ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಶಾಂತಿನಿವಾಸ ನಾಯಕಿ ನಿತ್ಯಾ ರಾಮ್ ದಂಪತಿಗಳ ಮುದ್ದಾದ ಫೋಟೊ!

Published : Nov 23, 2024, 08:43 PM ISTUpdated : Nov 25, 2024, 07:56 AM IST

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂತಿ ನಿವಾಸ ಧಾರಾವಾಹಿ ನಟಿ ನಿತ್ಯಾ ರಾಮ್ ದಂಪತಿಗಳ ಮುದ್ದಾದ ಫೋಟೊ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗ್ತಿದೆ.   

PREV
17
ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಶಾಂತಿನಿವಾಸ ನಾಯಕಿ ನಿತ್ಯಾ ರಾಮ್ ದಂಪತಿಗಳ ಮುದ್ದಾದ ಫೋಟೊ!

ಕನ್ನಡ ಸಿನಿಮಾದಲ್ಲಿ ಮಿಂಚುತ್ತಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಅವರ ಸಹೋದರಿ ನಿತ್ಯಾ ರಾಮ್ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ವಾ? ಕನ್ನಡ ಕಿರುತೆರೆಯ ಜನಪ್ರಿಯ ನಟಿ ಇವರು. 
 

27

ಕನ್ನಡ ಸೀರಿಯಲ್ ಗಳಲ್ಲಿ ಮಾತ್ರವಲ್ಲ, ತೆಲುಗು, ತಮಿಳು ಸೀರಿಯಲ್ ಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ ನಿತ್ಯಾ ರಾಮ್ (Nithya Ram), ಸದ್ಯ ತಮಿಳು ಮತ್ತು ಕನ್ನಡದಲ್ಲಿ ಜೊತೆ ಜೊತೆಗೆ ಕೆಲಸ ಮಾಡ್ತಿದ್ದಾರೆ. 
 

37

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಿತ್ಯಾ ರಾಮ್ ತಮ್ಮ ಗಂಡನ ಜೊತೆಗಿರುವ ಮುದ್ದಾದ ಫೋಟೊಗಳು ಸದ್ದು ಮಾಡ್ತಿವೆ. ಈ ಜೋಡಿಗೆ ಯಾವುದೇ ದೃಷ್ಟಿ ಬೀಳದೇ ಇರಲಿ ಎಂದು ಹಾರೈಸುತ್ತಿದ್ದಾರೆ. ನಿತ್ಯಾ ರಾಮ್ 2019 ರಲ್ಲಿ  ಗೌತಮ್ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 
 

47

ಮದುವೆಯಾದ ಬಳಿಕ ನಿತ್ಯಾ ತಮ್ಮ ಪತಿ ಜೊತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. 2 ವರ್ಷಗಳ ಗ್ಯಾಪ್ ಬಳಿಕ ಮತ್ತೆ ಭಾರತಕ್ಕೆ ಬಂದಿರುವ ನಿತ್ಯಾ ರಾಮ್, ಕನ್ನಡ ಹಾಗೂ ತಮಿಳು ಸೀರಿಯಲ್ ಗಳಲ್ಲಿ ನಟಿಸೋದಕ್ಕೆ ಒಪ್ಪಿಕೊಂಡು, ಇದೀಗ ಎರಡನ್ನೂ ಜೊತೆ ಜೊತೆಯಾಗಿ ಮಾಡ್ತಾ ಬಂದಿದ್ದಾರೆ. 
 

57

ಕನ್ನಡದಲ್ಲಿ ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿರುವ ಶಾಂತಿ ನಿವಾಸ ಧಾರಾವಾಹಿಯಲ್ಲಿ ನಾಯಕಿ ಶಾಂತಿಯ ಪಾತ್ರದಲ್ಲಿ ನಿತ್ಯಾ ರಾಮ್ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ಆನಾ ಸಿರಿಯಲ್ ನಲ್ಲೂ ಇವರು ನಟಿಸುತ್ತಿದ್ದಾರೆ. 
 

67

ಶಾಂತಿ ನಿವಾಸ (Shanthi Nivasa) ಧಾರಾವಾಹಿಯಲ್ಲಿ ಸದ್ಯ ಶಾಂತಿಯ ಪಾತ್ರವನ್ನು ಕೊನೆಗೊಳಿಸಲಾಗಿದೆ. ಮಂತ್ರಾಳ ದ್ವೇಷಕ್ಕೆ ಶಾಂತಿ ಸಾವಿನ ಮನೆಯ ಕದ ತಟ್ಟಿದ್ದಾಳೆ. ಸೀರಿಯಲ್ ನಲ್ಲಿ ಮತ್ತೊಂದು ಟ್ವಿಸ್ಟ್ ಅಂದ್ರೆ ಇದೀಗ ಮತ್ತೊಂದು ಪಾತ್ರದ ಮೂಲಕ ನಿತ್ಯಾ ರಾಮ್ ಎಂಟ್ರಿಯಾಗಿದೆ. 
 

77

ಇಲ್ಲಿವರೆಗೆ ಮನೆಯವರು ಏನೇ ಹೇಳಿದ್ರೂ ಅದನ್ನ ಕೇಳುತ್ತಾ, ಹಸುವಿನಂತಿದ್ದ ಶಾಂತಿಯೇ ಬೇರೆ, ಇನ್ನು ಮುಂದೆ ಬರಲಿರುವ ಅಚ್ಚು ಪಾತ್ರಾನೇ ಬೇರೆ. ಜೀನ್ಸ್ ಧರಿಸಿ, ಬೈಕ್ ಓಡಿಸ್ಕೊಂಡು ಬರೋ ಅಚ್ಚು ಮುಂದೆ ಶಾಂತಿ ನಿವಾಸಕ್ಕೆ ಎಂಟ್ರಿ ಕೊಡ್ತಾಳ ಕಾದು ನೋಡಬೇಕು. 
 

click me!

Recommended Stories