ದಕ್ಷಿಣ ಭಾರತದ ಮೊದಲ ಫೀಮೇಲ್ ಬ್ಯಾಂಡ್ ಗೆ 10 ವರ್ಷ: ರೆಮೋ ರೇಖಾ ಸಕ್ಸಸ್ ಸ್ಟೋರಿ

First Published Mar 13, 2023, 5:14 PM IST

ಕನ್ನಡ ಚಿತ್ರರಂಗ, ಕಿರುತೆರೆಗೆ ಚಿರಪರಿಚಿತ ಹೆಸರು ಅಂದ್ರೆ ಅದು ರೆಮೋ ಅವರದ್ದು. ರೇಖಾ ಮೋಹನ್ ಆಗಿದ್ದವರು ಇದೀಗ ರೆಮೋ ರೇಖಾ ಆಗಿ ಕನ್ನಡ ಅಭಿಮಾನಿಗಳಿಗೆ ತುಂಬಾನೆ ಹತ್ತಿರವಾಗಿದ್ದಾರೆ. ಅವರ ಲೈಫ್ ಸ್ಟೋರಿ, ಸಕ್ಸಸ್ ಸ್ಟೋರಿ ಬಗ್ಗೆ ತಿಳಿಯೋಣ ಬನ್ನಿ. 

ರೆಮೋ ರೇಖಾ ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ (Kannada film Industry) ಗುರುತಿಸಿಕೊಂಡು ಬಂದಿದ್ದರೂ ಅವರು ಹೆಚ್ಚು ಜನಪ್ರಿಯತೆ ಪಡೆದದ್ದು, ಕನ್ನಡದ ಮಜಾ ಟಾಕೀಸ್ ಮೂಲಕವೇ. ಮಜಾ ಟಾಕೀಸ್ ನಲ್ಲಿ ರೆಮೋ ಹಾಡು ಹೇಳುತ್ತಾ, ಆವಾಗವಾಗ ಸೃಜನ್ ಅವರ ಕಾಲೆಳೆಯುತ್ತಾ, ಸೃಜನ್‌ನಿಂದ ಕಾಲು ಎಳೆಸಿಕೊಳ್ಳುತ್ತಾ, ತಮ್ಮ ಹಾಸ್ಯದಿಂದಲೂ ಪ್ರಸಿದ್ದಿ ಪಡೆದಿದ್ದರು. ಇವರ ಫೀಮೇಲ್ ಬ್ಯಾಂಡ್ ಬಗ್ಗೆ ನೀವು ತಿಳಿಯಲೇಬೇಕು. 

ಸೆಪ್ಟೆಂಬರ್ 4 1981ರಲ್ಲಿ ಮಂಗಳಾ ಹಾಗೂ ಅಂಜನ್ ಕುಮಾರ್ ದಂಪತಿ ಮಗಳಾಗಿ ರೇಖಾ ಜನಿಸಿದರು. ಇವರ ತಾಯಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಗಾಯಕಿ ಮಂಗಳಾ. ಇನ್ನು ರೇಖಾರ ತಂದೆ ಅಂಜನ್ ಕುಮಾರ್ ಸ್ವಂತದ್ದೊಂದು ಆರ್ಕೆಸ್ಟ್ರಾ ಇಟ್ಟುಕೊಂಡಿದ್ದರು. ಇದರಿಂದಾಗಿಯೇ ಅವರು ಬಾಲ್ಯದಲ್ಲಿಯೇ ಸಂಗೀತದ ಕಡೆಗೆ ಒಲವು ಬೆಳೆಸಿಕೊಂಡರು. 

ರೇಖಾ ಎಳೆಯ ವಯಸ್ಸಿನಲ್ಲೇ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಕನ್ನಡದ ಚಿನ್ನಾರಿ ಮುತ್ತ (Chinnari Mutta) ಚಿತ್ರದ ‘ರೆಕ್ಕೆ ಇದ್ದರೆ ಸಾಕೇ’, ‘ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು’ ಅನ್ನುವ ಎವರ್​ಗ್ರೀನ್ ಗೀತೆ ಹಾಡಿದ್ದು, ಇದೇ ರೆಮೋ. ತಮ್ಮ ಮೂರನೆಯ ವಯಸ್ಸಿನಲ್ಲಿಯೇ ಹಾಡುಗಾರಿಕೆ ಆರಂಭಿಸಿದ ರೇಖಾ ಮಕ್ಕಳ ಸಾಕ್ಷಿ, ರಕ್ಷಕರೇ ಭಕ್ಷಕರು, ಹೃದಯ ಬಂಧನ ಮುಂತಾದ ಚಲನಚಿತ್ರಗಳಲ್ಲಿ ಹಾಡುಗಳನ್ನು ಹೇಳಿದ್ದರು.

ಸಂಗೀತ ಬ್ರಹ್ಮ ಹಂಸಲೇಖ ಅವರನ್ನು ತನ್ನ ಗುರುಗಳೆಂದು ಕರೆಯುವ ರೇಖಾ, ಪ್ರಸಿದ್ಧ ಹಿನ್ನೆಲೆ ಸಂಗೀತಗಾರ ಇಳೆಯರಾಜ, ಆರ್.ಪಿ ಪಟ್ನಾಯಕ್ ಮುಂತಾದವರೊಂದಿಗೆ ಕೋರಸ್‌ನಲ್ಲಿ ಹಾಡಿರುವ ಹೆಗ್ಗಳಿಕೆಯನ್ನು ಸಹ ಹೊಂದಿದ್ದಾರೆ. ನಂತರ ಕೆಲಕಾಲ ಗಾಯನ ಕ್ಷೇತ್ರದಿಂದ ದೂರವಿದ್ದ ರೆಮೋ ಅವರು ಬಳಿಕ ಹರಿಕೃಷ್ಣ ಸಂಗೀತ ನಿರ್ದೇಶನದ ಚಿತ್ರವೊಂದಕ್ಕೆ ಟ್ರ್ಯಾಕ್ ಸಿಂಗರ್ (track singer) ಆಗುವ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ರು.

‘ಮಾಯದಂಥ ಮಳೆ' ಚಿತ್ರದ ಮೂಲಕ ರೆಮೋ ಸ್ವತಂತ್ರ ಸಂಗೀತ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಮಹಿಳಾ ಗಾಯಕಿಯರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಅವರು ಆರಂಭಿಸಿದ್ದೇ ‘‘ರೆಮೋಸ್‌ ಮ್ಯೂಸಿಕ್‌ ಸ್ಪಾರ್ಕ್‌' ಅನ್ನುವ ಮಹಿಳಾ ಬ್ಯಾಂಡ್. ಇವರ ಈ ಬ್ಯಾಂಡ್ 2014ರ ಕೆಐಎಂಎ(ಕೀಮಾ) ಬೆಸ್ಟ್ ಮ್ಯೂಸಿಕ್ ಬ್ಯಾಂಡ್ ಪ್ರಶಸ್ತಿ ಪಡೆದುಕೊಂಡಿದೆ.

2013ರಲ್ಲಿ ರೆಮೋಸ್ ಮ್ಯೂಸಿಕ್ ಸ್ಪಾರ್ಕ್ಸ್ (remos music sparks) ಎಂಬ ಮಹಿಳಾ ಬ್ಯಾಂಡ್ ಆರಂಭಿಸಿದ್ದರು. ಇದು ದಕ್ಷಿಣ ಭಾರತದ ಮೊದಲ ಮ್ಯೂಸಿಕ್ ಬ್ಯಾಂಡ್ (female music band)  ಆಗಿದೆ. ಅವರಿಗೆ ಈ ಬ್ಯಾಂಡ್ ಯೋಚನೆ ಬಂದಿದ್ದು ಕಾಲೇಜು ಕಲಿಯುತ್ತಿದ್ದ ಟೈಮಲ್ಲಂತೆ. ಮಹಿಳೆಯರದ್ದು ಒಂದು ಬ್ಯಾಂಡ್ ಮಾಡಬೇಕೆಂದು ಯೋಚಿಸಿ, ಅಂತಹ ಬ್ಯಾಂಡ್ ಮಾಡಿಯೇ ಬಿಟ್ಟರಂತೆ ರೆಮೋ. ಆದರೆ ಇಂತದ್ದೊಂದು ಪ್ರಯತ್ನ ಯಶಸ್ವಿಯಾಗುತ್ತದೆ ಅನ್ನುವ ನಂಬಿಕೆ ಮಾತ್ರ ತಂಡದ ಸದಸ್ಯರಿಗಿರಲೇ ಇರಲೇ ಇಲ್ಲವಂತೆ. 
 

ರೆಮೋ ತಮ್ಮ ಮೊದಲ ಮ್ಯೂಸಿಕಲ್ ಆಲ್ಬಂ ರಿಲೀಸ್ ಆದ ಈ ಬ್ಯಾಂಡ್ ಲಾಂಚ್ ಮಾಡಿದ್ರಂತೆ, ಮುಂದೆ ಏನಾಗುತ್ತೋ ಎಂದು ಯೋಚಿಸಿದ ಅವರಿಗೆ, ಮಾರನೆಯ ದಿನದ ಪತ್ರಿಕೆಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಬಂದಾಗ ಖುಷಿಯಾಗಿತ್ತಂತೆ. 2014ರಲ್ಲಿ ಕೀಮಾ ಅವಾರ್ಡ್ಸ್ನಲ್ಲಿ 5 ಪ್ರಮುಖ ಬ್ಯಾಂಡ್ಗಳ ಜೊತೆ ರೆಮೋ ಬ್ಯಾಂಡ್ ಪೈಪೋಟಿ ನೀಡಿತ್ತು.  ಆ ಸ್ಫರ್ಧೆಯಲ್ಲಿ ರೆಮೋ ತಂಡ ವಿಜೇತರಾಗಿ ಕೀಮಾ ಅವಾರ್ಡ್ ಪಡೆದರಂತೆ. ಇದೀಗ ಈ ಬ್ಯಾಂಡ್ ಗೆ 10 ವರ್ಷ ತುಂಬಿದ ಸಂತಸದಲ್ಲಿದ್ದಾರೆ, ರೆಮೋ. 

remo

ಇನ್ನು ಇವರ ವೈಯಕ್ತಿಕ ಜೀವನದ (personal life) ಬಗ್ಗೆ ಹೇಳೊದಾದ್ರೆ, ನೋವಿನಿಂದಲೇ ಕೂಡಿದ್ದ ಜೀವನ ಇವರದ್ದು.  ಮನೆಯವರ ವಿರೋಧ ಕಟ್ಟಿಕೊಂಡು ಪ್ರೀತಿಸಿದ ಹುಡುಗನನ್ನು ಮದುವೆ ಆದ ರೆಮೋ ಅವರ ಆ ವೈವಾಹಿಕ ಜೀವನ ಹೆಚ್ಚು ಸಮಯ ಉಳಿಯಲಿಲ್ಲ, ಕಷ್ಟ ಪಟ್ಟಿದ್ದು ಸಾಕು ಎಂದವರು ತಮ್ಮ 5 ವರ್ಷದ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಬಂದಿದ್ದರು. ನಂತರ ಮಗಳಿಗಾಗಿಯೇ ಕಷ್ಟ ಪಟ್ಟು ಹಗಲು ರಾತ್ರಿ ದುಡಿಯುತ್ತಾ, ಇದೀಗ ರೆಮೋ ತಮ್ಮದೇ ಆದ ಮ್ಯೂಸಿಕ್ ಸ್ಟುಡಿಯೋ ತೆರೆಯುವಷ್ಟು ಸಾಧನೆ ಮಾಡಿದ್ದಾರೆ. 

ರೆಮೋ ಸಾಧನೆಗೆ ಸ್ವರಸಾಧಕಿ, ಗಾನಯೋಗಿ ಪಂಚಾಕ್ಷರಿ ಗವಾಯಿ ಪ್ರಶಸ್ತಿ ಸೇರಿದಂತೆ ಅನೇಕ ಮನ್ನಣೆಗಳು ದೊರಕಿದೆ. ಫೇರ್ ಎಂಡ್ ಲವ್ಲೀ, ಡಿಬೇಟ್, ಶ್ರೀ ಸಾಯಿ, ದೇವತೆ ಮುಂತಾದ ಕನ್ನಡದ ಕೆಲವು ಸಿನಿಮಾಗಳಿಗೆ ರೆಮೋ ಸಾಹಿತ್ಯ ರಚಿಸಿದ್ದಾರೆ. ಗೆಳತಿ ಎನ್ನಲೇ, ಬೆಂಗಳೂರು ಹುಡುಗೀರು ಮುಂತಾದ ಮ್ಯೂಸಿಕಲ್ ಆಲ್ಬಂಗಳಿಗೆ ಹಾಡುಗಳನ್ನು ಬರೆದು ಧ್ವನಿಯಾಗಿದ್ದಾರೆ. ಅಷ್ಟೆ ಅಲ್ಲ ಇವರು RK top knotch studio ಎಂಬ ಮ್ಯೂಸಿಕ್ ಸ್ಟುಡಿಯೋ ತೆರೆಯುವ ಮೂಲಕ ಹಲವು ಜನರಿಗೆ ಸ್ಪೂರ್ತಿಯಾಗಿದ್ದಾರೆ. 

click me!