ಇಷ್ಟು ದಿನ ಅಭಿಮಾನಿಗಳು ಕೇಳ್ತಿದ್ದ ಸುಂದರ ಫೋಟೋಗಳನ್ನು ಹಂಚಿಕೊಂಡ ಅಮೃತಧಾರೆ ಸೀರಿಯಲ್ ನಟಿ

Published : Jul 21, 2025, 10:02 AM ISTUpdated : Jul 21, 2025, 10:03 AM IST

Sudha And Srujan Marriage: ಅಮೃತಧಾರೆಯಲ್ಲಿ ಸುಧಾ ಮತ್ತು ಸೃಜನ್ ಮದುವೆಯಾಗಿದ್ದು, ಹೊಸ ಬದುಕು ಆರಂಭಿಸಿದ್ದಾರೆ. ಶಕುಂತಲಾ ಕುತಂತ್ರದಿಂದಲೇ ಈ ಮದುವೆ ನೆರವೇರಿದೆ. ಇದೀಗ ಸುಧಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ.

PREV
15
ಅಮೃತಧಾರೆಯ ಸೀರಿಯಲ್‌

ಅಮೃತಧಾರೆಯ ಸೀರಿಯಲ್‌ನಲ್ಲಿ ಸುಧಾ ಮತ್ತು ಸೃಜನ್ ಮದುವೆಯಾಗಿದ್ದು, ಪ್ರೇಕ್ಷಕರಲ್ಲಿ ಸಂತಸ ಮೂಡಿಸಿದೆ. ಸುಧಾ ಎಲ್ಲಿ ಮೊದಲ ಗಂಡನ ಜೊತೆ ಹೋಗ್ತಾಳೆ ಎಂಬ ಆತಂಕ ವೀಕ್ಷಕರಲ್ಲಿ ಎದುರಾಗಿತ್ತು. ಇಷ್ಟವಿಲ್ಲದಿದ್ರೂ ಮೊದಲ ಗಂಡನೊಂದಿಗೆ ಹೋಗಲು ಸುಧಾ ಒಪ್ಪಿದ್ದಳು. ಆದ್ರೆ ಅಣ್ಣ ಗೌತಮ್ ದಿವಾನ್ ಇದಕ್ಕೆ ಅವಕಾಶ ಕೊಡದೇ ತಂಗಿಯ ಬದುಕನ್ನು ಕಾಪಾಡಿ, ಒಂಟಿಯಾಗಿದ್ದ ಸುಧಾ ಬಾಳಲ್ಲಿ ಬೆಳಕು ಮೂಡಿಸಿದ್ದಾನೆ.

25
ಸುಧಾ-ಸೃಜನ್ ಮದುವೆ

ಹೌದು, ಗೌತಮ್ ದಿವಾನ್ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸೃಜನ್ ಜೊತೆ ತಂಗಿ ಸುಧಾಳ ಮದುವೆ ಮಾಡಿಸಿದ್ದಾನೆ. ಸುಧಾ ಜೀವನ ಹಾಳು ಮಾಡಲು ಪ್ಲಾನ್ ಮಾಡಿದ್ದ ಶಕುಂತಲಾಗೆ ತೀವ್ರ ಮುಖಭಂಗವಾಗಿದೆ. ಸೃಜನ್ ಆಸೆಯೂ ಈಡೇರಿದ್ದು, ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆಯನ್ನು ಸುಧಾಗೆ ನೀಡಿದ್ದಾನೆ. ಮೊದಲ ರಾತ್ರಿಯಲ್ಲಿ ಸುಧಾ ತನ್ನ ಮೊದಲ ಮದುವೆಯಲ್ಲಾದ ಕಹಿ ಅನುಭವಗಳ ಬಗ್ಗೆ ಸೃಜನ್ ಜೊತೆ ಹಂಚಿಕೊಂಡಿದ್ದಾಳೆ.

35
ಶಕುಂತಲಾ ಕುತಂತ್ರ

ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಸೃಜನ್ ಪಾತ್ರ ಪರಿಚಯವಾದಾಗಲೇ ಸುಧಾಗೆ ಒಳ್ಳೆಯ ಜೋಡಿ ಎಂದು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆದ್ರೆ ಸುಧಾ ಒಂದು ಮಗುವಿನ ತಾಯಿ ಮತ್ತು ಕೋಟ್ಯಧೀಶ ಗೌತಮ್ ದಿವಾನ್ ತಂಗಿಯಾಗಿದ್ದಳು. ಹಾಗಾಗಿ ಇಬ್ಬರ ನಡುವೆ ಹೇಗೆ ಪ್ರೇಮಾಂಕುರವಾಗುತ್ತೆ? ಮದುವೆಗೆ ದಿವಾನ್ ಕುಟುಂಬ ಒಪ್ಪಿಕೊಳ್ಳುತ್ತಾ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿತ್ತು. ಇದೀಗ ಸೀರಿಯಲ್ ಖಳನಾಯಕಿ ಶಕುಂತಲಾ ಕುತಂತ್ರದಿಂದಲೇ ಸುಧಾ ಮತ್ತು ಸೃಜನ್ ಮದುವೆ ನಡೆದಿದೆ.

45
ಅಭಿಮಾನಿಗಳ ಆಸೆ ಈಡೇರಿಸಿದ ನಟಿ ಮೇಘಾ

ಸೃಜನ್ ಮತ್ತು ಸುಧಾ ಪ್ರೋಮೋ ಬಿಡುಗಡೆಯಾದಾಗೆಲ್ಲಾ ಇಬ್ಬರ ಮದುವೆ ಯಾವಾಗ? ಇಬ್ಬರನ್ನು ಗಂಡ-ಹೆಂಡತಿಯನ್ನಾಗಿ ನಾವು ನೋಡೋದು ಯಾವಾಗ? ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದರು. ಇದೀಗ ಸೃಜನ್ ಜೊತೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸುಧಾ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ.

55
ಮೇಘಾ ಮತ್ತು ಪ್ರವೀಣ್ ಜೋಡಿ

ನಟಿ ಮೇಘಾ ಅವರೇ ಸುಧಾ ಪಾತ್ರದಲ್ಲಿ ನಟಿಸುವ ಮೂಲಕ ಕರುನಾಡಿನ ಮನೆ ಮಗಳಾಗಿದ್ದಾರೆ. ಇನ್ನು ಸೃಜನ್ ಪಾತ್ರದಲ್ಲಿ ಪ್ರವೀಣ್ ಕೆಪಿ ನಟಿಸುತ್ತಿದ್ದಾರೆ. ತೆರೆಯ ಮೇಲೆ ಮೇಘಾ ಮತ್ತು ಪ್ರವೀಣ್ ಜೋಡಿ ಅದ್ಭುತವಾಗಿ ಕಾಣಿಸುತ್ತಿದ್ದು, ವೀಕ್ಷಕರು ಸಹ ಮೆಚ್ಚಿಕೊಂಡಿದ್ದಾರೆ. ಪ್ರವೀಣ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಮೇಘಾ, ಸುಧಾ ಮತ್ತು ಸೃಜನ್ ಮದುವೆಯಾಗುವುದನ್ನು ನೋಡಲು ಬಯಸುತ್ತಿದ್ದವರಿಗೆ ಈ ಫೋಟೋಗಳು. ಕೊನೆಗೂ ಅವರಿಬ್ಬರ ಫೋಟೋ ಇಲ್ಲಿದೆ ನೋಡಿ ಎಂದು ಬರೆದುಕೊಂಡಿದ್ದಾರೆ.

Read more Photos on
click me!

Recommended Stories