ರೀಲ್ಸ್ ಮೂಲಕವೇ ಪರಿಚಯವಾಗಿ ಬಳಿಕ ಸ್ನೇಹವಾಗಿ, ಸ್ನೇಹ ಪ್ರೀತಿ ತಿರುಗಿ ಈಗ ಮದುವೆಯಾಗುತ್ತಿರುವ ಜೋಡಿಗಳಲ್ಲಿ ಮಧುಗೌಡ ಹಾಗೂ ನಿಖಿಲ್ ರವೀಂದ್ರ ಕೂಡ ಒಂದು.
ಕಳೆದ ಮಾರ್ಚ್‌ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇನ್ನೂ ಮದುವೆಯ ದಿನಾಂಕ ಖಚಿತಪಡಿಸಿಲ್ಲ. ಶೀಘ್ರದಲ್ಲೇ ಮದುವೆಯ ದಿನಾಂಕ ಘೋಷಣೆಯಾಗಬಹುದು ಎನ್ನಲಾಗಿದೆ.
ಭಾವಿ ಜೋಡಿ ಇತ್ತೀಚೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದೆ. ಇಬ್ಬರೂ ಕೂಡ 90ರ ದಶಕದ ಉಡುಗೊತೊಟ್ಟು ಮಾಡಿಕೊಂಡಿರುವ ವಿಡಿಯೋ ಫೋಟೋಶೂಟ್ ಸಾಕಷ್ಟು ಗಮನಸೆಳೆದಿದೆ.
ಗಾಳಿಮಾತು ಸಿನಿಮಾದ ಒಮ್ಮೆ ನಿನ್ನನ್ನು ಕಣ್ತುಂಬ.. ಹಾಡಿಗೆ ಇಬ್ಬರೂ ರೀಲ್ಸ್ ಮಾಡಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ಮಧು ಗೌಡ ಮುದ್ದಾಗಿ ಕಾಣಿಸಿದ್ದಾರೆ.
ಮಧು ಗೌಡ ಅವರ ಅಜ್ಜಿ ಮನೆಯಲ್ಲಿ ಈ ಫೋಟೋಶೂಟ್ ನಡೆದಿದೆ. ಇದನ್ನು ಸ್ವತಃ ಮಧು ಗೌಡ ಅವರೇ ಕಾಮೆಂಟ್‌ನಲ್ಲಿ ಉತ್ತರ ನೀಡುವ ವೇಳೆ ಖಚಿತಪಡಿಸಿದ್ದಾರೆ.
ಇನ್ನು ಫೋಟೋಶೂಟ್ ಕಾಮೆಂಟ್ ಮಾಡಿರುವ ಹೆಚ್ಚಿನವರು, ಈ ಜೋಡಿಗೆ ಶುಭ ಹಾರೈಕೆ ಮಾಡೋದು ಬಿಟ್ಟು ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದಾರೆ.
'ಮೊನ್ನೆ ನಿವೇದಿತ ಗೌಡ, ನಿನ್ನೆ ಸಪ್ತಮಿ ಗೌಡ, ಇವತ್ತು ಪವಿತ್ರ ಗೌಡ, ನಾಳೆ ಸೋನು ಗೌಡ, ನಾಡಿದ್ದು ಮಧು ಗೌಡ..' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದು, ಮದುವೆಗೂ ಮುನ್ನವೇ ಡಿವೋರ್ಸ್ ಆಗಲಿ ಎನ್ನುವ ಅರ್ಥದಲ್ಲಿ ಅಶುಭ ನುಡಿದಿದ್ದಾರೆ.
'ಇಷ್ಟು ದಿನಕ್ಕೆ ಇದೊಂದೆ ವಿಡಿಯೋ ಇಷ್ಟ ಆಗಿದ್ದು ಅಂದ್ರೆ ತುಂಬಾ ಚೆನ್ನಾಗಿದೆ..' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದು, ಫೋಟೋಶೂಟ್ ಸಖತ್ತಾಗಿದೆ ಎಂದಿದ್ದಾರೆ.
ಮಧು ಗೌಡ ಮತ್ತು ನಿಖಿಲ್ ರವೀಂದ್ರ ಬೆಂಗಳೂರಿನ ಕುಬೇರನ ಮೂಲೆ ಆಗಿರುವ ರಾಜ ರಾಜೇಶ್ವರಿ ನಗರದ ಸಮೀಪದಲ್ಲಿ ಇರುವ ಒಂದು ಲೇಔಟ್‌ನಲ್ಲಿ ಇತ್ತೀಚೆಗೆ ಜಾಗವನ್ನೂ ಖರೀದಿ ಮಾಡಿದ್ದಾರೆ
ಬಹಳ ದಿನಗಳಿಂದ ಇದರ ಕೆಲಸ ನಡೆಯುತ್ತಿತ್ತು. ತೀರಾ ಇತ್ತೀಚೆಗೆ ಜಾಗದ ನೋಂದಣಿ ನಡೆದಿದೆ ಎಂದು ಮಧು ಗೌಡ ತಮ್ಮ ವ್ಲಾಗ್ ಮೂಲಕ ಖುಷಿ ಹಂಚಿಕೊಂಡಿದ್ದರು.
ಮದುವೆಯ ಸಮಯದಲ್ಲೂ ದೊಡ್ಡ ಮೊತ್ತ ನೀಡಿ ರಾಜರಾಜೇಶ್ವರಿ ನಗರದಂಥ ಸ್ಥಳದಲ್ಲಿ ಜಾಘ ಖರೀದಿ ಮಾಡಿದ್ದಕ್ಕೆ ನೆಟ್ಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು.
ರಾಜರಾಜೇಶ್ವರಿ ನಗರದ ಹತ್ತಿರದಲ್ಲಿ ಇರುವ ಲೇಔಟ್‌ನಲ್ಲಿ ಜಾಗ ಖರೀದಿ ಮಾಡಿದ್ದೀವಿ ಹೀಗಾಗಿ ಆರ್‌ಆರ್ ನಗರ ಸಬ್ ರಿಜಿಸ್ಟರ್ ಆಫೀಸ್‌ನಲ್ಲಿ ಇಂದು ಕೆಲಸವಿತ್ತು. ತುಂಬಾ ದಿನಗಳಿಂದ ಈ ಕೆಲಸಗಳು ನಡೆಯುತ್ತಿತ್ತು ಎಂದು ಮಧು ಗೌಡ ವಿಡಿಯೋದಲ್ಲಿ ಹೇಳಿದ್ದರು.
ನಿಖಿಲ್ ರವೀಂದ್ರ ಮತ್ತು ಮಧು ಗೌಡ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಆ ಪ್ರೀತಿಗೆ ಮದುವೆ ಮುದ್ರೆ ಬಿದ್ದಿದೆ.
ಮಧುಗೌಡ ಅವರ ಫೋಟೋಶೂಟ್ ವಿಡಿಯೋಗೆ ಒಟಟ್ಟು 2.5 ಲಕ್ಷ ಲೈಕ್ಸ್‌ಗಳು ಬಂದಿದ್ದು, 3.5 ಮಿಲಿಯನ್‌ಗೂ ಅಧಿಕ ವೀವ್ಸ್‌ಗಳು ಬಂದಿವೆ.