ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ಅಮೂಲ್ ಬೇಬಿ ಕಾರ್ತಿಕ್ ಪಾತ್ರದಲ್ಲಿ ನಟಿಸುತ್ತಿರುವ ನಟ ಸಾಗರ್ ಬಿಳಿಗೌಡ (Sagar Bili Gowda), ಸದ್ಯ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ.
ಕಳೆದ ವರ್ಷ ಅಂದ್ರೆ 2023ರಲ್ಲಿ ಸಾಗರ್, ತಮ್ಮ ಗೆಳತಿ ಹಾಗೂ ನಟಿಯಾಗಿರುವ ಸಿರಿ ರಾಜು (Siri Raju) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೆ ಮೊದಲ ವರ್ಷದ ಆನಿವರ್ಸರಿ ಸಂಭ್ರಮಿಸಿದ್ದ ಜೋಡಿ ಇದೀಗ ಪೋಷಕರಾಗುವ ಸಂಭ್ರಮದಲ್ಲಿದ್ದಾರೆ.
ತುಂಬು ಗರ್ಭಿಣಿಯಾಗಿರುವ ಸಾಗರ್ ಪತ್ನಿ ಸಿರಿ ರಾಜು ಅವರ ಸೀಮಂತೋತ್ಸವ (baby shower) ಅದ್ಧೂರಿಯಾಗಿ ಜರುಗಿದ್ದು, ಸೀಮಂತೋತ್ಸವ ಸಂಭ್ರಮದ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
ಸಿರಿ ತಿಳಿ ಹಸಿರು ಬಣ್ಣದ ಸೀರೆ ಜೊತೆಗೆ ಅದಕ್ಕೆ ಕಾಂಟ್ರಾಸ್ಟ್ ಆಗಿರುವ ನೇರಳೆ ಬಣ್ಣದ ಬ್ಲೌಸ್ ಧರಿಸಿದ್ದು, ಅವರ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣಿಸುತ್ತಿತ್ತು. ಇನ್ನು ಸಾಗರ್ ವೈಟ್ ಆಂಡ್ ವೈಟ್ ಕುರ್ತಾ, ಪ್ಯಾಂಟಿನಲ್ಲಿ ಮಿಂಚುತ್ತಿದ್ದರು.
ಜನವರಿಯಲ್ಲಿ ಸಾಗರ್ ಮತ್ತು ಸಿರಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ(Social media) ಪ್ರೆಗ್ನೆನ್ಸಿ ಫೋಟೊಗಳನ್ನು ಶೆರ್ ಮಾಡುವ ಮೂಲಕ ತಾವು ತಂದೆ ತಾಯಿಯಾಗುತ್ತಿರುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.
ಸೀಮಂತ ಕಾರ್ಯಕ್ರಮಕ್ಕೆ ಗೀತಾ ಸೀರಿಯಲ್ ನಟಿ ಭವ್ಯ ಗೌಡ, ಮತ್ತು ಇತರ ನಟಿಯರಾದ ನಿಧಿ ಗೌಡ, ದೀಪಿಕಾ ಆರಾಧ್ಯಾ ಮೊದಲದವರು ಆಗಮಿಸಿದ್ದರು. ಇನ್ನು ಅಭಿಮಾನಿಗಳು ಸಹ ಬೇಬಿ ಬರುವ ಖುಷಿಯಲ್ಲಿರುವ ಮೂಲ್ ಬೇಬಿಗೆ ವಿಶ್ ಮಾಡಿದ್ದಾರೆ.
ಸಾಗರ್ ಸದ್ಯ ಸತ್ಯ ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಪತ್ನಿ ಸಿರಿ ರಾಜು ಸಹ ನಟಿಯಾಗಿದ್ದು, ಕನ್ನಡ ಮತ್ತು ತೆಲುಗು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡ ಸಿನಿಮಾದಲ್ಲಿ ಸಿರಿ ಮಿಂಚಿದ್ದಾರೆ.