ಗೆಳತಿ ಜೊತೆ ಬಾಲಿಯಲ್ಲಿ ಪಾರು... ಹಾಗಿದ್ರೆ ಬಿಗ್ ಬಾಸ್'ಗೆ ಬರ್ತಿದ್ದಾರೆ ಅನ್ನೋದು ಸುಳ್ಳಾ?

Published : Sep 14, 2024, 08:57 AM ISTUpdated : Sep 14, 2024, 09:14 AM IST

ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಈ ನಡುವೆಯೇ ನಟಿ ತನ್ನ ಗೆಳೆತಿ ಜೊತೆ ಇಂಡೋನೇಷ್ಯಾಕ್ಕೆ ಹಾರಿದ್ದಾರೆ.   

PREV
19
ಗೆಳತಿ ಜೊತೆ ಬಾಲಿಯಲ್ಲಿ ಪಾರು... ಹಾಗಿದ್ರೆ ಬಿಗ್ ಬಾಸ್'ಗೆ ಬರ್ತಿದ್ದಾರೆ ಅನ್ನೋದು ಸುಳ್ಳಾ?

ಪಾರು ಧಾರವಾಹಿಯಲ್ಲಿ (Paaru serial) ಪಾರ್ವತಿಯಾಗಿ ಮಿಂಚಿದ ನಟಿ ಮೋಕ್ಷಿತಾ ಪೈ ಸದ್ಯ ಸೀರಿಯಲ್ ಮುಗಿದ ಮೇಲೆ ತಮ್ಮ ಜೀವನವನ್ನು ಎಂಜಾಯ್ ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಹೆಚ್ಚಿನ ಸಮಯವನ್ನು ತಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆಗೆ ಕಳೆಯುತ್ತಿದ್ದಾರೆ. 
 

29

ಇತ್ತೀಚೆಗೆ ಮೋಕ್ಷಿತ ಪೈ ಬಿಗ್ ಬಾಸ್ ಸೀಸನ್ 11 ರಲ್ಲಿ (Bigg Boss Season 11) ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು, ಅಂತೆ ಕಂತೆಗಳ ನಡುವೆ ಮೋಕ್ಷಿತಾ ದೂರದ ಇಂಡೋನೇಷ್ಯಾಕ್ಕೆ ಫ್ರೆಂಡ್ಸ್ ಜೊತೆ ಹಾರಿದ್ದು, ಕಳೆದ ಕೆಲವು ದಿನಗಳಿಂದ ಅಲ್ಲಿನ ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

39

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಮೋಕ್ಷಿತಾ ಪೈ (Mokshitha Pai) ತಮ್ಮ ಬಾಲಿ ಟ್ರಿಪ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಪ್ರತಿಯೊಂದು ಫೋಟೊಗಳಲ್ಲೂ ನಟಿ ಬಾಲಿಯ ವಿವಿಧ ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡೊದನ್ನು ಕಾಣಬಹುದು. 
 

49

ಮೋಕ್ಷಿತಾ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ, ಹಾಗಾಗಿ ನಟಿ ಅದಕ್ಕೂ ಮುನ್ನ ತಮ್ಮ ಫ್ರೆಂಡ್ಸ್ ಜೊತೆ ಇಂಡೋನೇಷ್ಯಾ ಟ್ರಿಪ್ ಎಂಜಾಯ್ ಮಾಡೋಕೆ ಹೋಗಿದ್ದಾರ? ಅಥವಾ ತಾವು ಬಿಗ್ ಬಾಸ್ ಎಂಟ್ರಿ ಕೊಡಲ್ಲ ಟ್ರಿಪ್ ಮಾಡಿ ಎಂಜಾಯ್ ಮಾಡ್ತಿನಿ ಅಂತಿದ್ದಾರ ಗೊತ್ತಿಲ್ಲ. 
 

59

ಪಾರು ಸೀರಿಯಲ್ ಮೂಲಕ ಗಮನ ಸೆಳೆದ ಮೋಕ್ಷಿತಾ ಪೈ, ಸುಮಾರು ಐದು ವರ್ಷಗಳ ಕಾಲ ಪಾರುವಾಗಿ, ಕನ್ನಡಿಗರ ಮನ ಗೆದ್ದಿದ್ದರು. ಅಷ್ಟೇ ಅಲ್ಲ ಕನ್ನಡಿಗರ ಮನೆಮಗಳೇ ಆಗಿದ್ದರು. ಹಾಗಾಗಿ ಮೋಕ್ಷಿತ ಪೈ ಹೆಸರಿಗಿಂತ ಹೆಚ್ಚಾಗಿ ಜನರು ಅವರನ್ನು ಗುರುತಿಸೋದು ಪಾರು ಅಂತಲೇ. 
 

69

ಟ್ರಾವೆಲ್ ಪ್ರಿಯೆಯಾಗಿರುವ ಮೋಕ್ಷಿತಾ ಸೀರಿಯಲ್ ಮುಗಿದ ಮೇಲೆ ಹೆಚ್ಚಾಗಿ ದೇಶ, ವಿದೇಶ ಸುತ್ತೋದ್ರಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಜೊತೆಗೆ ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸಿ ಫೋಟೊಗಳನು ಶೇರ್ ಮಾಡುತ್ತಿರುತ್ತಾರೆ. 
 

79

ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬ ಹಾಗೂ ಗಣೇಶ ಹಬ್ಬ, ಅದಕ್ಕೂ ಮುನ್ನ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ನಟಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲ ತಮ್ಮ ವಿಶೇಷ ಚೇತನ ಸಹೋದರನ ಉಪನಯನ ಕಾರ್ಯಕ್ರಮವನ್ನು ಸಹ ಸಂಭ್ರಮದಿಂದ ನೆರವೇರಿಸಿದ್ದರು. 
 

89

ತಮಗೆ ಬಿಡುವು ಸಿಕ್ಕಾಗಲೆಲ್ಲಾ ಮೋಕ್ಷಿತಾ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ, ದುಬೈ, ಮಡಿಕೇರಿ, ಶಿರಡಿ, ಊಟಿ ಮೊದಲಾದ ಕಡೆಗೆ ಪ್ರವಾಸ ಮಾಡಿದ್ರು, ಜೊತೆಗೆ ಅಲ್ಲಿನ ಸುಂದರ ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. 
 

99

ಸೋಶಿಯಲ್ ಮೀಡಿಯಾದಲ್ಲಿ (social media) ನೆಗೆಟಿವ್ ಕಾಮೆಂಟ್ ಪಡೆದುಕೊಳ್ಳದ ಹಾಗೂ ಟ್ರೋಲ್ ಗೆ ಒಳಗಾಗದ ಏಕೈಕ ನಟಿ ಅಂದ್ರೆ ಮೋಕ್ಷಿತಾ ಪೈ ಅನಿಸುತ್ತೆ. ಅಪಾರ ಅಭಿಮಾನಿಗಳನ್ನು ಹೊಂದಿರೋ ಮೋಕ್ಷಿತಾ ಪೈ ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡೊದಕ್ಕೆ ಜನ ಕಾಯ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಡ್ತಾರ ಕಾದು ನೋಡಬೇಕು. 
 

Read more Photos on
click me!

Recommended Stories