ಎದೆ ಮೇಲೆ ಗುಲಾಬಿ ಇಟ್ಟು ನಗು ಚಲ್ಲಿದ ಜ್ಯೋತಿ ರೈ, ಆ ಹೂ ನಾನಾಗಬಾರದಿತ್ತಾ ಎಂದ ನೆಟ್ಟಿಗರು!

First Published | Sep 20, 2024, 7:04 PM IST

ಕನ್ನಡ ಕಿರುತೆರೆಯ ಮೂಲಕ ಜನಪ್ರಿಯರಾಗಿ ಬಳಿಕ ತಮಿಳು ಹಾಗೂ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಜ್ಯೋತಿ ರೈ ಇತ್ತೀಚೆಗೆ ಸಿಟ್ಟಾಗಿದ್ದರು. ಅದಕ್ಕೆ ಕಾರಣ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ಬರುತ್ತಿದ್ದ ಕಾಮೆಂಟ್ಸ್‌ಗಳು.

ಜ್ಯೋತಿ ರೈ ಹೂ ಹಿಡಿದು ಬಂದಿದ್ದಾರೆ. ಅದು ಅಂತಿಂಥ ಹೂವಲ್ಲ. ಕಡುಗೆಂಪು ಬಣ್ಣದ ಗುಲಾಬಿ ಹೂ ಹಿಡಿದು ಫೋಟೋಗೆ ಪೋಸ್‌ ನೀಡಿದ್ದಾರೆ. ಕಿರುತೆರೆಯ ಮೇಲೆ ಸೀರೆಯುಟ್ಟು ಗೌರಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ, ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಹಾಟ್‌ ಹಾಟ್‌. ಇನ್ಸ್‌ಟಾಗ್ರಾಮ್‌ನಲ್ಲಿ ಆಕೆ ಒಂದೊಂದೇ ಫೋಟೋ ಬಿಡುತ್ತಿದ್ದರೆ, ಪಡ್ಡೆ ಹುಡುಗರು ಕಾಮೆಂಟ್ಸ್‌ ಬಾಕ್ಸ್‌ನಲ್ಲಿ ಜಮಾಯಿಸಿಬಿಡುತ್ತಿದ್ದರು.
 

ಇದರ ನಡುವೆ ಆಕೆಯದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಯಾವನೋ ಒಬ್ಬ ಅವಿವೇಕಿ ಲೀಕ್‌ ಮಾಡಿದ್ದ. ಆತನ ಮೇಲೆ ಸೈಬರ್‌ ಕ್ರೈಂಗೆ ಜ್ಯೋತಿ ರೈ ದೂರು ಸಲ್ಲಿಸಿದ್ದು ಆಯಿತು. ಅದಾದ ಬಳಿಕ ಜ್ಯೋತಿ ರೈ ಕೆಲ ಕಾಲ ತಣ್ಣಗಾಗಿದ್ದರು. ಮಾತಿಲ್ಲ.. ಕಥೆಯಿಲ್ಲ. ಇನ್ನು ಜ್ಯೋತಿ ರೈ ಫೋಟೋಗಳು ಇಲ್ಲದೆ ಪಡ್ಡೆ ಹುಡುಗರು ತಲೆಕಡಿಸಿಕೊಳ್ಳುತ್ತಿರುವಾಗಲೇ, ಮತ್ತೊಮ್ಮೆ ಹಾಟ್‌ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದರು.

Tap to resize

ತಾವೇನೇ ಪೋಸ್ಟ್‌ ಮಾಡಿದರು ಕೆಟ್ಟದಾಗಿ ಕಾಮೆಂಟ್‌ ಮಾಡ್ತಿದ್ದ ವ್ಯಕ್ತಿಗಳ ಸಲುವಾಗಿ, ಮುಂದಿನ ತಮ್ಮೆಲ್ಲಾ ಪೋಸ್ಟ್‌ಗಳ ಕಾಮೆಂಟ್‌ ಬಾಕ್ಸ್‌ಅನ್ನು ಆಫ್‌ ಮಾಡುತ್ತಿದ್ದೇನೆ ಎಂದಿದ್ದರು. ನನಗೆ ಏನಾದರೂ ಹೇಳಬೇಕಿದ್ದರೆ, ನೇರವಾಗಿ ಇನ್‌ಬಾಕ್ಸ್‌ಗೆ ಮೆಸೇಜ್‌ ಮಾಡಿ ಎಂದಿದ್ದರು. ಆದರೆ, ರೇಣುಕಾಸ್ವಾಮಿ ಕೇಸ್‌ ನೆನಪಿತ್ತಲ್ಲ. ಯಾರೂ ಆಕೆಯ ಇನ್ಸ್‌ಟಾಗ್ರಾಮ್‌ ಇನ್‌ಬಾಕ್ಸ್‌ಗೆ ಮೆಸೇಜ್‌ ಮಾಡೋ ತಾಪತ್ರಯಕ್ಕೆ ಹೋಗಿರಲಿಲ್ಲ.

Jyothi Rai

ಇದೆಲ್ಲದರ ನಡುವೆ ಈಗ ಜ್ಯೂತಿ ರೈ ಗುಲಾಬಿ ಹೂ ಹಿಡಿದುಕೊಂಡು ಫೋಟೋಗೆ ಪೋಸ್‌ ನೀಡಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ವಿಶೇಷವೇನೆಂದರೆ, ಇದರ ಕಾಮೆಂಟ್ಸ್‌ ಬಾಕ್ಸ್‌ಅನ್ನೂ ಅವರು ಮುಕ್ತವಾಗಿರಿಸಿದ್ದಾರೆ. ಸಿಕ್ಕಿದ್ದೇ ಚಾನ್ಸ್‌ ಎಂದುಕೊಂಡ ಫ್ಯಾನ್ಸ್‌ ಬೇಕು ಬೇಕಾದ ಕವನಗಳನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಗೀಚಿದ್ದಾರೆ.

Jyothi Rai

ಗುಲಾಬಿ ಹೂ ಹಿಡಿದುಕೊಂಡು ಯಾರೇ ನೀನು ಚೆಲುವೆ ಎನ್ನುವ ಅರ್ಥದಲ್ಲಿ ಜ್ಯೋತಿ ರೈ ಪೋಸ್‌ ನೀಡಿದ್ದರೆ, ನೆಟ್ಟಿಗರು ಕನಿಷ್ಠ ಆ ಹೂ ನಾನಾಗಬಾರದಿತ್ತಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಅದರೊಂದಿಗೆ ನಿಮ್ಮ ಕಣ್ಣುಗಳು ಬಹಳ ಆಕರ್ಷಕವಾಗಿದೆ ಎಂದೂ ಬರೆದಿದ್ದಾರೆ.
 


ಇನ್ನು ಜ್ಯೋತಿ ರೈ ಅವರ ಎದೆಯ ಮೇಲಿನ ಟ್ಯಾಟೂ ಮೇಲೂ ನೆಟ್ಟಿಗರ ಕಣ್ಣು ಬಿದ್ದಿದೆ. ನೀವು ಹಾಕಿಕೊಂಡಿರುವ ಟ್ಯಾಟುವಿನ ಅರ್ಥ ತಿಳಿಸಬಹುದಾ ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ವಿಚಾರಿಸಿದ್ದಾರೆ.


'ಕವಿತೆಗಳ ಬರಹಗಳ ಗುಚ್ಛ ನೀನಾಗಿರುವಾಗ ಸುಂದರಿ ಕವನ ಪರಿಮಳ ಸೈ ನಿನಗೆ ರೂವಾರಿ.... !!', 'ಇರಬಹುದು ಸುಂದರಿಯರು ಅದೆಷ್ಟೋ ಜನ.. ನಿಮ್ಮ ಮುಂದೆ ನಮಗೆ ಅವರ್ಯಾವ ಸಮ..?!' ಹೀಗೆ ಹಲವಾರು ಕವನಗಳನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆಯಲಾಗಿದೆ. ಎರಡೂ ಫೋಟೋಗಳಲ್ಲಿ ಸಖತ್‌ ಗ್ಲಾಮರಸ್‌ ಆಗಿ ಕಾಣುತ್ತಿದ್ದೀರಿ ಎಂದೂ ಶ್ಲಾಘಿಸಿದ್ದಾರೆ.

Latest Videos

click me!