ಅಬ್ಬಬ್ಬಾ... ವೈಷ್ಣವಿ ಗೌಡ ಸೀರೆ ಲುಕ್ ನೋಡಿ ಚೌತಿಯ ಚಂದ್ರ, ಸ್ವರ್ಗದ ಇಂದ್ರನಿಗೆ ಹೋಲಿಸಿ ಕವನ ಬರೆದ ಫ್ಯಾನ್‌!

Published : Mar 09, 2024, 04:16 PM IST

ಕನ್ನಡ ಕಿರುತೆರೆ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸು ಗೆದ್ದಿರುವ ಚೆಲುವೆ ನಟಿ ವೈಷ್ಣವಿ ಗೌಡ ಅವರು ಈಗ ಸೀತಾರಾಮ ಸೀರಿಯಲ್ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದು, ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.  

PREV
17
ಅಬ್ಬಬ್ಬಾ... ವೈಷ್ಣವಿ ಗೌಡ ಸೀರೆ ಲುಕ್ ನೋಡಿ ಚೌತಿಯ ಚಂದ್ರ, ಸ್ವರ್ಗದ ಇಂದ್ರನಿಗೆ ಹೋಲಿಸಿ ಕವನ ಬರೆದ ಫ್ಯಾನ್‌!

ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಸೀರಿಯಲ್ ಮೂಲಕ ದೊಡ್ಡಮಟ್ಟದಲ್ಲಿ ಹೆಸರು ಗಳಿಸಿದರು. ಇದಾದ ನಂತರ ನಟಿ ಬಿಗ್​ಬಾಸ್​ಗೂ ಹೋಗಿದ್ದರು. ಆದಾಗಿ ನಟಿಗೆ ಸೀತಾರಾಮ ಧಾರವಾಹಿಯ ಅವಕಾಶ ಸಿಕ್ಕಿದೆ. ಸದ್ಯ ಈ ಧಾರಾವಾಹಿ ತುಂಬಾ ಯಶಸ್ವಿಯಾಗಿಯೇ ಸಾಗುತ್ತಿದೆ.

 

27

ಸೀರಿಯಲ್‌ ಆಚೆಗೂ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ನಟಿ ವೈಷ್ಣವಿ ಗೌಡ. ಅದರಂತೆ ವೈಷ್ಣವಿ ಗೌಡ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಶಿವರಾತ್ರಿ ಪ್ರಯುಕ್ತ ಸ್ಲೀವ್‌ಲೆಸ್‌ ಬ್ಲೌಸ್‌, ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದ್ದಾರೆ. 

37

ಇನ್‌ಸ್ಟಾಗ್ರಾಂನಲ್ಲಿ ವೈಷ್ಣವಿ ಫೋಟೋಶೇರ್‌ ಮಾಡುತ್ತಿದ್ದಂತೆ, ಅವರ ಫ್ಯಾನ್ಸ್‌ ತರಹೇವಾರಿ ಕಾಮೆಂಟ್‌ಗಳ ಮೂಲಕ ಅವರಿಗೆ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. ಕವಿತೆಗಳ ಮೂಲಕವೂ ನಟಿಯನ್ನು ವರ್ಣಿಸುತ್ತಿದ್ದಾರೆ.

47

ನಿನ್ನ ಚೆಲುವಿಗೆ ನಕ್ಕಾನು ಚೌತಿಯ ಚಂದ್ರ, ಸ್ವರ್ಗದ ಬಾಗಿಲು ತೆರೆದಾನು ಆ ಇಂದ್ರ ಎಂದು ನಟಿಯನ್ನು ಕವನದ ಸಾಲುಗಳ ಮೂಲಕ ವರ್ಣಿಸುತ್ತಿದ್ದಾರೆ ಅವರ ಫ್ಯಾನ್ಸ್‌. ಜೊತೆಗೆ ಮುದ್ದಾದ ರಾಜಕುಮಾರಿ, ಬೊಂಬೆ ಹುಡುಗಿ, ಡಿಂಪಲ್ ರಾಣಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

57

ಬಹುಮುಖ ಪ್ರತಿಭೆಯಾಗಿರುವ ವೈಷ್ಣವಿ ಗೌಡ ಅವರು, ಭರತನಾಟ್ಯಾಂ, ಕೂಚಿಪೂಡಿ, ಬೆಲ್ಲಿ ಡ್ಯಾನ್ಸ್ ನ ಕರಗತ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಹಾಡು ಹೇಳುತ್ತಾರೆ, ಯೋಗ ಮಾಡುತ್ತಾರೆ. ಸುಮ್ಮನೆ ಸಮಯ ಹಾಳು ಮಾಡಲು ಬಯಸದ ವೈಷ್ಣವಿ, ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ. 
 

67

ಬಹುಕೃತ ವೇಷಂ ಸಿನಿಮಾದಲ್ಲಿ ನಟಿಸಿರುವ ವೈಷ್ಣವಿ ಅವರು ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾರಾಮ ಧಾರಾವಾಹಿಯಲ್ಲಿ ಪುಟ್ಟ ಮಗುವಿನ ತಾಯಿ ಪಾತ್ರವನ್ನು ನಿರ್ವಹಿಸುತ್ತಿರುವ ವೈಷ್ಣವಿ ಅವರಿಗೆ ಖುಷಿ ಇದೆ. 

77

ವೈಷ್ಣವಿ ಅವರಿಗೆ ಶೂಟಿಂಗ್ ಇಲ್ಲ ಎಂದರೆ, ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುತ್ತಾರೆ. ಅಲ್ಲಿನ ಆಹಾರ ಸವಿದು ಯೂಟ್ಯೂಬ್ ನಲ್ಲಿ ಹಾಕುತ್ತಾರೆ. ಮೇಕಪ್, ಸ್ಟೈಲಿಶ್ ಲುಕ್, ಹೀಗೆ ಏನಾದರೂ ಒಂದರ ವಿಡಿಯೋ ಮಾಡುತ್ತಿರುತ್ತಾರೆ. 

Read more Photos on
click me!

Recommended Stories