ಕಳೆದ ಆರು ತಿಂಗಳಿಂದ Amruthadhaare Serial ನಟಿ ಸಾರಾ ಅಣ್ಣಯ್ಯಗೆ ಅದೇ ಪ್ರಶ್ನೆ ಕೇಳ್ತಿರೋ ವೀಕ್ಷಕರು!

Published : Jul 20, 2025, 10:35 PM IST

'ಕನ್ನಡತಿ', 'ನಮ್ಮ ಲಚ್ಚಿ', 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸಿದ್ದ ಸಾರಾ ಅಣ್ಣಯ್ಯ ಅವರು ಕನ್ನಡ ಕಿರುತೆರೆಯಿಂದ ದೂರ ಆಗಿ ಆರು ತಿಂಗಳಾಗಿವೆ. ಈಗ ಅವರು ಟ್ರಿಪ್‌ ಹೋಗಿದ್ದು, ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

PREV
15

'ಅಮೃತಧಾರೆ' ಧಾರಾವಾಹಿಯಲ್ಲಿ ಮಹಿಮಾ ದಿವಾನ್‌ ಪಾತ್ರದಲ್ಲಿ ನಟಿಸಿದ್ದ ಸಾರಾ ಅಣ್ಣಯ್ಯ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದು ಆರು ತಿಂಗಳಿಗೂ ಅಧಿಕ ಟೈಮ್‌ ಆಗಿದೆ. ಹಾಲಿಡೇ ಮೂಡ್‌ನಲ್ಲಿರುವ ಸಾರಾ ಅಣ್ಣಯ್ಯ ಅವರು ಯಾವಾಗ ತೆರೆ ಮೇಲೆ ಬರ್ತಾರೆ ಎಂದು ಕಾದು ನೋಡಬೇಕಿದೆ.

25

ಅಮೃತಧಾರೆ ಧಾರಾವಾಹಿಯಲ್ಲಿ ನಾಯಕ ಗೌತಮ್‌ ದಿವಾನ್‌ ತಂಗಿ ಪಾತ್ರದಲ್ಲಿ ಸಾರಾ ಅಣ್ಣಯ್ಯ ನಟಿಸುತ್ತಿದ್ದರು. ಆಗರ್ಭ ಶ್ರೀಮಂತೆ ಮಹಿಮಾಗೆ ಹಣದ ಹುಚ್ಚು, ಸೌಂದರ್ಯವೇ ಎಲ್ಲ ಅಂತ ಅವಳು ನಂಬಿದ್ದಳು. ಮಗು ಆದರೆ ಸೌಂದರ್ಯ ಹಾಳಾಗುತ್ತದೆ ಅಂತ ಅವಳು ನಂಬಿದ್ದಳು. ಹೀಗಾಗಿ ಗರ್ಭಪಾತ ಮಾಡಿಸಿಕೊಂಡಿದ್ದಳು.

35

ಸಾರಾ ಅಣ್ಣಯ್ಯ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಇದಕ್ಕೆ ಕಾರಣ ಏನು ಎಂದು ಸಾರಾ ಅವರಾಗಲೀ, ಧಾರಾವಾಹಿ ತಂಡವಾಗಲೀ ಮಾಹಿತಿ ನೀಡಿಲ್ಲ. ಒಟ್ಟಿನಲ್ಲಿ ಇದಕ್ಕೆ ಉತ್ತರ ಏನು ಎಂದು ವೀಕ್ಷಕರಿಗೆ ಸಿಕ್ಕಿಲ್ಲ.

45

ಸಾರಾ ಅಣ್ಣಯ್ಯ ಅವರು ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಫೋಟೋ ಹಾಕಿದ್ರೂ ಕೂಡ ವೀಕ್ಷಕರು ಮಾತ್ರ “ಯಾಕೆ ಅಮೃತಧಾರೆ ಧಾರಾವಾಹಿ ಬಿಟ್ರಿ”? ಎಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಇದಕ್ಕಂತೂ ಉತ್ತರ ಸಿಕ್ಕಿಲ್ಲ.

55

ಆದರೆ ಸಾರಾ ಅಣ್ಣಯ್ಯ ಅವರು ಧಾರಾವಾಹಿ ಬಿಟ್ಟಿದ್ದಕ್ಕೆ ಕಾರಣವನ್ನೂ ಕೊಟ್ಟಿಲ್ಲ. ಅದರಂತೆ ಅವರು ಯಾವಾಗ ತೆರೆ ಮೇಲೆ ಬರ್ತೀನಿ ಎಂದು ಕೂಡ ಹೇಳಿಲ್ಲ. ವೀಕ್ಷಕರಂತೂ ಸಾರಾ ಅವರು ಯಾವಾಗ ತೆರೆ ಮೇಲೆ ಕಾಣಿಸ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಇದಕ್ಕೆ ಸಾರಾ ಅವರೇ ಉತ್ತರ ಕೊಡಬೇಕಿದೆ.

Read more Photos on
click me!

Recommended Stories