ಕಪ್ಪು ಗೌನಲ್ಲಿ ಮಿಂಚಿದ ಮಲೈಕಾ …. ಕಲಿಯುಗದ ಅಪ್ಸರೆಯಂತೆ !

First Published | Jun 27, 2024, 12:24 PM IST

ಕಿರುತೆರೆಯ ಲೀಲಾ ಆಗಿ ವರ್ಷಗಳ ಕಾಲ ಮಿಂಚಿ, ಉಪಾಧ್ಯಕ್ಷರ ಗರ್ಲ್ ಫ್ರೆಂಡ್ ಆಗಿಯೂ ಸದ್ದು ಮಾಡಿದ ನಟಿ ಮಲೈಕಾ ವಸುಪಾಲ್ ಹೊಸ ಲುಕ್ ಗೆ ನೆಟ್ಟಿಗರು ಫಿದಾ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಆಗಿ ಮಿಂಚುವ ಮೂಲಕ ಎರಡೂವರೆ ವರ್ಷಗಳ ಕಾಲ ಕನ್ನಡಿಗರನ್ನು ತಮ್ಮ ಅದ್ಭುತ ಅಭಿನಯದ ಮೂಲಕ ಸೆಳೆದಿಟ್ಟ ನಟಿ ಮಲೈಕಾ ವಸುಪಾಲ್. 
 

ಸೀರಿಯಲ್ ಮುಗಿದು ತಿಂಗಳು ಮೂರು ಕಳೆದರೂ ಸಹ ಜನರು ಇಂದಿಗೂ ಮಲೈಕಾರನ್ನು (Malaika Vasupal) ಲೀಲಾ ಆಗಿಯೇ ನೆನಪಿಟ್ಟುಕೊಂಡಿದ್ದಾರೆ. ಮೊದಲ ಸೀರಿಯಲ್ ಮೂಲಕವೇ ಸಾಕಷ್ಟು ಹೆಸರು ಮಾಡಿದ ನಟಿ ಇದೀಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 
 

Tap to resize

ಹೌದು, ಈಗಾಗಲೇ ಚಿಕ್ಕಣ್ಣ (Chikkanna) ನಾಯಕರಾಗಿ ನಟಿಸಿದ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ನಾಗ ಭೂಷಣ್ ಜೊತೆ, ವಿದ್ಯಾಪತಿ ಸಿನಿಮಾದಲ್ಲೂ ನಾಯಕಿಯಾಗಿ ನಟಿಸ್ತಿದ್ದಾರೆ ಮಲೈಕಾ. 
 

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ಆಕ್ಟೀವ್ ಆಗಿರುವ ಮಲೈಕಾ ಹೆಚ್ಚಾಗಿ ತಮ್ಮ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. ಜೊತೆಗೆ ತಾಮ್ಮ ಸಿನಿಮಾದ ಪ್ರೊಮೋಷನ್ ಕೂಡ ಮಾಡುತ್ತಿರುತ್ತಾರೆ. 
 

ಇದೀಗ ಮಲೈಕಾ ಕಪ್ಪು ಬಣ್ಣದ ಸ್ಲೀವ್ ಲೆಸ್ ಗೌನ್, ತಲೆಯಲ್ಲಿ ಕಪ್ಪು ಹ್ಯಾಟ್, ಕೈಯಲ್ಲಿ ಬ್ಲ್ಯಾಕ್ ನೆಟ್ಟೆಡ್ ಗ್ಲೌಸ್ ಧರಿಸಿ ಫೋಟೋಗೆ ಪೋಸ್ ನೀಡಿದ್ದು, ನಟಿಯ ಸಿಂಪಲ್, ಎಲಿಗೆಂಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

ಮಿಲ್ಕಿ ಬ್ಯೂಟಿ ಮಲೈಕಾ ಸೌಂದರ್ಯವನ್ನು ಹೊಗಳುತ್ತಾ ಜನ ಡ್ರೀಮ್ ಗರ್ಲ್, ಅಪ್ಪಟ ದೇವತೆ, ಕಲಿಯುಗದ ಅಪ್ಸರೆ, ಗಾರ್ಜಿಯಸ್, ಬ್ಯೂಟಿ, ಕಿನ್ನರಿ, ಬೋಂಬೆ ತರ ಇದ್ದೀಯ, ಚಿನ್ನದ ಗೊಂಬೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಹಿಟ್ಲರ್ ಕಲ್ಯಾಣದ ಲೀಲಾ ಪಾತ್ರವನ್ನು ಇಷ್ಟಪಟ್ಟಿರೋ ಜನ, ಮತ್ತೆ ಮಲೈಕಾರನ್ನು ತೆರೆ ಮೇಲೆ ನೋಡೋದಕ್ಕೆ ಕಾಯ್ತಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಮಿಂಚುತ್ತಿರುವ ಮಲೈಕಾ ಸ್ಯಾಂಡಲ್ ವುಡ್ ನ (Sandalwood) ಭರವಸೆಯ ನಟಿಯಾಗಲಿದ್ದಾರೆ ಎನ್ನುವ ಅಭಿಮಾನ ಸಂಖ್ಯೆಯೂ ಹೆಚ್ಚಿದೆ.  ಹಾಗಾಗಿ ನಟಿ ಮತ್ತೆ ಕಿರುತೆರೆಯತ್ತ ಮುಖ ಮಾಡೋದು ಡೌಟ್. 
 

Latest Videos

click me!