ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ ನೇಹಾ ಗೌಡ ದಂಪತಿ: ಪೋಟೋ ನೋಡಿದ ನೆಟ್ಟಿಗರು ಗೊಂಬೆ ಗರ್ಭಿಣಿಯಾದ್ರು ಅನ್ನೋದಾ!

Published : Mar 11, 2024, 09:33 AM ISTUpdated : Mar 11, 2024, 10:00 AM IST

ಕಿರುತೆರೆಯ ಗೊಂಬೆ ನೇಹಾ ಗೌಡ ಪತಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರೂ ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್ ಆಗಿದೆ.

PREV
18
ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ ನೇಹಾ ಗೌಡ ದಂಪತಿ: ಪೋಟೋ ನೋಡಿದ ನೆಟ್ಟಿಗರು ಗೊಂಬೆ ಗರ್ಭಿಣಿಯಾದ್ರು ಅನ್ನೋದಾ!

ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನೇಹಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪತಿ ಚಂದನ್ ಜೊತೆಗೆ ಕ್ಯೂಟ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.

28

ನೇಹಾ ಗೌಡ ಮತ್ತು ಚಂದನ್ ಅವರ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 94 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕ್ಯೂಟ್ ಜೋಡಿ, ಚೆಂದವಾಗಿ ಕಾಣ್ತಿದ್ದೀರಿ, ಮುದ್ದಾದ ಜೋಡಿ, ನಿಮ್ಮ ಜೋಡಿಗೆ ಯಾವುದೇ ದೃಷ್ಟಿ ಆಗದೆ ಇರಲಿ, ನೇಹಾ ಮೇಡಂ ನೀವು ಗರ್ಭಿಣಿಯಾದ್ರಾ ಎಂದು ಫ್ಯಾನ್ಸ್ ಹೇಳಿದ್ದಾರೆ.

38

ನಟಿ ನೇಹಾ ಗೌಡ ಮತ್ತು ಚಂದನ್ ಅವರದ್ದು ಲವ್ ಮ್ಯಾರೇಜ್. ಇವರಿಬ್ಬರು ಶಾಲಾ ದಿನಗಳಿಂದ ಪ್ರೀತಿ ಮಾಡ್ತಾ ಇದ್ದರು. ಇಬ್ಬರು ಅದೇ ಪ್ರೀತಿನ್ನು ಉಳಿಸಿಕೊಂಡು ಮದುವೆಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದಾರೆ.

48

ನಟಿ ನೇಹ ಗೌಡ ಮತ್ತು ಚಂದನ್ ತುಂಬಾ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಚಂದನ್ ತಮ್ಮ ಪತ್ನಿಗಾಗಿ ವಿದೇಶದಲ್ಲಿನ ಕೆಲಸ ಬಿಟ್ಟು ಇಲ್ಲಿಗೆ ಬಂದು ಜೀವನ ನಡೆಸುತ್ತಿದ್ದಾರೆ.

58

ಚಂದನ್ ಮತ್ತು ನೇಹಾ ಗೌಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ರಾಜಾ ರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರು ಚೆನ್ನಾಗಿ ಸ್ಪರ್ಧೆ ನೀಡಿ ವಿಜೇತರಾಗಿದ್ದರು. ಈ ಜೋಡಿ ರಾಜ್ಯದ ಜನರ ಮನಸ್ಸು ಗೆದ್ದಿತ್ತು.

68

ರಾಜಾ ರಾಣಿ ಶೋ ನಂತರ ಚಂದನ್ ಅವರು ಡ್ಯಾನ್ಸ್ ಶೋನಲ್ಲೂ ಭಾಗವಹಿಸಿದ್ದರು. ಡ್ಯಾನ್ಸ್ ನಲ್ಲೂ ಸೈ ಎನಿಸಿಕೊಂಡಿದ್ದರು. ಈಗ ನಟನೆಗೆ ಇಳಿದಿದ್ದಾರೆ. ಪತ್ನಿ ಪ್ರೇರಣೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅಂತರಪಟ ಧಾರಾವಾಹಿಯಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

78

ನೇಹಾ ಗೌಡ ಮತ್ತು ಚಂದನ್ ಇಬ್ಬರು ಸೀರಿಯಲ್ ನಲ್ಲಿ ಬ್ಯುಸಿ ಆಗ್ತಿದ್ದಾರೆ. ನೇಹಾ ಗೌಡ ಸುವರ್ಣದಲ್ಲಿ ಪ್ರಸಾರವಾಗ್ತಿರುವ ನಮ್ಮ ಲಚ್ಚಿಯಲ್ಲಿ ಅಭಿನಯಿಸುತ್ತಿದ್ದರು. ಸದ್ಯ ಧಾರಾವಾಹಿಯಲ್ಲಿ ಅವರ ಪಾತ್ರ ಮತ್ತೆ ಮುಂದುವರೆದಿದೆ.

88

ಬಿಗ್ ಬಾಸ್ ಸೀಸನ್ 09ಕ್ಕೆ ನೇಹಾ ಗೌಡ ಬಂದಿದ್ದರು. ಆದ್ರೆ ಬೇಗ ಬಿಗ್ ಬಾಸ್ ನಿಂದ ಆಚೆ ಬಂದಿದ್ದರು. ಅಲ್ಲಿಂದ ಬಂದ ಮೇಲೆ ನಮ್ಮ ಲಚ್ಚಿ ಸೀರಿಯಲ್‍ನಲ್ಲಿ ನಟಿಸಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ನೇಹಾ ಯಾವಾಗಲೂ ಸಕ್ರಿಯರಾಗಿರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories