ಅಬ್ಬಬ್ಬಾ! ಈ ಗಯ್ಯಾಳಿ ಮಾತಿಗೆ ಮಾತು ಕೊಡೋಕೆ ಆಗುತ್ತಾ...ಶೋಭಾ ಶೆಟ್ಟಿ ಸಿಕ್ಕಾಪಟ್ಟೆ ಟ್ರೋಲ್

First Published | Nov 23, 2024, 5:25 PM IST

ತೆಲುಗು ಬಿಗ್‌ ಬಾಸ್‌ನಿಂದ ಕನ್ನಡ ಬಿಗ್ ಬಾಸ್‌ಗೆ ಕಾಲಿಟ್ಟ ಶೋಭಾ ಶೆಟ್ಟಿ....ಮಾತಿಗೆ ಮಾತು ಬೆಳೆಸೋದು ನೋಡಿ ನೆಟ್ಟಿಗರೇ ಶಾಕ್......
 

ಬಿಗ್ ಬಾಸ್ ಸೀಸನ್ 11ರ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ ಶೋಭಾ ಶೆಟ್ಟಿ. ಸುಮಾರು 50 ದಿನಗಳ ಪೂರೈಸಿದ ಮೇಲೆ ಕಾಲಿಟ್ಟು ಬಿಬಿ ಮನೆಯಲ್ಲಿ ಕಿಚ್ಚು ಹೆಚ್ಚಿಸಿದ್ದಾರೆ.

ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಶೋಭಾ ಶೆಟ್ಟಿ ಸ್ಪರ್ಧಿಸಿ ಇದೀಗ ಕನ್ನಡಕ್ಕೆ ಕಾಲಿಟ್ಟಿರುವುದು. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಆಗುತ್ತದೆ, ಹೇಗೆ ವರ್ಕ್‌ ಆಗುತ್ತದೆ ಅನ್ನೋ ಐಡಿಯಾ ಚೆನ್ನಾಗಿದೆ. 

Tap to resize

ಶೋಭಾ ಶೆಟ್ಟಿ ತಮ್ಮ ಶಿಕ್ಷಣ ಮುಗಿಸಿರುವುದು ಬೆಣ್ಣೆ ನಗರಿ ದಾವಣಗೆರೆಯ ಬಾಪುಜಿ ಹೈಸ್ಕೂಲ್‌ನಲ್ಲಿ. ಇದಾದ ಮೇಲೆ Diploma & Msc in sustainable developmentನಲ್ಲಿ ಪದವಿ ಪಡೆದಿದ್ದಾರೆ.

 'ನಾನು ನಟಿಯಾಗದೇ ಇದ್ದಿದ್ದರೆ ಖಂಡಿತಾ ಇಂಜಿನಿಯರ್ ಆಗಿರುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ನಟನೆಗೆ ಕಾಲಿಡುವ ಮುನ್ನ Ismailiaದ ATSITನಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್‌ ಮನೆಗೆ ಕಾಲಿಡುವಾಗ ನನಗೆ ಕಗ್ಗತ್ತಲೆ ಅಂದ್ರೆ ಸಿಕ್ಕಾಪಟ್ಟೆ ಭಯ ಹಾಗೂ ಇಂಜೆಕ್ಷನ್ ಅಂದ್ರೆ ಇನ್ನೂ ಭಯ ಎಂದು ಸುದೀಪ್ ಮುಂದರೆ ಹೇಳಿದ್ದರು.

ಬಿಗ್ ಬಾಸ್‌ ಮನೆಗೆ ಕಾಲಿಡುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ಕೌಂಟರ್ ಕೊಡುತ್ತಾ ಮಾತಿಗೆ ಮಾತು ಬೆಳೆಸಿ ಜಗಳವಾಡುವ ಗುಣ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ನೆಗೆಟಿವ್ ಟ್ರೋಲ್‌ ಎದುರಾಗಿದೆ.

ಅಯ್ಯೋ! ಈ ಗಯ್ಯಾಳಿ ಜೊತೆ ಯಾರ್ ಇರ್ತಾರೆ ಮಾತನಾಡಲು ಬರಲ್ಲ ಬರೀ ಜಗಳ ಮಾಡ್ತಾಳೆ...ಇಷ್ಟೋಂದು ಮಾತನಾಡುವವಳು ಯಾಕೆ ಸುದೀಪ್ ಸರ್ ಮುಂದೆ ಸೈಲೆಂಟ್ ರೀತಿ ನಾಟಕ ಮಾಡಿದ್ದಳು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Latest Videos

click me!