ಹೇಮಶ್ರೀ (Hemashree)
ಹೇಮಶ್ರೀ ಕನ್ನಡ ಕಿರುತೆರೆಯ ಜನಪ್ರಿಯ ನಟಿ, ಇವರು ವಠಾರ, ತುಳಸಿ, ಉತ್ತರಾಯಣ, ಮಹಾಮಾಯಿ ಸೇರಿದಂತೆ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ, ಅಪ್ಪು, ವೀರ ಪರಂಪರೆ, ಸಿರಿವಂತ, ಮರ್ಮ, ಉಗ್ರಗಾಮಿ, ವರ್ಷದಂತಹ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇವರ ವೈವಾಹಿಕ ಜೀವನದಲ್ಲಿ, ರಾಜಕೀಯದಲ್ಲಿ ಸೋಲನ್ನು ಅನುಭವಿಸಿದ್ದರು. ನಟಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದು, ಇದು ಕೊಲೆ ಎನ್ನುವ ಬಗ್ಗೆ ಕೂಡ ಭಾರಿ ಸುದ್ದಿಯಾಗಿತ್ತು.