ಕಲರ್ಸ್ ಕನ್ನಡ (Colors Kannada) ವಾಹಿನಿಯೂ ಹೊಸತನ, ಹೊಸ ಕಥೆ ನೀಡೋದರಲ್ಲಿ ಎಂದಿಗೂ ಮುಂದಿದೆ. ಈ ಬಾರಿ ಯುಗಾದಿ ಹಬ್ಬದ ವಿಶೇಷ ಸಂಚಿಕೆಯು ಒಂದು ವಾರಗಳ ಕಾಲ ಪ್ರಸಾರವಾಗಲಿದ್ದು, ಈ ವಿಶೇಷ ಸಂಚಿಕೆಗಳಲ್ಲಿ ವಿಶೇಷ ಅತಿಥಿಗಳು ನಿಮ್ಮ ಮನೆಗೆ ಬರಲಿದ್ದಾರೆ.
ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾಮಾಚಾರಿ, ಭಾಗ್ಯಲಕ್ಷ್ಮಿ, ಅಂತರಪಟ, ಬೃಂದಾವನ, ಶ್ರೀ ಗೌರಿ, ಲಕ್ಷ್ಮೀ ಬಾರಮ್ಮ, ಮೊದಲಾದ ಧಾರಾವಾಹಿಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಇದಕ್ಕೆ ಕರಿಮಣಿ ಮತ್ತು ಚುಕ್ಕಿ ತಾರೆ ಎಂಬ ಹೊಸ ಸೀರಿಯಲ್ ಗಳು ಸಹ ಸೇರಿವೆ.
ಇದೀಗ ಯುಗಾದಿ ವಿಶೇಷ ಸಂಚಿಕೆಗಳ ಮೂಲಕ ಹೊಸ ಅತಿಥಿಗಳನ್ನು ಪ್ರತಿ ಸೀರಿಯಲ್ ನಲ್ಲೂ ಕರೆ ತಂದಿದ್ದಾರೆ. ಯಾರಪ್ಪಾ ಈ ವಿಶೇಷ ಅತಿಥಿಗಳು ಅನ್ನೋ ಪ್ರಶ್ನೆ ನಿಮಗಿದೆಯೇ?. ಇವರು ಬೇರಾರು ಅಲ್ಲ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಹಳೆ ಸೀರಿಯಲ್ ಗಳ ನಾಯಕಿ, ನಾಯಕಿಯರು ಮತ್ತೆ ಅತಿಥಿಗಳಾಗಿ (special guests)ಬರ್ತಿದ್ದಾರೆ.
ಹೌದು, ಈ ಕುರಿತು ಚಾನೆಲ್ ಪ್ರೋಮೋ ರಿಲೀಸ್ ಮಾಡಿದ್ದು, ಇದರಲ್ಲಿ ಚುಕ್ಕಿ ತಾರೆ ಯಾರ್ ಬರ್ತಾರೆ ಗೊತ್ತಾ ಎಂದು ಕೇಳ್ತಿದ್ದಾರೆ, ಇದು ಮುಂದುವರೆದು, ಮನಸ್ಸಿಗೆ ನೆಮ್ಮದಿ ಕೊಡೋರು, ಬದುಕಿಗೆ ಪ್ರೀತಿ ತುಂಬೋರು, ತಪ್ಪನ್ನು ತಿದ್ದೋರು, ಇಲ್ಲದೇ ಇದ್ರೆ ಗುದ್ದೋರು, ನಮಿಗೆ ಬೇಕಾದೋರು, ನಿಮ್ಮೆಲ್ಲರಿಗೂ ಇಷ್ಟವಾಗೋರು, ಇನ್ನು ಮುಂದೆ ಶುರುವಾಗುತ್ತೆ ಎಂದು ಪ್ರೋಮೋ ಸಾಗುತ್ತೆ.
ಪ್ರೋಮೋದಲ್ಲಿ ಕಾಣಿಸಿರೋವಂತೆ ಈ ಹೊಸ ಸಂವತ್ಸರಕ್ಕೆ ಬರೋ ಹೊಸ ಗೆಸ್ಟ್ ಗಳು ಯಾರಪ್ಪಾ ಅಂದ್ರೆ ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ, ರಶ್ಮಿ ಪ್ರಭಾಕರ್ (Rashmi Prabhakar), ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಖ್ಯಾತರಿ, ಅಗ್ನಿ ಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಆಗಮಿಸಲಿದ್ದಾರೆ.
ಅಷ್ಟೇ ಅಲ್ಲ ಗಿಣಿರಾಮ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ (Rithvik Matada), ಮಿಥುನ ರಾಶಿ ಸೀರಿಯಲ್ ನ ವೈಷ್ಣವಿ, ಪದ್ಮಾವತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್ ಆಗಮಿಸಲಿದ್ದಾರೆ. ಈ ನಟ ನಟಿಯರು ಯಾವ ಸೀರಿಯಲ್ ನಲ್ಲಿ ಕಾಣಿಸಲಿದ್ದಾರೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ.
ಇನ್ನು ತಮ್ಮ ನೆಚ್ಚಿನ ನಾಯಕಿ, ನಾಯಕಿಯರನ್ನು ಮತ್ತೆ ತೆರೆ ಮೇಲೆ ನೋಡೋದಕ್ಕೆ ವೀಕ್ಷಕರು ಕಾಯ್ತಾ ಇದ್ದಾರೆ, ಆದ್ರೆ ಹರ್ಷ ಭುವಿ ಬರ್ಲಿ, ಅನಿಕೇತ್ ಮತ್ತು ಮೀರಾ ಮತ್ತೆ ಬರ್ಲಿ ಅಂತಾ ಕೇಳೋರೆ ಜಾಸ್ತಿ ಆಗಿದ್ದಾರೆ.