ಕಿರುತೆರೆ ನಟಿ Shivangi Joshi ನೆಟ್‌ವರ್ತ್‌ ಎಷ್ಟು ಗೊತ್ತಾ?

First Published | May 18, 2022, 6:22 PM IST

ಟಿವಿಯ ಅತ್ಯಂತ ಜನಪ್ರಿಯ ಹಿಂದಿ ಧಾರಾವಾಹಿ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಯಲ್ಲಿ   (Yeh Rishta Kya Kehlata Hai) ನೈರಾ ಪಾತ್ರವನ್ನು ನಿರ್ವಹಿಸುವ ಶಿವಂಗಿ ಜೋಶಿ ಅವರಿಗೆ 27 ವರ್ಷ (Shivangi Joshi). 18 ಮೇ 1995 ರಂದು ಪುಣೆಯಲ್ಲಿ ಜನಿಸಿದ ಶಿವಾಂಗಿ ತನ್ನ ಲುಕ್‌  ಮತ್ತು ಬೋಲ್ಡ್‌ ಸ್ಟೈಲ್‌ಗೆ ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲ ಆಕೆಯ ಫ್ಯಾಶನ್ ಸೆನ್ಸ್ ಕೂಡ ತುಂಬಾ ಚೆನ್ನಾಗಿದೆ. 2018 ರಲ್ಲಿ ಅವರು ವಿಶ್ವದ 50 ಸೆಕ್ಸಿಯೆಸ್ಟ್ ಏಷ್ಯನ್ ಮಹಿಳೆಯರ ಪಟ್ಟಿಯಲ್ಲಿ ಇವರು ಐದನೇ ಸ್ಥಾನದಲ್ಲಿದ್ದರು. ಶಿವಾಂಗಿ ಜೋಶಿಯವರ ಜೀವನಕ್ಕೆ ಸಂಬಂಧಿಸಿದ ಕೆಲವು ಕೇಳದ ವಿಷಯಗಳನ್ನು ಕೆಳಗೆ ಓದಿ 

ವರದಿಗಳ ಪ್ರಕಾರ, ರಿಯಾಲಿಟಿ ಶೋ ಖತ್ರೋನ್ ಕೆ ಖಿಲಾಡಿಯ ಹೊಸ ಸೀಸನ್‌ನಲ್ಲಿ ಶಿವಾಂಗಿ ಶೀಘ್ರದಲ್ಲೇ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ನಿರ್ದೇಶಕ ರೋಹಿತ್ ಶೆಟ್ಟಿ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ನಟನೆಯ ಜೊತೆಗೆ ಶಿವಾಂಗಿ ಜೋಶಿ ಅವರು ಅತ್ಯುತ್ತಮ ಕಥಕ್ ನೃತ್ಯಗಾರ್ತಿ. ಶಾಲೆಯಲ್ಲಿ ಓದುತ್ತಿದ್ದಾಗಲೇ ಹಲವು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದರು.  ಡೆಹ್ರಾಡೂನ್‌ನಿಂದ ಬಂದಿರುವ ಟಿವಿಯ ನೈರಾ, 2013 ರಲ್ಲಿ ಖೇಲ್ತೀ ಹೈ ಜಿಂದಗಿ ಆಂಖ್ ಮಿಚೋಲಿ ಧಾರಾವಾಹಿಯೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.

Tap to resize

ಅಂದಹಾಗೆ, ಶಿವಾಂಗಿ ಜೋಶಿ ಅವರು ಬೀಂತೇಹ ಧಾರಾವಾಹಿಯಿಂದ ಮನ್ನಣೆ ಪಡೆದರು. ಇದರಲ್ಲಿ ಅವರು ಆಯತ್ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಕಾರ್ಯಕ್ರಮದಿಂದ ಸಾಕಷ್ಟು ಪರಿಚಿತರಾದರು.

ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಚಿತ್ರದಲ್ಲಿ ಕೆಲಸ ಮಾಡುವಾಗ ಶಿವಂಗಿ ಜೋಶಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದರು. ಅವರು ಧಾರಾವಾಹಿಯಲ್ಲಿ ಮೊಹ್ಸಿನ್ ಖಾನ್ ಅವರೊಂದಿಗೆ ಜೋಡಿಯಾಗಿದ್ದರು.

ಸುದ್ದಿಯ ಪ್ರಕಾರ, ಶಿವಂಗಿ ಜೋಶಿ ಧಾರಾವಾಹಿಯಲ್ಲಿ ಕೆಲಸ ಮಾಡಲು ದಿನಕ್ಕೆ 40 ಸಾವಿರ ರೂ ಚಾರ್ಜ್‌ ಮಾಡುತ್ತಾರೆ. ಇಂಟರ್ನೆಟ್‌ನಲ್ಲಿನ ಮಾಹಿತಿಯ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 25 ಕೋಟಿ.

ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.  ಅವರ ಕಿಲ್ಲರ್ ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Latest Videos

click me!