಕರೆಸಿಕೊಳ್ಳಲು ನಿರ್ಧರಿಸಿದ್ದಾನೆ.

PREV
17
ವಿಶ್ವನ ಜಗತ್ತಿಗೆ ಜಾನು ಪ್ರವೇಶ; ಹುಚ್ಚನಾದ ಸೈಕೋ ಜಯಂತ್‌ ಬದುಕಿಗೆ ಶಾಂತಮ್ಮನ ಎಂಟ್ರಿ? ಏನಿದು ಬಿಗ್‌ ಟ್ವಿಸ್ಟ್

ಲಕ್ಷ್ಮೀ ನಿವಾಸದ ಚಿನ್ನುಮರಿ ಜಾಹ್ನವಿ ಕೊನೆಗೂ ವಿಶ್ವನ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾಳೆ. ಮನೆಗೆ ಬರುತ್ತಲೇ ಪತ್ನಿ ಲಲಿತಾ ಮುಂದೆ ರಸ್ತೆಯಲ್ಲಿ ತನ್ನ ಪ್ರಾಣವನ್ನು ಉಳಿಸಿದ ಜಾನು ಬಗ್ಗೆ ಹೇಳಿದ್ದಾನೆ. ಆ ಹುಡುಗಿ ದೇವರಂತೆ ಬಂದು ನನ್ನ ಪ್ರಾಣ ಕಾಪಾಡಿದಳು. ಯಾಕೆಗೆ ಅಪ್ಪ-ಅಮ್ಮ ಯಾರೂ ಇಲ್ಲ. ಹಾಗಾಗಿ ಇಲ್ಲಿಗೆ ಆಕೆಯನ್ನು ಕರೆದುಕೊಂಡು ಬಂದಿದ್ದೇನೆ ಎಂದು ನರಸಿಂಹ ಪತ್ನಿಗೆ ಹೇಳಿದ್ದಾನೆ.

27

ಯಾರ ಹೆತ್ತ ಮಗಳು ಏನು? ನನ್ನ ಮಾಂಗಲ್ಯವನ್ನು ಕಾಪಾಡಿದ್ದಾಳೆ. ಲೇಬರ್ ಕ್ವಾಟರ್ಸ್‌ನಲ್ಲಿರುವ ಆ ಹುಡುಗಿಯನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದು ಲಲಿತಾ ಹೇಳಿದ್ದಾಳೆ. ಆ ಹುಡುಗಿ ತುಂಬಾ ನೊಂದಿರುವಂತೆ ಕಾಣಿಸುತ್ತದೆ. ಹಾಗಾಗಿ ನಾನು ಆಕೆಯ ಬಗ್ಗೆ ಹೆಚ್ಚು ವಿಚಾರಿಸಲಿಲ್ಲ. ನೀನೊಮ್ಮೆ ಆ ಹುಡುಗಿಯನ್ನು ಭೇಟಿಯಾಗುವಂತೆ ಪತ್ನಿ ಲಲಿತಾಗೆ ನರಸಿಂಹ ಹೇಳುತ್ತಾನೆ.

37

ನರಸಿಂಹ ಹೇಳಿದಂತೆ ಲಲಿತಾ, ಔಟ್‌ ಹೌಸ್‌ ತೆರಳಿ ಜಾಹ್ನವಿಯನ್ನು ಭೇಟಿಯಾಗಲು ಹೊರಟಿದ್ದಳು. ಈ ವೇಳೆ ಎದುರಾದ ವಿಶ್ವ, ನನಗೆ ಹಸಿವು ಆಗಿದೆ. ಬೇಕಿದ್ದರೆ ಫೋನ್ ಮಾಡಿ ಕಾರ್ಮಿಕರನ್ನು ಮನೆಗೆ ಬರುವಂತೆ ಹೇಳು. ಮೊದಲು ನನಗೆ ಊಟ ಬಡಿಸು ಎಂದು ವಿಶ್ವ ಹೇಳಿದ್ದಾನೆ.

47

ಚೆನ್ನೈ ಸಮುದ್ರದಡದಲ್ಲಿ ಪತ್ತೆಯಾಗಿದ್ದ ಜಾನು, ಅಲ್ಲಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ನರಸಿಂಹನ ಕಾರ್ ಡಿಕ್ಕಿಯಲ್ಲಿ ಆಡಗಿದ್ದಳು. ಮಾರ್ಗಮಧ್ಯೆ ಅಪಘಾತಕ್ಕೊಳಗಾಗುತ್ತಿದ್ದ ನರಸಿಂಹನ ಪ್ರಾಣವನ್ನು ಜಾನು ರಕ್ಷಿಸಿದ್ದಳು. ಈ ವೇಳೆ ತನ್ನ ಹೆಸರು ಚಂದನಾ, ತನ್ನೂರು ಕುಂದಾಪುರ. ಈಗ ನನ್ನೊಂದಿಗೆ ಅಪ್ಪ-ಅಮ್ಮ ಇಲ್ಲ. ತಾನು ಅನಾಥೆ ಎಂದು ಜಾಹ್ನವಿ ಹೇಳಿಕೊಂಡಿದ್ದಳು. ಈ ವಿಷಯ ತಿಳಿದ ಜಾಹ್ನವಿಯನ್ನು ತನ್ನೊಂದಿಗೆ ನರಸಿಂಹ ಕರೆದುಕೊಂಡು ಬಂದಿದ್ದನು.

57
ಹುಚ್ಚನಾದ ಸೈಕೋ ಜಯಂತ್

ಜಾಹ್ನವಿಯನ್ನು ಕಳೆದುಕೊಂಡಿರುವ ಸೈಕೋ ಜಯಂತ್ ಪತ್ನಿಯ ನೆನಪಿನಲ್ಲಿ ಹುಚ್ಚನಾಗಿದ್ದಾನೆ. ಜಾಹ್ನವಿಯ ಹಾಡುಗಳನ್ನು ಕೇಳುತ್ತಾ, ಮನೆಯಲ್ಲಿರುವ ಪ್ಲಾಂಟ್‌ ಜೊತೆ ಮಾತನಾಡುತ್ತಿದ್ದಾನೆ. ಈ ವೇಳೆ ತನ್ನನ್ನು ಆರೈಕೆ ಮಾಡಿದ್ದ ಶಾಂತಮ್ಮಳನ್ನು ಜಯಂತ್ ನೆನಪು ಮಾಡಿಕೊಂಡಿದ್ದಾನೆ. ತನ್ನ ಅಜ್ಜ ಹೋದ ಬಳಿಕ ತನಗೆ ಸಾಂತ್ವಾನ ಹೇಳಿದ್ದು ಶಾಂತಮ್ಮ. ಈಗ ಶಾಂತಮ್ಮನ್ನು ಮತ್ತೆ ತನ್ನ ಮನೆಗೆ ಮರಳಿ ಕರೆಸಿಕೊಳ್ಳಲು ಜಯಂತ್ ನಿರ್ಧರಿಸಿದ್ದಾನೆ. 

67

ಶಾಂತಮ್ಮನ ಮನೆಗೆ ಬಂದಿರುವ ಜಯಂತ್, ನನ್ನ ಜೀವನ ಕಷ್ಟವಾಗಿದೆ. ಅದಕ್ಕೆ ನನ್ನ ಮನೆಗೆ ಬಂದು ನಮ್ಮನ್ನು ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಆದ್ರೆ ಶಾಂತಮ್ಮ, ನನ್ನ ಗಂಡನ ಆರೋಗ್ಯ ಸರಿಯಾಗಿರಲ್ಲ. ನಾನು ಬರೋದು ಹೇಗೆ ಅಂತ ಹೇಳಿದ್ದಾನೆ. ಇಲ್ಲಿಯವರೆಗೆ ನಾನು ಚೆನ್ನಾಗಿಯೇ ಇದ್ದೆ. ಮುಂದೆ ಏನು ಅಂತ ಶಾಂತಮ್ಮ ಆತಂಕ ವ್ಯಕ್ತಪಡಿಸಿದ್ದಾಳೆ. ಶಾಂತಮ್ಮಳ ಗಂಡನಿಗೆ ಹಣ ನೀಡಿ ಜಯಂತ್ ಒಪ್ಪಿಸಿದ್ದಾನೆ.

77

ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದು ಶಾಂತಮ್ಮ ಎಂದು ಜಯಂತ್ ಹೇಳಿದ್ದಾನೆ. ಈ ಮೂಲಕ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೊಸ ಪಾತ್ರದ ಎಂಟ್ರಿ ಆಗಲಿದೆ. ಯಾರು ಈ ಶಾಂತಮ್ಮ? ಜಯಂತ್‌ಗೂ ಈಕೆಗೂ ಏನು ಸಂಬಂಧ ಅನ್ನೋದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ. ಇತ್ತ ವಿಶ್ವ ಮತ್ತು ಜಾನು ಮುಖಾಮುಖಿಗೆ ಇನ್ನೂ ಸಮಯವಿದೆ.

Read more Photos on
click me!

Recommended Stories