ಮೈಸೂರು ಸಿಲ್ಕ್ ಸೀರೆಯಲ್ಲಿ ನಟಿ ಸುಕೃತಾ ನಾಗ್ ಮಿಂಚಿಂಗ್… ಅಂದ ಹೊಗಳೋದು ಬಿಟ್ಟು, ಬಿಗ್ ಬಾಸ್ ಗೆ ಸ್ವಾಗತ ಅಂತಿದ್ದಾರೆ ಜನ!

Published : Sep 28, 2024, 12:06 PM ISTUpdated : Sep 28, 2024, 12:22 PM IST

ಕಿರುತೆರೆ ನಟಿ ಸುಕೃತಾ ನಾಗ್ ಬಿಗ್ ಬಾಸ್ ಗೆ ಹೋಗ್ತಿದ್ದಾರೆ  ಎನ್ನುವ ಸುದ್ದಿ ಹರದಾಡುತ್ತಿರುವ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ ನಟಿ.   

PREV
17
ಮೈಸೂರು ಸಿಲ್ಕ್ ಸೀರೆಯಲ್ಲಿ ನಟಿ ಸುಕೃತಾ ನಾಗ್ ಮಿಂಚಿಂಗ್… ಅಂದ ಹೊಗಳೋದು ಬಿಟ್ಟು, ಬಿಗ್ ಬಾಸ್ ಗೆ ಸ್ವಾಗತ ಅಂತಿದ್ದಾರೆ ಜನ!

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ಧಾರ್ಥನ ತಂಗಿಯಾಗಿ ನಟಿಸಿ ಜನಪ್ರಿಯತೆ ಗಳಿಸಿದ ನಟಿ ಸುಕೃತಾ ನಾಗ್ (Sukrutha Nag), ಇದೀಗ ಬಿಗ್ ಬಾಸ್ ಸೀಸನ್ 11 ನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಸ್ಪರ್ಧಿಗಳ ಲಿಸ್ಟ್ ನಲ್ಲಿ ಸುಕೃತಾ ಹೆಸರು ಕಂಡು ಬರುತ್ತಿದೆ. 

27

ಅಷ್ಟಕ್ಕೂ ಸುಕೃತಾ ನಾಗ್ ಬಿಗ್ (Bigg Boss Season 11)  ಬಾಸ್ ಗೆ ತೆರಳಲಿದ್ದಾರ ಇಲ್ವಾ ಅನ್ನೋದು ಇನ್ನೂ ಕನ್ ಫರ್ಮ್ ಆಗಿಲ್ಲ. ಇವತ್ತು ರಾಜಾ ರಾಣಿ ಶೋ ನಲ್ಲಿ ಹೆಸರುಗಳು ರಿವೀಲ್ ಆಗಲಿದೆ. ಆವಾಗ್ಲೇ ಗೊತ್ತಾಗೋದು ಸುಕೃತಾ ನಿಜವಾಗಿಯೂ ಬಿಗ್ ಬಾಸ್ ಗೆ ಬರ್ತಿದ್ದಾರ ಇಲ್ವಾ ಅನ್ನೋದು. 
 

37

ಬಿಗ್ ಬಾಸ್ ಸುದ್ದಿಯ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸುಕೃತಾ ಮೈಸೂರು ಸಿಲ್ಕ್ ಸೀರೆಯುಟ್ಟು ಮುದ್ದಾಗಿ ಫೋಟೊ ಶೂಟ್ ಮಾಡಿಸಿದ್ದು, ಸಾಂಪ್ರದಾಯಿಕ ಅವತಾರದಲ್ಲಿ ದೇವತೆಯಂತೆ ಕಾಣ್ತಿದ್ದಾರೆ ಅನ್ನೋದು ಸುಳ್ಳಲ್ಲ. 
 

47

ಹಸಿರು, ನೇರಳೆ ಮತ್ತು ಕೆಂಪು ಬಣ್ಣವುಳ್ಳ ಸೀರೆಗೆ ಸುಕೃತಾ ನೇರಳೆ ಬಣ್ಣದ ಬ್ಲೌಸ್ ಧರಿಸಿದ್ದಾರೆ. ಇದರ ಜೊತೆಗೆ ದೊಡ್ಡದಾದ ಆಂಟಿಕ್ ನೆಕ್ಲೆಸ್, ದೊಡ್ಡದಾದ ಜುಮ್ಕಿ ಧರಿಸಿ, ಜಡೆ ಕಟ್ಟಿ, ಪುಟ್ಟದಾದ ಕೆಂಪು ಗುಲಾಬಿ ಧರಿಸಿ, ಕೆಂಪು ಬೊಟ್ಟು, ಕೆಂಪು ಲಿಪ್ ಸ್ಟಿಕ್ ಧರಿಸಿ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ. ಇವರು ಈ ಟ್ರೆಡಿಶನಲ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

57

ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ ಸುಕೃತಾ ಎಂದಿರುವ ಅಭಿಮಾನಿಗಳು ದೇವತೆ ದೇವಸ್ಥಾನ ಬಿಟ್ಟು ಆಚೆ ಬಂದಿರೋ ಹಾಗೆ ಕಾಣಿಸ್ತಿದೆ. ಕಟ್ ಔಟ್ ಮಾಡಿ ಮೆರವಣಿಗೆ ಮಾಡೋ ಟೈಮ್ ಇದು ಎಂದು ಸಹ ಹೇಳಿದ್ದಾರೆ. ಅಷ್ಟೇ ಅಲ್ಲ ಅಂದದ ಗೊಂಬೆ ಅಂತಾನು ಕರೆದಿದ್ದಾರೆ. 
 

67

ಸುಕೃತಾ ನಾಗ್ ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷಣ ಧಾರಾವಾಹಿಯಲ್ಲಿ (Lakshana Serial) ವಿಲ್ಲನ್ ಶ್ವೇತಾ ಪಾತ್ರದಲ್ಲಿ ನಟಿಸಿದ್ದರು. ಇವರ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು. ಇದಾದ ನಂತರ ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ನಲ್ಲೂ ನಟಿಸಿದ್ದರು. ಆದರೆ ಅದನ್ನ ಅರ್ಧದಲ್ಲೇ ಬಿಟ್ಟಿದ್ದರು. 
 

77

ಕಳೆದ ಬಾರಿ ಅಂದ್ರೆ ಬಿಗ್ ಬಾಸ್ ಸೀಸನ್ 10ರ ಸಮಯದಲ್ಲೂ ಸುಕೃತಾ ಬಿಗ್ ಬಾಸ್ ಗೆ ಹೋಗೋದಾಗಿ ಸುದ್ದಿಯಾಗಿತ್ತು, ಆದರೆ ಕಳೆದ ವರ್ಷ ನಟಿ ಭಾಗವಹಿಸಿರಲಿಲ್ಲ. ಈ ಬಾರಿಯಾದ್ರೂ ಸುಕೃತಾ ಬಿಗ್ ಬಾಸ್ ಸೀಸನ್ 11 ರಲ್ಲಿ ಭಾಗವಹಿಸಲಿದ್ದಾರೆ ಕಾದು ನೋಡಬೇಕು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories