ಬಾಯ್‌ಫ್ರೆಂಡ್ ಕರಣ್ ಶರ್ಮಾ ಜೊತೆ ಹಸೆಮಣೆ ಏರಿದ ನಾಗಿನಿ ನಟಿ ಸುರಭಿ ಚಂದನಾ

First Published | Mar 6, 2024, 2:06 PM IST

ಹಿಂದಿಯ ನಾಗಿಣಿ ಸೀರಿಯಲ್ ನಟಿ ಸುರಭಿ ಚಂದನಾ ಅವರು ತಮ್ಮ ಬಹುಕಾಲದ ಗೆಳೆಯ ಕರಣ್ ಶರ್ಮಾ ಜೊತೆ ಜೈಪುರದಲ್ಲಿ ಹಸೆಮಣೆ ಏರಿದ್ದು, ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. 
 

ಹಿಂದಿ ಸೀರಿಯಲ್ ನಟಿ ಸುರಭಿ ಚಂದನಾ ಅವರು ತಮ್ಮ ಬಹುಕಾಲದ ಗೆಳೆಯ ಕರಣ್ ಶರ್ಮಾ ಜೊತೆ ಜೈಪುರದಲ್ಲಿ ಹಸೆಮಣೆ ಏರಿದ್ದು, ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. 

ಇಷ್ಕ್‌ಬಾಜ್ ಸೀರಿಯಲ್‌ನಿಂದ ಸಖತ್ ಫೇಮಸ್ ಆಗಿರುವ ಸುರಭಿ ಚಂದನಾ ಅವರು ಮಾರ್ಚ್‌ 2ರಂದೇ ಕರಣ್ ಶರ್ಮಾ ಜೊತೆ ಸಪ್ತಪದಿ ತುಳಿದಿದ್ದಾರೆ. ಜೈಪುರದ  ಚೋಮು ಜಿಲ್ಲೆಯಲ್ಲಿರುವ ಚೋಮು ಪ್ಯಾಲೇಸ್ ಹೊಟೇಲ್‌ನಲ್ಲಿ ಈ ಅದ್ದೂರಿ ವಿವಾಹ ನಡೆದಿದೆ.

Tap to resize

ಸುರಭಿ ತಮ್ಮ ಮದುವೆಯಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡುತ್ತಾ ಹಸೆಮಣೆಗೆ ಬಂದಿದ್ದು, ಅದರ ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಫೋಟೋಗಳು ಫೋಸ್ಟ್ ಆಗುತ್ತಿದ್ದಂತೆ ನವ ಜೋಡಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

Surabhi Chandna

ಸುರಭಿ ಚಂದನಾ ಅವರ ಸ್ನೇಹಿತರಾದ ಮಾನ್ಸಿ, ಶ್ರೇನು ಪರಿಕ್ ಕೂಡ ಮದುವೆಯ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು,  ಇದರಲ್ಲಿ ಮೈ ನೇ ಪ್ಯಾರ್ ಕಿಯಾ ತಾ ಹಾಡಿಗೆ ವಧು ಡಾನ್ಸ್‌ ಮಾಡುತ್ತಾ ಮದ್ವೆ ಮನೆ ಪ್ರವೇಶಿಸುವುದನ್ನು ಕಾಣಬಹುದು.

ತಮ್ಮ ಮದುವೆಯ ವಿಶೇಷ ದಿನಕ್ಕಾಗಿ ಸುರಭಿ ವಿಭಿನ್ನವೆನಿಸಿದ  ಭಾರಿ ಅಂಬ್ರಾಯಿಡರಿ ಹಾಗೂ ಸ್ಟೋನ್ ವರ್ಕ್ ಇರುವ ಮಿಶ್ರ ಬಣ್ಣದ ಲೆಹೆಂಗಾ ಧರಿಸಿದ್ದಾರೆ. 

Surabhi Chandna

ಅದಕ್ಕೆ ಮ್ಯಾಚ್ ಆಗುವಂತೆ ಬೂದಿ ಕಲರ್ ಬಣ್ಣದ ಅದ್ದೂರಿ ಶೆರ್ವಾನಿಯಲ್ಲಿ ನಟ ಕರಣ್‌ ಶರ್ಮಾ ಮಿಂಚಿದ್ದಾರೆ. ನವಜೋಡಿಯ ಸುಂದರ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

ಸುರಭಿ ಚಂದನಾ ಹಾಗೂ ಕರಣ್ ಶರ್ಮಾ ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಯಾವತ್ತೂ ಮಾಧ್ಯಮಗಳ ಮುಂದೆ ತಮ್ಮ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ, ಆದರೆ ಗೆಳೆಯ ಕರಣ್ ಜೊತೆ ಸದಾ ಫೋಟೋಗಳನ್ನುಸುರಭಿ ಪೋಸ್ಟ್  ಮಾಡುತ್ತಿದ್ದರು.  ಮದುವೆಗೆ ಕೆಲ ತಿಂಗಳಿರುವಾಗ ಕರಣ್ ಅವರನ್ನು ತಮ್ಮ ಸಂಗಾತಿ ಎಂದು ಸುರಭಿ ಪರಿಚಯಿಸಿದ್ದರು.

Latest Videos

click me!