ಕೆರೆಯಲ್ಲಿ ತಾನೇ ಮೀನು ಹಿಡಿದು ಫಿಶ್‌ ಫ್ರೈ ಮಾಡಿ ತಿಂದ ನಟಿ ಶರಣ್ಯ ಶೆಟ್ಟಿ!

First Published | Jun 15, 2024, 8:13 PM IST

ಗಟ್ಟಿಮೇಳ ಸೀರಿಯಲ್‌ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ಶರಣ್ಯ ಶೆಟ್ಟಿ ಇತ್ತೀಚೆಗೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹೊಸ ಹೊಸ ಸಿನಿಮಾಗಳ ಮೂಲಕ ಬೆಳ್ಳೆತೆರೆಯಲ್ಲಿ ಯಶಸ್ಸು ಕಾಣುವ ಹಂಬಲದಲ್ಲಿದ್ದಾರೆ. 

ಜೀ ಕನ್ನಡ ವಾಹಿನಿಯಲ್ಲಿ ವರ್ಷಗಳ ಕಾಲ ಪ್ರಸಾರವಾಗಿದ್ದ ಗಟ್ಟಿಮೇಳ ಸೀರಿಯಲ್‌ನಲ್ಲಿ ಸಾಹಿತ್ಯ ಪಾತ್ರದಲ್ಲಿ ನಟಿಸಿದ್ದ ಶರಣ್ಯ ಶೆಟ್ಟಿ ಈಗ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ಮಂಗಳೂರು ಮೂಲದ ಬೆಡಗಿ ಶರಣ್ಯ ಶೆಟ್ಟಿ ಈಗ ಮಂಗಳೂರಿನ ಫೇಮಸ್‌ ಸೀ ಫುಡ್‌ ಮೀನಿನ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 

Tap to resize

ಇತ್ತೀಚೆಗೆ ಕೇರಳ ಟ್ರಿಪ್‌ನಲ್ಲಿದ್ದ ಶರಣ್ಯ ಶೆಟ್ಟಿ ಅಲ್ಲಿನ ಹಿಪ್ನೋಟಿಕ್‌ ಸ್ಟೇಯ್ಸ್‌ಅಲ್ಲಿ ವಾಸ ಮಾಡಿದ್ದರು. ಈ ವೇಳೆ ಆರ್ಚರಿಯೊಂದಿಗೆ ದೂಣಿ ವಿಹಾರವನ್ನೂ ಮಾಡಿದ್ದಾರೆ.

ದೋಣಿ ವಿಹಾರ ಮಾಡಿದ ಬಳಿಕ ಕೆರೆಯಲ್ಲಿ ಸಾಕಷ್ಟು ಮೀನುಗಳು ಇರೋದನ್ನು ಕಂಡಿದ್ದ ನಟಿ ಶರಣ್ಯಾ ಶೆಟ್ಟಿ ಅಲ್ಲಿನ ಕೆಲಸಗಾರರ ಸಹಾಯದಿಂದ ಕೆರೆಯಲ್ಲಿ ಮೀನಿಗಾಗಿ ಗಾಳ ಹಾಕಿದ್ದಾರೆ.

ಇದರ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಮೀನು ಹಿಡಿಯುವಲ್ಲಿ ನಟಿ ಯಶಸ್ವಿಯೂ ಆಗಿದ್ದಾರೆ.

ಕೆಲವೊಂದು ಮೀನು ಹಿಡಿದ ಬಳಿಕ ಸ್ವತಃ ತಾವೇ ಅದನ್ನು ಬೆಂಕಿಯ ಒಲೆಯಲ್ಲಿ ಹದವಾಗಿ ಖಾರ ಹಾಕಿ ಫಿಶ್‌ ಫ್ರೈ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಬಿಸಿ ಬಿಸಿ ಕೆರೆಮೀನನ್ನು ಫ್ರೈ ಮಾಡಿದ ಬಳಿಕ ಬಾಳೆ ಎಲೆಯ ಮೇಲೆ ಹಾಕಿಕೊಂಡು ಚಪ್ಪರಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಮಂದಿ ಕಾಮೆಂಟ್‌ ಕೂಡ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಹೆಚ್ಚಿನವರು ಶರಣ್ಯ ಶೆಟ್ಟಿ ಅವರೆ, ನಿಮ್ಮ ಕೈಅಡುಗೆಯಲ್ಲಿ ಫಿಶ್‌ ಫ್ರೈ ಸವಿಯುವ ಭಾಗ್ಯ ಯಾವಾಗ ಬರಬಹುದು ಎಂದು ತಮಾಷೆ ಮಾಡಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಶರಣ್ಯ ಶೆಟ್ಟಿ ಇತ್ತೀಚೆಗೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಶರಣ್ಯ ಶೆಟ್ಟಿ ಇಬ್ಬರೂ ಮದುಮಕ್ಕಳಂತೆ ಡ್ರೆಸ್‌ ಮಾಡಿಕೊಂಡು ನೀಡಿದ್ದ ಪೋಸ್‌ ಸಾಕಷ್ಟು ವೈರಲ್‌ ಕೂಡ ಆಗಿತ್ತು.


ಮಾಡಲ್ ಆಗಿ ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿರುವ ನಟಿ ಶರಣ್ಯ ಶೆಟ್ಟಿಯವರು ಮಾಡೆಲಿಂಗ್ ಲೋಕದ ಅನುಭವವನ್ನು ಹಿಂದೊಮ್ಮೆ ಹೇಳಿಕೊಂಡಿದ್ದರು.


ಮಾಡೆಲಿಂಗ್‌ ಜಗತ್ತಿನಲ್ಲಿ ಪಾಪ್ಯುಲರ್‌ ಆಗೋದು ಬಹಳ ಕಷ್ಟ. ತಮ್ಮ ಲುಕ್‌ ಎಷ್ಟೇ ಚೆನ್ನಾಗಿದ್ದರೂ, ಈ ಕ್ಷೇತ್ರದಲ್ಲಿ ಒಂದು ಸ್ಥಾನ ಪಡೆಯಲು ತುಂಬಾ ಟೈಮ್‌ ತೆಗೆದುಕೊಳ್ಳುತ್ತದೆ ಎಂದಿದ್ದರು.


ಕಿರುತೆರೆಯಿಂದ ಜರ್ನಿ ಆರಂಭಿಸಿದ ಶರಣ್ಯ ಶೆಟ್ಟಿ 1980 ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟಿದ್ದರು. ಕಿರುತೆರೆಯಲ್ಲಿ ಗಟ್ಟಿಮೇಳ ಇವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು.


1980 ಸಿನಿಮಾದ ನಟನೆಗಾಗಿ ಶರಣ್ಯ ಶೆಟ್ಟಿ  ಸೈಮಾ ಬೆಸ್ಟ್ ಡೆಬ್ಯೂಡಂಟ್ ಅವಾರ್ಡ್ ಕೂಡ ಪಡೆದಿದ್ದರು. ನಂತರ ಅಭಿಷೇಕ್ ದಾಸ್ ಜೊತೆ ನಗುವಿನ ಹೂಗಳ ಮೇಲೆ ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. 

Latest Videos

click me!