ದೇವನಾಂಪ್ರಿಯ ಸಿನಿಮಾದ ಬಗ್ಗೆ: ಕನ್ನಡ ಚಿತ್ರರಂಗದ ಸ್ಟಾರ್ ನಟ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಮುಗಿಲ್‌ಪೇಟೆ ಚಿತ್ರ ನಿರ್ದೇಶಿಸಿದ್ದ ಭರತ್ ಎಸ್. ನಾವುಂದ ಅವರು ದೇವನಾಂಪ್ರಿಯ ಕನ್ನಡ-ತೆಲುಗು ದ್ವಿಭಾಷಾ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದರು. ಇದೊಂದು ಕೌಟುಂಬಿಕ ಪ್ರತೀಕಾರದ ಕಥೆಯಾಗಿದ್ದು, ಪೂರ್ಣ ಪ್ರಮಾಣದ ನಾಯಕನಾಗಿ ತಾಂಡವ್ ರಾಮ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಜೋಡಿ ಹಕ್ಕಿ ಧಾರಾವಾಹಿ ಮತ್ತು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದ ತಾಂಡವ್ ರಾಮ್, ಈ ಹಿಂದೆ ಪೋಷಕ ಪಾತ್ರಗಳಲ್ಲಿ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ನಿರ್ದೇಶಕ ಭರತ್ ಅವರೊಂದಿಗಿನ ಈ ಚಿತ್ರದಲ್ಲಿ ಅವರು ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದು, ಕನಿಷ್ಠ 20 ಪ್ರಮುಖ ನಟರನ್ನು ಸಿನಿಮಾಗೆ ಕರೆತರಲು ನಿರ್ದೇಶಕರು ಉದ್ದೇಶ ಹೊಂದಿದ್ದರು. ಇದೀಗ ನಿರ್ದೇಶಕ ಮತ್ತು ನಟರ ಮದ್ಯೆ ನಡೆದ ಘಟನೆಯಿಂದ ಸಿನಿಮಾ ಬಹುತೇಕ ಸ್ಥಗಿತವಾಗಲಿದೆ ಎಂಬ ಸುಳಿವು ಸಿಕ್ಕಿದೆ.