ಕಳೆದ ನಾಲ್ಕು ವರ್ಷಗಳಿಂದ ಕಿರುತೆರೆ ಪ್ರೇಕ್ಷಕರಿಗೆ ತುಂಬಾನೆ ಮನರಂಜನೆ ನೀಡಿದ ಧಾರಾವಾಹಿ ಕಲರ್ಸ್ ಕನ್ನಡಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಗೀತಾ. ಇದೀಗ ಸೀರಿಯಲ್ ಕೊನೆಗೂ ಮುಕ್ತಾಯಗೊಂಡಿದ್ದು, ಸೀರಿಯಲ್ ನಾಯಕ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ತಮ್ಮ ಸೀರಿಯಲ್ ಪಯಣದ ಬಗ್ಗೆ ಬರೆದಿರುವ ಧನುಷ್ ಗೌಡ (Dhanush Gowda), ಇದು ನಂಬಲಾಗದ ಪ್ರಯಾಣವಾಗಿದೆ ಮತ್ತು ಈ ಪ್ರಾಜೆಕ್ಟ್ ನ ಭಾಗವಾಗಿರುವುದಕ್ಕೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಗೀತಾ ಸೀರಿಯಲ್ (Geetha Serial)ಇದು ನನ್ನ ಮೊದಲ ಪ್ರಾಜೆಕ್ಟ್ ಆಗಿದ್ದು, ನನಗೆ ಈ ಅವಕಾಶವನ್ನು ನೀಡಿದ ರಾಮ್ಜಿ ಸರ್ ಮತ್ತು ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಗೀತಾ ತಂಡದ ಎಲ್ಲಾ ಸದಸ್ಯರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಜೊತೆಗೆ ನಾವು 1107 ಕಂತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಮತ್ತು ಪ್ರೇಕ್ಷಕರು / ಅಭಿಮಾನಿಗಳಾಗಿ ನೀವು ವರ್ಷಗಳಿಂದ ತೋರಿಸಿದ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಕೃತಜ್ಞತೆಗಳ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಯಾವಾಗಲೂ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲಾ ಅಭಿಮಾನಿ ಪುಟಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
ಅಂತಿಮವಾಗಿ ನನ್ನ ಎಲ್ಲಾ ಏರಿಳಿತಗಳಲ್ಲಿ ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನನ್ನ ಕುಟುಂಬಕ್ಕೆ ಧನ್ಯವಾದಗಳು., ಅವರಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನನ್ನ ಮುಂಬರುವ ಎಲ್ಲಾ ಪ್ರಾಜೆಕ್ಟ್ ಗಳಿಗೆ ನೀವು ಅದೇ ರೀತಿಯ ಪ್ರೀತಿ ಮತ್ತು ಬೆಂಬಲವನ್ನು ತೋರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದಿದ್ದಾರೆ.
2020 ರಲ್ಲಿ ಆರಂಭವಾದ ಗೀತಾ ಸೀರಿಯಲ್, ಆರಂಭದಲ್ಲಿ ಹೂಮಾರು ಹುಡುಗಿ ಗೀತಾ ಮತ್ತು ಮಂತ್ರಿಯ ಸೊಕ್ಕಿನ ಮಗ ವಿಜಯ್ ನಡುವಿನ, ದ್ವೇಷ, ಜಗಳ, ಗಲಾಟೆಯಿಂದಲೇ ಆರಂಭವಾಗಿ, ಬಳಿಕ ವಿಜಯ್ ಬದಲಾಗಿ, ಗೀತಾಳನ್ನು ಮದುವೆಯಾಗುವ ಮೂಲಕ ಟ್ವಿಸ್ಟ್ ನೀಡಿದ್ದು.
ಸೀರಿಯಲ್ ಆರಂಭವಾದಾಗಿನಿಂದ ಇಲ್ಲಿವರೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿ ಜನರಿಗೆ ಭರಪೂರ ಮನರಂಜನೆ ನೀಡುತ್ತಾ, ಕೆಲವೊಮ್ಮೆ ಅದೇ ಕತೆಯನ್ನು ಎಳೆಯುತ್ತಾ ಹೋಗಿ ಜನರಿಗೆ ಬೋರ್ ಹೊಡೆಸಿದ ಧಾರಾವಾಹಿ ಇದಾಗಿದ್ದರು. ಜನರು ಮಾತ್ರ ವಿಜಯ್ ಮತ್ತು ಗೀತಾ ಜೋಡಿಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು.
ಪ್ರೇಕ್ಷಕ ಅಭಿಮಾನಿಗಳು ಎಲ್ಲರೂ ಇನ್ನು ಮುಂದೆ ಗೀತಾ ಸೀರಿಯಲ್ ಮಿಸ್ ಮಾಡ್ತೀವಿ, ಗೀತಾ -ವಿಜಯ್ ಜೋಡಿನ ತುಂಬಾನೆ ಮಿಸ್ ಮಾಡ್ತೀವಿ, ಇಲ್ಲಿವರೆಗೆ ಮನರಂಜನೆ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ, ಮುಂದಿನ ಸೀರಿಯಲ್ ನಲ್ಲೂ ಸಹ ನೀವಿಬ್ಬರೇ ಜೋಡಿಯಾಗಿ ಬನ್ನಿ ಎಂದು ಕೇಳಿಕೊಂಡಿದ್ದಾರೆ.