ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು; ಜಸ್ಕರಣ್‌-ಅನುಶ್ರೀ ಫೋಟೋಗೆ ಬಂದೇಬಿಡ್ತು ಕಾಮೆಂಟ್!

Published : Feb 26, 2024, 06:30 PM ISTUpdated : Feb 26, 2024, 06:32 PM IST

ಗಾಯಕ ಜಸ್‌ಕರಣ್ ಸಿಂಗ್ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಸರಿಗಮಪ' ವೇದಿಕೆಯಲ್ಲಿ ಹಾಡುತ್ತಿರುವ ಸಿಂಗರ್. ಪಂಜಾಬ್ ಮೂಲದ ಈ ಗಾಯಕ ಕನ್ನಡದ ಹಾಡುಗಳನ್ನು ಆಲ್‌ಮೋಸ್ಟ್ ಕನ್ನಡದವರಂತೆ ಹಾಡುತ್ತಾರೆ ಎಂಬುದು ವಿಶೇಷ. 

PREV
17
ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು; ಜಸ್ಕರಣ್‌-ಅನುಶ್ರೀ ಫೋಟೋಗೆ ಬಂದೇಬಿಡ್ತು ಕಾಮೆಂಟ್!

ಖ್ಯಾತ ನಿರೂಪಕಿ ಅನುಶ್ರೀ ಮತ್ತು ಸಿಂಗರ್ ಜಸ್‌ಕರಣ್ ಸಿಂಗ್ (Singer Jaskaran Singhh) ಒಟ್ಟಿಗೇ ಇರುವ ಫೋಟೋಗಳನ್ನು ಗಾಯಕ ಜಸ್‌ಕರಣ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. 

27

ಗಾಯಕ ಜಸ್‌ಕರಣ್ ಸಿಂಗ್ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಸರಿಗಮಪ' ವೇದಿಕೆಯಲ್ಲಿ ಹಾಡುತ್ತಿರುವ ಸಿಂಗರ್. ಪಂಜಾಬ್ ಮೂಲದ ಈ ಗಾಯಕ ಕನ್ನಡದ ಹಾಡುಗಳನ್ನು ಆಲ್‌ಮೋಸ್ಟ್ ಕನ್ನಡದವರಂತೆ ಹಾಡುತ್ತಾರೆ ಎಂಬುದು ವಿಶೇಷ. 
 
37

ಅಲ್ಪಸ್ವಲ್ಪ ವ್ಯತ್ಯಾಸವಾದರೂ ಎಲ್ಲರ ಮೆಚ್ಚುಗೆ ಗಳಿಸುವಷ್ಟರ ಮಟ್ಟಿಗೆ ಈ ಗಾಯಕ ಕನ್ನಡ ಭಾಷೆಯ ಹಾಡುಗಳನ್ನು ಹಾಡುತ್ತಾರೆ. ಅನುಶ್ರೀ ನಡೆಸಿಕೊಡುತ್ತಿರುವ ಜೀ ಕನ್ನಡದ 'ಸರಿಗಮಪ' ರಿಯಾಲಿಟಿ ಶೋ ಸಾಕಷ್ಟು ಪ್ರಸಿದ್ಧಿ ಪಡೆದಿದೆ. 

47

ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಗಾಯಕ ವಿಜಯಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಜಡ್ಜ್‌ಗಳಾಗಿರುವ ಈ 'ಸರಿಗಮಪ' ಶೋದಲ್ಲಿ ಸಾಕಷ್ಟು ಗಾಯಕ-ಗಾಯಕಿಯರು ಹಾಡಿ ಗಮನಸೆಳೆಯುತ್ತಿದ್ದಾರೆ. ಅವರಲ್ಲಿ ಈ ಜಸ್ಕರಣ್ ಸಿಂಗ್ ಸಹ ಒಬ್ಬರು. 

57

ಅವರೀಗ ನಿರೂಪಕಿ ಅನುಶ್ರೀ ಜತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಅನುಶ್ರೀ ಹಾಗು ಗಾಯಕ ಜಸ್ಕರಣ್ ಸಿಂಗ್ ಅವರ ಫೋಟೋಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಕಾಮೆಂಟ್‌ಗಳು ಬಂದಿವೆ. 

67

ಅವುಗಳಲ್ಲಿ ಒಂದು 'ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು' ಎಂಬ ಕಾಮೆಂಟ್ ಗಮನಸೆಳೆಯುತ್ತಿದೆ. ಅದನ್ನು ಹಲವರು ಲೈಕ್ ಮಾಡಿದ್ದಾರೆ. 'ಹಲವರು ಬೆಸ್ಟ್ ಫೇರ್' ಎಂದು ಸಹಕಾಮೆಂಟ್ ಮಾಡಿದ್ದಾರೆ. 

77

ತಮಾಷೆ ಕಾಮೆಂಟ್‌ಗಳು ಸಾಕಷ್ಟು ಬಂದಿವೆ. ಒಟ್ಟಿನಲ್ಲಿ, ಸದ್ಯ ಅನುಶ್ರೀ-ಜಸ್ಕರಣ್ ಸಿಂಗ್ ಜೋಡಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದು ಟ್ರೆಂಡ್ ಸೃಷ್ಟಿಸುತ್ತಿದೆ.

Read more Photos on
click me!

Recommended Stories