ಪತಿ ಜೊತೆ ಅನಂತಪದ್ಮನಾಭ ಸ್ವಾಮಿ ದರ್ಶನ ಪಡೆದ ಕಿರುತೆರೆ ನಟಿ ದೀಪಾ ಕಟ್ಟೆ

First Published | Feb 27, 2024, 1:41 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್ ಸಂಧ್ಯಾ ಖ್ಯಾತಿಯ ನಟಿ ದೀಪಾ ಕಟ್ಟೆ ತಮ್ಮ ಪತಿ ಜೊತೆ ಕೇರಳದ ಸುಪ್ರಸಿದ್ಧವಾದ ತಿರುವನಂತಪುರದ ಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ತನ್ನ ವಿಭಿನ್ನ ಕಥೆಯ ಮೂಲಕ ಜನರಮನಸ್ಸು ಗೆದ್ದಿದೆ, ಪ್ರತಿಯೊಬ್ಬರ ನಟನೆಯನ್ನೂ ಸಹ ಜನ ಇಷ್ಟಪಟ್ಟಿದ್ದಾರೆ. ಅದರಲ್ಲೂ ದೀಪಾ ಕಟ್ಟೆಯ (Deepa Katte) ನಟನೆಗೂ ಜನ ಜೈ ಎಂದಿದ್ದಾರೆ. 

ಧಾರಾವಾಹಿಯನ್ನು ತುಳಸಿಯ ಮಗಳು ಸಂಧ್ಯಾ ಆಗಿ, ತಾತನ ಕೈಯಿಂದ ಓಡಿ ಹೋದೋಳೆ ಎಂದು ಬೈಸಿಕೊಳ್ಳುವ, ಸದಾ ದುಡ್ಡಿಗಾಗಿ ಏನಾದರೊಂದು ಕಿತಾಪತಿ ಮಾಡುವ ಹುಡುಗಿ ಪಾತ್ರದಲ್ಲಿ ದೀಪಾ ಕಟ್ಟೆ ನಟಿಸಿದ್ದಾರೆ. 
 

Tap to resize

ನೆಗೆಟೀವ್ ಶೇಡ್ (Negative shade) ಪಾತ್ರವಾದರೂ ಜನರು ಈ ಪಾತ್ರದಲ್ಲಿನ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಇವರು ಎಲ್ಲೇ ಹೋದರೂ ಸೀರಿಯಲ್ ನಿಮ್ಮ ನಟನೆ ಅದ್ಭುತ ಎಂದೇ ಜನ ಹೇಳುತ್ತಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ದೀಪಾ ಕಳೆದ ಕೆಲವು ಸಮಯದಿಂದ ಟ್ರಾವೆಲ್ ಮಾಡೋದ್ರಲ್ಲೇ ಬ್ಯುಸಿ ಇದ್ದಾರೆ. ಹೌದು, ಇವರು ತಮ್ಮ ಪತಿ ರಕ್ಷಿತ್ ಯಡಪಡಿತ್ತಾಯ (Rakshith Yadapadithaya) ಜೊತೆ ದುಬೈ, ತಿರುವನಂತಪುರ, ಶೃಂಗೇರಿ ಹೀಗೇ ಬೇರೆ ಬೇರೆ ಜಾಗಕ್ಕೆ ಟ್ರಾವೆಲ್ ಮಾಡ್ತಿದ್ದಾರೆ. 
 

ಅವರು ಇತ್ತೀಚೆಗೆ ಕೇರಳದ ಇತಿಹಾಸ ಪ್ರಸಿದ್ಧ ದೇಗುಲವಾದ ತಿರುವನಂತಪುರದ (Tiruvanantapuram)ಅನಂತಪದ್ಮನಾಭ ಸ್ವಾಮಿ ದೇಗುಲಕ್ಕೆ ಪತಿ ಜೊತೆ ತೆರಳಿದ್ದು, ಅಲ್ಲಿ ದೇಗುಲದ ಎದುರು ತೆಗೆದಂತಹ ಫೋಟೋಗಳನ್ನು ಸೋಧಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. 
 

ಈ ಮುದ್ದಾದ ಜೋಡಿಯ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ನಿಮ್ಮ ಜೋಡಿ ನೋಡೋಕೆ ತುಂಬಾನೆ ಚೆಂದ ಇದೆ. ಸೀರೆ ಉಟ್ಟರೆ ನೀವು ಅದ್ಭುತವಾಗಿ ಕಾಣಿಸುತ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಇದಕ್ಕೂ ಮುನ್ನ ದೀಪಾ ಕಟ್ಟೆ ಪತಿ ಮತ್ತು ಕುಟುಂಬಸ್ಥರ ಜೊತೆಗೆ ಶೃಂಗೇರಿ ಶ್ರೀ ಶಾರದಾಂಬ ದೇಗುಲಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದಿದ್ದರು. ಅಲ್ಲಿನ ಫೋಟೋಗಳನ್ನು ಸಹ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. 
 

Latest Videos

click me!