ಅತೀ ಶೀಘ್ರದಲ್ಲೇ ಗೀತಾ ಮುಕ್ತಾಯ, ಸುಳಿವು ಕೊಟ್ಟ ಭವ್ಯಾ ಗೌಡ, ರಾಜ್ಯವೇ ಖುಷಿ ಪಡೋ ಸುದ್ದಿ ಎಂದ ನೆಟ್ಟಿಗರು!

First Published | Feb 26, 2024, 6:51 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನು ನೋಡಿದ ಪ್ರೇಕ್ಷಕರಿಗೆ ಫುಲ್ ಖುಷಿಯಾಗಿದ್ದಾರೆ. 
 

ಕಳೆದ ನಾಲ್ಕು ವರ್ಷಗಳಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಗೀತಾ (Geetha Serial), ಒಂದಲ್ಲ ಒಂದು ಟ್ವಿಸ್ಟ್ ನೀಡಿಕೊಂಡು, ನಿಧಾನವಾಗಿ ಮುಂದುವರೆದುಕೊಂಡು ಹೋಗುತ್ತಿತ್ತು. ಇದೀಗ ಸೀರಿಯಲ್ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಬರುತ್ತಿದೆ. 

2020 ಜನವರಿ 6ರಂದು ‘ಗೀತಾ’ ಧಾರಾವಾಹಿ  ಆರಂಭವಾಗಿತ್ತು. ರಾಮ್‌ಜೀ ಅವರು ಈ ಧಾರಾವಾಹಿಯ ನಿರ್ಮಾಣ ಮಾಡಿದ್ದರು. ಈಗಾಗಲೇ 1016 ಎಪಿಸೋಡ್‌ಗಳನ್ನು ಪೂರೈಸಿರುವ ಧಾರಾವಾಹಿ ಇದಾಗಿದೆ. 
 

Tap to resize

ಸೋಶಿಯಲ್ ಮೀಡಿಯಾಗಳಲ್ಲಿ (social media) ಗೀತಾ ಸೀರಿಯಲ್ ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಜಯ್ ಮತ್ತು ಗೀತಾ ಸ್ಟೋರಿ ಎಲ್ಲಿಂದಲೋ ಆರಂಭವಾಗಿ, ಇನ್ನೆಲ್ಲೋ ಹೋಗುತ್ತಾ ಮುಂದುವರೆಯುತ್ತಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗುತ್ತಿರಲಿಲ್ಲ. 
 

ಇನ್ನು ಎರಡು ದಿನಗಳ ಹಿಂದೆ ಗೀತಾ ಸೀರಿಯಲ್ ನಾಯಕಿ ಭವ್ಯಾ ಗೌಡ, (Bhavya Gowda)ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ನಿಂದ ಜನರಿಗೆ ಸೀರಿಯಲ್ ಶೀಘ್ರದಲ್ಲೇ ಮುಗಿಯಲಿದೆ ಎನ್ನುವ ಸೂಚನೆ ಸಿಕ್ಕಿದೆ. 
 

ಗೀತಾ ಖ್ಯಾತಿಯ ಭವ್ಯ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಗೀತಾ ಆಗಿ ಇನ್ನು ಎರಡು ದಿನ ಎಂದು ಪೋಸ್ಟ್ ಮಾಡಿದ್ದರು. ಇದರ ಅರ್ಥ ಗೀತಾ ಸೀರಿಯಲ್ ಮುಗಿಯಲಿದೆಯೋ ಅಥವಾ ಗೀತಾ ತಂಡದಿಂದ ಭವ್ಯಾ ಗೌಡ ಹೊರ ಬರಲಿದ್ದಾರೆಯೋ ಗೊತ್ತಿಲ್ಲ. ಆದರೆ ಜನರು ಮಾತ್ರ ಸೀರಿಯಲ್ ಮುಗಿಯುವ ಖುಷಿಯಲ್ಲಿದ್ದಾರೆ. 

ಇನ್ನು ಗೀತಾ ಸೀರಿಯಲ್ ಮುಕ್ತಾಯ ಆಗುತ್ತಿರುವ ಸುದ್ದಿ ಕೇಳಿ ಪ್ರೇಕ್ಷಕರು ಮಾತ್ರ ತುಂಬಾನೆ ಖುಷಿಯಾಗಿದ್ದಾರೆ. ಸೀರಿಯಲ್ ಮುಗೀತಾ ಇದ್ಯಾ? ನಿಜ್ವಾಗ್ಲೂ ತುಂಬಾ ಒಳ್ಳೇದು ಆಯ್ತು ಮುಗಿಲಿ ಬೇಗ ಯಪ್ಪಾ ಈ ಧಾರಾವಾಹಿ, ಇದು ಇಡೀ ರಾಜ್ಯವೆ ಖುಷಿ ಪಡೋ ಸುದ್ದಿ ಬೇಗನೆ ಒಮ್ಮೆ ಮುಗ್ಸಿ ಬಿಡಿ ಎಂದು ಜನ ಕೇಳಿಕೊಂಡಿದ್ದಾರೆ. 
 

ಅಷ್ಟೇ ಅಲ್ಲ ಈ ಸೀರಿಯಲ್ ಅಲ್ಲಿ ಏನೂ ಇಲ್ಲ, ಒಂದೇ ಕಥೆನಾ ಇಲ್ಲಿವರೆಗೆ ಎಳೆದುಕೊಂಡು ಬಂದಿದ್ದಾರೆ. ಇದರಲ್ಲಿ ಜನರಿಗೆ ಸಂದೇಶ ನೀಡುವಂತದ್ದು ಏನೂ ಇಲ್ಲ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಅಂತೂ ಇಂತೂ ಮುಗಿತಲ್ಲ, ಒಳ್ಳೆಯದೇ ಆಯ್ತು ಎಂದು ಹೇಳುತ್ತಿದ್ದಾರೆ. 

Latest Videos

click me!